ETV Bharat / business

ವಿಡಿಯೋಕಾನ್‌ ಅಧ್ಯಕ್ಷರ ವಿರುದ್ಧ 'ಸಿಬಿಐ'ನ FIR ಬಳಿಕ, 'ಇಡಿ' ಪ್ರಕರಣ ದಾಖಲಿಸುವ ಸಾಧ್ಯತೆ!

ಸಿಬಿಐ, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್​ (ವಿಐಎಲ್​) ಅಧ್ಯಕ್ಷ ವೇಣುಗೋಪಾಲ್ ಧೂತ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಿಸಿಕೊಂಡ ಒಂದು ದಿನದ ನಂತರ, ಜಾರಿ ನಿರ್ದೇಶನಾಲಯವು ಸಹ ಮುಂಬರುವ ದಿನಗಳಲ್ಲಿ ಪ್ರಕರಣದ ಬಗ್ಗೆ ತನಿಖೆ ಮಾಡಬಹುದು ಎನ್ನಲಾಗುತ್ತಿದೆ.

Venugopal Dhoot
ವೇಣುಗೋಪಾಲ್ ಧೂತ್
author img

By

Published : Jun 24, 2020, 7:32 PM IST

ನವದೆಹಲಿ: ಮೊಜಾಂಬಿಕ್​ನಲ್ಲಿ ಆಸ್ತಿ ಖರೀದಿ ಮಾಡುವ ವೇಳೆ ಬ್ಯಾಂಕಿಂಗ್​ ವಂಚನೆ ನಡೆಸಿದ ಆರೋಪದಡಿ ಕೇಂದ್ರೀಯ ತನಿಖಾ ಸಂಸ್ಥೆ, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್​ (ವಿಐಎಲ್​) ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಸಿಬಿಐ ವೇಣುಗೋಪಾಲ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಿಸಿಕೊಂಡ ಒಂದು ದಿನದ ನಂತರ, ಜಾರಿ ನಿರ್ದೇಶನಾಲಯವು ಸಹ ಮುಂಬರುವ ದಿನಗಳಲ್ಲಿ ಪ್ರಕರಣದ ಬಗ್ಗೆ ತನಿಖೆ ಮಾಡಬಹುದು ಎನ್ನಲಾಗುತ್ತಿದೆ.

ಹಣಕಾಸು ತನಿಖಾ ಸಂಸ್ಥೆ, ಧೂತ್ ಮತ್ತು ಇತರರು ಎಸಗಿದ ಭ್ರಷ್ಟಾಚಾರಕ್ಕೆ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರಕರಣವನ್ನು ದಾಖಲಿಸಿಕೊಳ್ಳಲಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಏಜೆನ್ಸಿ ಈಗಾಗಲೇ ಧೂತ್ ಅವರ ವಿರುದ್ಧ 1,875 ಕೋಟಿ ರೂ. ಐಸಿಐಸಿಐ ಬ್ಯಾಂಕ್ ಸಾಲ ವಂಚನೆಯ ಮನಿ ಲಾಂಡರಿಂಗ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದೆ.

ಧೂತ್​ ಅವರ ಕಂಪನಿಗಳಾದ ವಿಡಿಯೋಕಾನ್ ಇಂಟರ್​ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚರ್​ ಮತ್ತು ಅವರ ಪತಿ ದೀಪಕ್​ ಕೊಚ್ಚರ್​ ಅವರ ವಿರುದ್ಧ ಸಿಬಿಐ ದಾಖಲಿಸಿತ್ತು. ಈ ದೂರಿನ ಆಧಾರದ ಮೇಲೆ ಇಡಿ ಕಳೆದ ವರ್ಷ ಧೂತ್ ವಿರುದ್ಧ ಲೇವಾದೇವಿ ಪ್ರಕರಣ ದಾಖಲಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ 2019ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಧೂತ್‌ ಅವರನ್ನು ಪ್ರಶ್ನಿಸಿತ್ತು. ಮಂಗಳವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಆಫ್ರಿಕಾದ ಮೊಜಾಂಬಿಕ್‌ನಲ್ಲಿ ತೈಲ ಮತ್ತು ಅನಿಲ ಆಸ್ತಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಧೂತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.