ETV Bharat / business

ಆರ್ಥಿಕತೆಗೆ ಕೊರೊನಾ ಸೋಂಕು: ಒಂದು ಪೈಸೆಯೂ ವೇತನ ಪಡೆಯದ ಮುಖೇಶ್ ಅಂಬಾನಿ! - 2020ರಲ್ಲಿ ಮುಖೇಶ್ ಅಂಬಾನಿ ವೇತನ

ಭಾರತದ ಕೋವಿಡ್​-19 ಏಕಾಏಕಿಯಾಗಿ ಹಬ್ಬಿ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ಆರೋಗ್ಯದ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ತಮ್ಮ ಸಂಬಳ ತ್ಯಜಿಸಲು ಸ್ವಯಂ ಪ್ರೇರಣೆಯಿಂದ ನಿರ್ಧರಿಸಿದ್ದಾರೆ ಎಂದು ಕಂಪನಿಯು ಕಳೆದ ವರ್ಷ ಜೂನ್‌ನಲ್ಲಿ ಹೇಳಿತ್ತು.

Mukesh Ambani
Mukesh Ambani
author img

By

Published : Jun 3, 2021, 6:28 PM IST

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಿಂದ (ಆರ್​ಐಎಲ್) ಯಾವುದೇ ಸಂಬಳ ಪಡೆಯಲಿಲ್ಲ. ವ್ಯಾಪಾರ ಮತ್ತು ಆರ್ಥಿಕತೆ ಮೇಲೆ ಕೋವಿಡ್​ ಸಾಂಕ್ರಾಮಿಕ ತಂದ್ದೊಂಡಿದ್ದ ಸವಾಲಿನಿಂದಾಗಿ ಸ್ವಯಂಪ್ರೇರಣೆಯಿಂದ ಸಂಭಾವನೆ ತ್ಯಜಿಸಿದ್ದಾರೆ.

ರಿಲಯನ್ಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ 2020-21ರ ಆರ್ಥಿಕ ವರ್ಷಕ್ಕೆ ಅಂಬಾನಿಯ ಸಂಭಾವನೆ 'ಪಡೆದಿಲ್ಲ' ಎಂದು ಹೇಳಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅವರು ಕಂಪನಿಯಿಂದ 15 ಕೋಟಿ ರೂ. ಸಂಬಳ ಪಡೆದರು. 11 ವರ್ಷಗಳಿಂದಲೂ ಇಷ್ಟೇ ವೇತನ ಪಡೆಯುತ್ತಿದ್ದಾರೆ.

ಅಂಬಾನಿ 2008-09ರಿಂದ ಸಂಬಳ, ಅಗತ್ಯತೆಗಳು, ಭತ್ಯೆಗಳು ಮತ್ತು ಕಮಿಷನ್​ ಒಟ್ಟಾಗಿ 15 ಕೋಟಿ ರೂ. ಸೇರಿ ವಾರ್ಷಿಕ 24 ಕೋಟಿ ರೂ. ಪಡೆಯುತ್ತಾರೆ.

ಭಾರತದ ಕೋವಿಡ್​-19 ಏಕಾಏಕಿಯಾಗಿ ಹಬ್ಬಿ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ಆರೋಗ್ಯದ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ತಮ್ಮ ಸಂಬಳವನ್ನು ತ್ಯಜಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ ಎಂದು ಕಂಪನಿಯು ಕಳೆದ ವರ್ಷ ಜೂನ್‌ನಲ್ಲಿ ಹೇಳಿತ್ತು.

ಅವರ ಸೋದರ ಸಂಬಂಧಿಗಳಾದ ನಿಖಿಲ್ ಮತ್ತು ಹಿಟಾಲ್ ಮೆಸ್ವಾನಿ ಅವರ ಸಂಭಾವನೆ 24 ಕೋಟಿ ರೂ. ಬದಲಾಗದೇ ಉಳಿದಿದೆ. ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ ಎಂ ಎಸ್ ಪ್ರಸಾದ್ ಮತ್ತು ಪವನ್ ಕುಮಾರ್ ಕಪಿಲ್ ಅವರು ಎರಡು ವರ್ಷಗಳ ಕಾಲ ಕಾರ್ಯಕ್ಷಮತೆ - ಸಂಬಂಧಿತ ಪ್ರೋತ್ಸಾಹಗಳನ್ನು ಪಡೆದ ನಂತರ ಅವರ ಸಂಭಾವನೆ ಹೆಚ್ಚಾಗಿದೆ.

ಪ್ರಸಾದ್ 2020-21ರಲ್ಲಿ 11.99 ಕೋಟಿ ರೂ. ಗಳಿಸಿದ್ದರೆ, ಹಿಂದಿನ ವರ್ಷದ 11.15 ಕೋಟಿ ರೂ. ಪಡೆದಿದ್ದರು. ಕಪಿಲ್ ಅವರು 4.24 ಕೋಟಿ ರೂ. ಜೇಬಿಗೆ ಇಳಿಸಿಕೊಂಡರು.

ಪ್ರಸಾದ್ ಮತ್ತು ಕಪಿಲ್ ಅವರ ಪಾವತಿಯಲ್ಲಿ 2019-20ನೇ ಹಣಕಾಸು ಮತ್ತು 2020-21ನೇ ಹಣಕಾಸು ವರ್ಷದ ಸಾಧನೆ-ಸಂಬಂಧಿತ ಪ್ರೋತ್ಸಾಹಗಳು ಸೇರಿವೆ ಎಂದು ವಾರ್ಷಿಕ ವರದಿ ತಿಳಿಸಿದೆ.

ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಅಂಬಾನಿ ಅವರ ಪತ್ನಿ ನೀತಾ ಅವರು ವರ್ಷಕ್ಕೆ 8 ಲಕ್ಷ ರೂ. ಸಿಟ್ಟಿಂಗ್ ಶುಲ್ಕ ಮತ್ತು 1.65 ಕೋಟಿ ರೂ. ಕಮಿಷನ್​ ಪಡೆಯುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.