ನವದೆಹಲಿ: ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರು 68.3 ಬಿಲಿಯನ್ ಡಾಲರ್ ಸಂಪತ್ತಿನ ಮೂಲಕ ವಾರೆನ್ ಬಫೆಟ್ ಅವರನ್ನು(67.9 ಬಿಲಿಯನ್ ಡಾಲರ್) ಹಿಂದಿಕ್ಕಿದ್ದಾರೆ.
ಫೇಸ್‌ಬುಕ್ ಇಂಕ್ ಮತ್ತು ಸಿಲ್ವರ್ ಲೇಕ್ ಸೇರಿದಂತೆ ಇತರೆ ಕಂಪನಿಗಳು 15 ಶತ ಕೋಟಿಗೂ ಅಧಿಕ ಡಾಲರ್ ಅನ್ನು ರಿಲಯನ್ಸ್ ಗ್ರೂಪ್ನಲ್ಲಿ ಹೂಡಿಕೆ ಮಾಡಿದ್ದರಿಂದ ಅಂಬಾನಿಯ ಸಂಪತ್ತಿನಲ್ಲಿ ಏರಿಕೆ ಕಂಡುಬಂದಿದೆ. ಈ ವಾರ ಬಿಪಿ ಪಿಎಲ್ಸಿ ರಿಲಯನ್ಸ್‌ನ ಇಂಧನ-ಚಿಲ್ಲರೆ ವ್ಯಾಪಾರದ ಪಾಲುದಾರಿಕೆಗೆ 1 ಬಿಲಿಯನ್ ಡಾಲರ್ ಪಾವತಿಸಿದೆ.
ಕಳೆದ ತಿಂಗಳಲ್ಲಿ ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳ ಪೈಕಿ ಏಕೈಕ ಏಷ್ಯನ್ ಉದ್ಯಮಿ ಅಂಬಾನಿಯ ಸಂಪತ್ತಿನಲ್ಲಿ ಮಾತ್ರ ಏರಿಕೆ ಕಂಡುಬಂದಿದೆ. ಈ ವಾರ ಬಫೆಟ್ ಅವರು 2.9 ಶತಕೋಟಿ ಡಾಲರ್ಅನ್ನು ಚಾರಿಟಿಗೆ ನೀಡಿದ್ದಾರೆ.