ETV Bharat / business

ಸತ್ಯ ನಾಡೆಲ್ಲ ವಿಶ್ವದ ನಂಬರ್​ ಒನ್​ ಸಿಇಒ.. ಟಾಟಾದ ಚಂದ್ರಶೇಖರನ್​​ಗೆ 25ನೇ ಸ್ಥಾನ.. ಮುಖೇಶ್​ ಅಂಬಾನಿ ಸ್ಥಾನ ಎಷ್ಟು ಗೊತ್ತಾ?

author img

By

Published : Jan 27, 2022, 7:51 AM IST

Updated : Jan 27, 2022, 9:53 AM IST

ಬ್ರಾಂಡ್​ ಫೈನಾನ್ಸ್​​​​​​​​​​​ ವಿಶ್ವದ ಟಾಪ್​ ಸಿಇಒಗಳ ಲಿಸ್ಟ್​ ಅನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಮೈಕ್ರೋಸಾಫ್ಟ್​​ನ ಸತ್ಯ ನಾಡೆಲ್ಲ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಸತ್ಯ ನಾಡೆಲ್ಲ ವಿಶ್ವದ ನಂಬರ್​ ಒನ್​ ಸಿಇಒ... ಟಾಟಾದ ಚಂದ್ರಶೇಖರನ್​​ಗೆ 25ನೇ ಸ್ಥಾನ

ನ್ಯೂಯಾರ್ಕ್( ಅಮೆರಿಕ) ಮೈಕ್ರೋಸಾಫ್ಟ್​​ನ ಚೀಫ್​ ಎಕ್ಸಿಕ್ಯುಟಿವ್​ ಆಫೀಸರ್​​​ ಸತ್ಯ ನಾಡೆಲ್ಲ ವಿಶ್ವದ ನಂಬರ್​ ಒನ್​ ಸಿಇಒ ಎಂಬ ಬಿರುದನ್ನು ಪಡೆದಿದ್ದಾರೆ. ಈ ಮೂಲಕ ಭಾರತ ಮೂಲದ ನಾಡೆಲ್ಲ ಮತ್ತೊಂದು ಸಾಧನೆ ಮಾಡಿದ್ದಾರೆ. ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ ಅವರು ಈ ಶ್ರೇಣಿಗೆ ಭಾಜನರಾಗಿದ್ದಾರೆ.

ಗೂಗಲ್‌ನ ಸುಂದರ್ ಪಿಚೈಗೆ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ ಐದನೇ ಸ್ಥಾನ

ಅಮೆರಿಕದ ವಲಸಿಗ ಭಾರತೀಯರಾಗಿರುವ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌ನ ಭವಿಷ್ಯವನ್ನು ಉನ್ನತೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕಂಪನಿಯ ಸಂಸ್ಕೃತಿ, ಟೀಮ್‌ವರ್ಕ್, ನಾವೀನ್ಯತೆ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಹೆಚ್ಚಿಸಿ ಆ ಮೂಲಕ ವ್ಯವಹಾರದ ಬೆಳವಣಿಗೆಗೆ ಕಾರಣವಾಗಿರುವ ನಾಡೆಲ್ಲ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಡೋಬ್‌ನ ಶಾಂತನು ನಾರಾಯಣ್ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ 6ನೇ ಸ್ಥಾನ

ನಾಡೆಲ್ಲ ಅಷ್ಟೇ ಅಲ್ಲ ಇನ್ನೂ ಹಲವರಿಗೆ ಸ್ಥಾನ: ನಾಡೆಲ್ಲ ಅಷ್ಟೇ ಅಲ್ಲ ಭಾರತೀಯ ಮೂಲದ ಇನ್ನೂ ಹಲವರು ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ ಸ್ಥಾನ ಪಡೆದ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದಾರೆ. ಗೂಗಲ್‌ನ ಸುಂದರ್ ಪಿಚೈ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದರೆ, ಅಡೋಬ್‌ನ ಶಾಂತನು ನಾರಾಯಣ್ 6 ನೇ ಸ್ಥಾನದಲ್ಲಿದ್ದಾರೆ ಮತ್ತು ಡೆಲಾಯ್ಟ್‌ನ ಪುನೀತ್ ರೆಂಜನ್ 14 ನೇ ಸ್ಥಾನದಲ್ಲಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಭಾರತೀಯ ಕಂಪನಿಗಳದ್ದೂ ಮೇಲುಗೈ: ಈ ಪಟ್ಟಿಯಲ್ಲಿ ಟಾಟಾದ ಎನ್. ಚಂದ್ರಶೇಖರ್ 25 ನೇ ಸ್ಥಾನದಲ್ಲಿದ್ದರೆ, ಮಹಿಂದ್ರಾ & ಮಹಿಂದ್ರಾದ ಆನಂದ್ ಮಹೀಂದ್ರ ಮತ್ತು ರಿಲಯನ್ಸ್‌ನ ಮುಖೇಶ್ ಅಂಬಾನಿ ಕ್ರಮವಾಗಿ 41 ಮತ್ತು 42 ನೇ ಸ್ಥಾನದಲ್ಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಿನೇಶ್ ಕುಮಾರ್ 46ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಡೆಲಾಯ್ಟ್‌ನ ಪುನೀತ್ ರೆಂಜನ್​ಗೆ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ 14ನೇ ಸ್ಥಾನ

3 ಟ್ರಿಲಿಯನ್​​​​​​ ಮಾರುಕಟ್ಟೆ ಮೌಲ್ಯದ ಹೊಂದಿದ ಆಪಲ್​: ಬ್ರ್ಯಾಂಡ್ ಫೈನಾನ್ಸ್ ಶ್ರೇಯಾಂಕದ ಟಾಪ್ 10 ಟೆಕ್ ಮತ್ತು ಮಾಧ್ಯಮ ವಲಯಗಳಿಂದ ಸಿಇಒಗಳು ಇಂತಿದ್ದಾರೆ. ಟಿಮ್ ಕುಕ್ ಎರಡನೇ ಸ್ಥಾನ ಅಲಂಕರಿಸಿದ್ದರೆ. ಆಪಲ್ ಕಂಪನಿ 3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಮುಟ್ಟುವ ಮೂಲಕ ಕುಕ್​ ಎರಡನೇ ಸ್ಥಾನವನ್ನು ಅಲಂಕರಿಸುವಲ್ಲಿ ಕುಕ್​ ಯಶಸ್ವಿಯಾಗಿದ್ದಾರೆ. ಇನ್ನು ಟೆನ್ಸೆಂಟ್‌ನ ಹುವಾಟೆಂಗ್ ಮಾ 4, ಪಿಚೈ 5 ಮತ್ತು ನೆಟ್‌ಫ್ಲಿಕ್ಸ್‌ನ ರೀಡ್ ಹೇಸ್ಟಿಂಗ್ಸ್ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಮಹಿಂದ್ರಾದ ಆನಂದ್ ಮಹೀಂದ್ರ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ 41ನೇ ಸ್ಥಾನ

ಲಿಸ್ಟ್​​ನಲ್ಲಿರುವ ಅಗ್ರ ಶ್ರೇಯಾಂಕಿತ ಮಹಿಳಾ ಸಿಇಒ: ಎಎಮ್‌ಡಿ ಸಿಇಒ ಲಿಸಾ ಸು 10 ನೇ ಸ್ಥಾನದಲ್ಲಿದ್ದು, ಇವರು ಮಹಿಳಾ ವಿಭಾಗದ ಅಗ್ರ ಶ್ರೇಯಾಂಕಿತ ಮಹಿಳಾ ಸಿಇಒ ಆಗಿ ಪ್ರವೇಶ ಪಡೆದುಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಎಎಂಡಿ ಕಂಪನಿ ಶೇ 122 ರಷ್ಟು ಬ್ರಾಂಡ್​ ವ್ಯಾಲ್ಯೂ ಹೊಂದುವ ಮೂಲಕ ಹೆಚ್ಚಿನ ಸಾಧನೆ ಮಾಡಿದೆ. ಈ ಕಾರಣಕ್ಕಾಗಿಯೇ ಪಟ್ಟಿಯಲ್ಲಿ ಸು 10ನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನು ಓದಿ:ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ : ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಹೇಳಿದ್ರು ಈ ಮಾತು!

ರಿಲಯನ್ಸ್‌ನ ಮುಖೇಶ್ ಅಂಬಾನಿ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕ 42ನೇ ಸ್ಥಾನ

ಬ್ರಾಂಡ್​ ಫೈನಾನ್ಸ್​​ ಗ್ಲೋಬಲ್​ 500 - 2022ರ ಶ್ರಯಾಂಕದಲ್ಲಿ ಅಮೆರಿಕ ಮತ್ತು ಚೀನಾದ ಉದ್ಯಮಿಗಳು ಪಾರಮ್ಯ ಮೆರೆದಿದ್ದಾರೆ. ಟಾಪ್​ 500ರ ಪಟ್ಟಿಯಲ್ಲಿ ಅಮೆರಿಕದ 101 ಉದ್ಯಮಿಗಳು ಸ್ಥಾನ ಪಡೆದಿದ್ದರೆ, ಚೀನಾದಿಂದ 47 ಸಿಇಒಗಳು ಅಂದರೇ ಶೇ 19 ರಷ್ಟು ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಈ ಎರಡು ದೇಶಗಳ ಕಂಪನಿಗಳ ಸಿಇಒಗಳು ಪ್ರಮುಖ ವಲಯಗಳನ್ನು ಮುನ್ನಡೆಸುತ್ತಿದ್ದಾರೆ.

ಟಾಟಾದ ಎನ್. ಚಂದ್ರಶೇಖರನ್​ಗೆ ಬ್ರಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಸೂಚ್ಯಂಕದಲ್ಲಿ 25ನೇ ಸ್ಥಾನ

ಮೂರನೇ ಸ್ಥಾನದಲ್ಲಿ ಆಟೋಮೊಬೈಲ್ಸ್​​​​ನ ಗ್ರೇಟ್ ವಾಲ್‌ನ ಜಿಯಾನ್‌ಜುನ್ ವೀ ಇದ್ದಾರೆ. ಪ್ರೊಗ್ರೆಸಿವ್​ ವಿಮೆಯ ಪೆಟ್ರೀಷಿಯಾ ಗ್ರಿಫಿತ್ 11ನೇ ಸ್ಥಾನದಲ್ಲಿದ್ದರೆ. ಮೌಟೈ ಸ್ಪಿರಿಟ್ಸ್‌ನ ಕ್ಸಿಯಾಂಗ್‌ಜುನ್ ಡಿಂಗ್ 12ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಸ್ಟೇಟ್ ಗ್ರಿಡ್ ಯುಟಿಲಿಟೀಸ್‌ನ ಬಾವೊನ್ ಕ್ಸಿನ್ ಪಟ್ಟಿಯಲ್ಲಿ 13 ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಇನ್ನು ಬ್ಯಾಂಕ್​ ಆಫ್​ ಅಮೆರಿಕದ ಬ್ರಿಯಾನ್ ಮೊಯ್ನಿಹಾನ್ 16 ನೇ ಸ್ಥಾನದಲ್ಲಿದ್ದರೆ, ಪೆಪ್ಸಿಯ ರಾಮನ್ ಲಾಗ್ವಾರ್ಟಾ 17 ನೇ ಸ್ಪಾಟ್​​ನಲ್ಲಿದ್ದಾರೆ. ಅಮೆಜಾನ್‌ನ ಆಂಡಿ ಜಾಸ್ಸಿ 23 ನೇಸ್ಥಾನಕ್ಕೆ ಕುಸಿದಿದ್ದಾರೆ. ಚೀನಾ ಅಮೆರಿಕವನ್ನ ಹೊರತುಪಡಿಸಿ, ಟಾಪ್​ ಶ್ರೇಣಿಯನ್ನು ಪಡೆದಿರುವ ಸಿಇಒ ಎಂದರೆ ಅದು ಯುಎಇಎ ADNOC ಕಂಪನಿಯ ಸಿಇಒ ಸುಲ್ತಾನ್​ ಅಲ್​ ಜಬರ್​ 15 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲ ಎಮಿರೇಟ್ಸ್‌ನ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೌಮ್ 34 ನೇ ಮತ್ತು ಎಟಿಸಲಾತ್‌ನ ಹ್ಯಾಟೆಮ್ ದೋವಿದರ್ 79 ನೇ ಸ್ಥಾನ ಪಡೆದುಕೊಂಡು ಚೀನಾ ಮತ್ತು ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದಾರೆ.

ಆಪಲ್​ ವಿಶ್ವದ ಅತ್ಯಮೂಲ್ಯ ಬ್ರಾಂಡ್​: $355.1 ಶತಕೋಟಿ ಮೌಲ್ಯ ಹೊಂದಿರುವ ಆಪಲ್ ವಿಶ್ವದ ಅತ್ಯಮೂಲ್ಯ ಬ್ರ್ಯಾಂಡ್‌ನ ಶೀರ್ಷಿಕೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ . ಬ್ರಾಂಡ್​ ಫೈನಾನ್ಸ್ ಗ್ಲೋಬಲ್ 500 ಶ್ರೇಯಾಂಕದಲ್ಲಿ ದಾಖಲಾದ ಅತ್ಯಧಿಕ ಮೌಲ್ಯದ ಬ್ರಾಂಡ್​ ಕಂಪನಿ ಎಂದರೆ ಅದು ಆಪಲ್​ ಮಾತ್ರವೇ ಆಗಿದೆ.

ಐಫೋನ್ ಈ ಬ್ರ್ಯಾಂಡ್‌ನ ಅರ್ಧದಷ್ಟು ಮಾರಾಟವನ್ನು ಹೊಂದಿದೆ. ಆದಾಗ್ಯೂ, ಈ ವರ್ಷ ಆಪಲ್ ಹೊಸ ಪೀಳಿಗೆಯ ಐಪ್ಯಾಡ್‌ಗಳು, ಐಮ್ಯಾಕ್‌ಗೆ ಕೂಲಂಕುಷ ಪರೀಕ್ಷೆ ಮತ್ತು ಏರ್‌ಟ್ಯಾಗ್‌ಗಳ ಪರಿಚಯದೊಂದಿಗೆ ತನ್ನ ಇತರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಗಮನವನ್ನು ನೀಡಿದೆ. Apple Pay ನಿಂದ Apple TV ವರೆಗಿನ ಅದರ ಸೇವೆಗಳ ಶ್ರೇಣಿಯು ಬ್ರ್ಯಾಂಡ್‌ನ ಯಶಸ್ಸಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ವರದಿ ಎತ್ತಿ ತೋರಿಸಿದೆ.

ಇದನ್ನು ಓದಿ:ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!

Last Updated : Jan 27, 2022, 9:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.