ನವದೆಹಲಿ: ಗ್ರಾಮೀಣ ಭಾರತದ ಕೃಷಿಗೆ ಹಣಕಾಸು ಸೇವೆಯನ್ನು ಕಾರ್ಯಗತಗೊಳಿಸಿಕೊಂಡು ಬರುತ್ತಿರುವ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಜುಲೈ 12ಕ್ಕೆ 39ನೇ ಪ್ರತಿಷ್ಠಾನ ದಿನವಾಗಿದೆ.
ಗ್ರಾಮೀಣ ಭಾಗದ ಅಭಿವೃದ್ಧಿ ಹಣಕಾಸು ಸಂಸ್ಥೆಯು 1981ರಂದು ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ಆ್ಯಕ್ಟ್ 1981 ಅಡಿ ಆರಂಭಿಸಲಾಯಿತು. ಕೃಷಿ ಸಾಲ ಇಲಾಖೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಗ್ರಾಮೀಣ ಯೋಜನೆ ಮತ್ತು ಸಾಲ ಕೋಶದಡಿ ಕಾರ್ಯನಿರ್ವಹಿಸುತ್ತಿದೆ.
ದೇಶದ ವಿವಿಧ ಭಾಗಗಳಲ್ಲಿ ಜಾರಿಗೆ ತಂದ ಯೋಜನೆಗಳ ಮೂಲಕ ಉತ್ಪಾದಕತೆ ಮತ್ತು ಮಾರುಕಟ್ಟೆ, ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆಯ ಸಮಸ್ಯೆಗಳು ಮತ್ತು ರೈತ ಕೇಂದ್ರಿತ ಸಮಸ್ಯೆಗಳಾದ ಸಂಗ್ರಹಣೆ, ಕೃಷಿಕರ ಜೀವನೋಪಾಯ ಮತ್ತು ಸಮಸ್ಯೆಗಳ ಪರಿಹಾರ, ಆದಾಯ ವೃದ್ಧಿ ಕಾರ್ಯಗಳಿಗೆ ಬಂಡವಾಳ ನೀಡುತ್ತಿದೆ.
ನಬಾರ್ಡ್‌ನ ಅಧಿಕೃತ ಬಂಡವಾಳವನ್ನು ಆರು ಬಾರಿ ಸಂಗ್ರಹಿಸಲಾಯಿತು. ಆರಂಭದಲ್ಲಿ ಕೇವಲ 100 ಕೋಟಿ ರೂ. ಮಾತ್ರ ಅದನ್ನು 30,000 ಕೋಟಿ ರೂ.ಗೆ ಪರಿಷ್ಕರಿಸಲಾಯಿತು. ಪಾವತಿ ಬಂಡವಾಳದಲ್ಲಿ ಕೇಂದ್ರ ಸರ್ಕಾರವು ಶೇ.100ರಷ್ಟು ಪಾಲನ್ನು ಹೊಂದಿದೆ. ಅಂತಾರಾಷ್ಟ್ರೀಯ ಅಂಗಸಂಸ್ಥೆಗಳು ಸಹ ನಬಾರ್ಡ್‌ಗೆ ವಿತ್ತೀಯ ನೆರವು ನೀಡುತ್ತವೆ. ವಿಶ್ವಬ್ಯಾಂಕ್ ಸಂಬಂಧಿತ ಸಂಸ್ಥೆಗಳು ಮತ್ತು ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಒಕ್ಕೂಟ ಸಂಸ್ಥೆಗಳು ಗ್ರಾಮೀಣ ಜನರ ಉನ್ನತಿಗಾಗಿ ನಬಾರ್ಡ್ ಜೊತೆಗೂಡಿ ಕಾರ್ಯನಿರ್ವಹಿಸುತ್ತವೆ.
ನಬಾರ್ಡ್ ಕೃಷಿಗೆ ಹಣಕಾಸಿನ ನೆರವು ನೀಡುತ್ತದೆ. ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಇದು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಅಗತ್ಯವಿರುವ ಎಲ್ಲಾ ಹಣಕಾಸು ಮತ್ತು ಸಹಾಯವನ್ನು ಸಹ ಒದಗಿಸುತ್ತದೆ. ನಬಾರ್ಡ್ ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಕೃಷಿಗೆ ಪೂರಕವಾಗಿ ಕಾರ್ಯನಿರತವಾಗಿದೆ. ಇದು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸಣ್ಣ ಮತ್ತು ಸಣ್ಣ ನೀರಾವರಿಯನ್ನು ಸುಧಾರಿಸುವಲ್ಲಿ ಮುಂದಾಗಿದೆ.
ಇದು ಕೃಷಿ, ಗ್ರಾಮೀಣ ಕೈಗಾರಿಕೆಗಳಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿಯಂತಹ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಕೃಷಿ ಉತ್ಪಾದನೆಯಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳನ್ನು ತಮ್ಮ ಬಂಡವಾಳಕ್ಕೆ ಕೊಡುಗೆ ನೀಡುವ ಮೂಲಕ ನಬಾರ್ಡ್ ಉತ್ತೇಜಿಸುತ್ತದೆ. ಸಾಲ ನೀಡಿಕೆಯ ಕಾರ್ಯ, ಅಭಿವೃದ್ಧಿ ಕಾರ್ಯ ಹಾಗೂ ಪ್ರಚಾರ ಕಾರ್ಯದಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿದೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಪ್ರೇರೇಪಿತ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕತೆಯ ಬಹುತೇಕ ಕ್ಷೇತ್ರಗಳು ಕುಸಿತದಲ್ಲಿರುವಾಗ ಕೃಷಿ ವಲಯ ಭರವಸೆಯ ದಾರಿದೀಪವಾಗಿ ಬೆಳೆದಿದೆ. ದೇಶದ ಆರ್ಥಿಕ ಚೇತರಿಕೆಗೆ ಕೃಷಿಯೇ ಭರವಸೆಯಾಗಿದೆ.
ಆರ್ಥಿಕ ಹಿಂಜರಿತವನ್ನು ಮೇಲೆತ್ತಲೂ ಕೃಷಿ ಕ್ಷೇತ್ರ ಚೇತರಿಕೆಯಷ್ಟೇ ಸಾಲದು. ಆದರೆ, ಇದು ಬೆಳವಣಿಗೆ, ಅಭಿವೃದ್ಧಿ ಮತ್ತು ರೈತ ಕಲ್ಯಾಣದ ಹೊಸ ಆಡಳಿತಕ್ಕೆ ಉತ್ತೇಜನ ನೀಡುವ ಮೂಲಕ ಚೇತರಿಕೆಯ ಹಾದಿ ಸುಗಮಗೊಳಿಸಬಹುದು. 30,000 ಕೋಟಿ ರೂ. ನಬಾರ್ಡ್ ಮೂಲಕ ರೈತರಿಗೆ ಹೆಚ್ಚುವರಿ ತುರ್ತು ಬಂಡವಾಳ ಧನಸಹಾಯ ಒದಗಿಸಲಾಗಿದೆ. ಸಣ್ಣ ಮತ್ತು ಕಿರು ರೈತರೊಂದಿಗೆ ಹಣಕಾಸಿನ ಸಂಪನ್ಮೂಲಗಳ ಕೊರತೆ ನಿಭಾಯಿಸಲಾಗುತ್ತಿದೆ. ಆರ್‌ಆರ್‌ಬಿ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್ಗಳು ಸಾಲಕ್ಕೆ ಕೃಷಿಯೇ ಮುಖ್ಯ ಮೂಲವಾಗಿದೆ. ನಬಾರ್ಡ್ 30,000 ಕೋಟಿ ರೂ. ಹೆಚ್ಚುವರಿ ಮರುಹಣಕಾಸನ್ನು ಗ್ರಾಮೀಣ ಸಹಕಾರ ಬ್ಯಾಂಕುಗಳು/ಆರ್‌ಆರ್‌ಬಿಗಳ ಬೆಳೆ ಸಾಲದ ಅವಶ್ಯಕತೆಗೆ ಒದಗಿಸಲಿದೆ. ಈ ವರ್ಷದಲ್ಲಿ ಸಾಮಾನ್ಯ ಮರುಹಣಕಾಸು ಮೂಲಕ ನಬಾರ್ಡ್ 90,000 ಕೋಟಿ ರೂ. ಒದಗಿಸಲಿದೆ.
33 ರಾಜ್ಯ ಸಹಕಾರಿ ಬ್ಯಾಂಕ್ಗಳು, 351 ಜಿಲ್ಲಾ ಸಹಕಾರಿ ಬ್ಯಾಂಕ್ಗಳು ಮತ್ತು 43 ಆರ್‌ಆರ್‌ಬಿಗಳಿಗೆ ಬೆನ್ನೆಲುಬಾಗಿ ನಿಂತಿದೆ. ಸುಮಾರು 3 ಕೋಟಿಯಷ್ಟು ಸಣ್ಣ ಮತ್ತು ಹಿಡುವಳಿ ರೈತರಿಗೆ ಲಾಭದ ಆಶ್ರಯ ನೀಡುತ್ತಿದೆ. ನಬಾರ್ಡ್ ಸಹಕಾರಿ ಬ್ಯಾಂಕ್ಗಳು ಮತ್ತು ಆರ್‌ಆರ್‌ಬಿಗಳಿಗೆ 2020ರ ಮಾರ್ಚ್ನಲ್ಲಿ 29,500 ಕೋಟಿ ರೂ. ಹಣಕಾಸಿನ ನೆರವು ನೀಡಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ಅದೇ ತಿಂಗಳಲ್ಲಿ ರಾಜ್ಯಗಳಿಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ 4,200 ಕೋಟಿ ರೂ. ಕೊಟ್ಟಿದೆ. 2020r ಮಾರ್ಚ್ ತಿಂಗಳಿಂದ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ 6,700 ಕೋಟಿ ರೂ. ಕಾರ್ಯನಿರತ ಬಂಡವಾಳದ ಮಿತಿಯನ್ನು ಮಂಜೂರು ಮಾಡಿದೆ.