ETV Bharat / business

2020ರಲ್ಲಿ ದೇಶದ 10 ಸಾವಿರ ಕಂಪನಿಗಳ ಬಾಗಿಲು ಬಂದ್​​​: ಇದ್ರಲ್ಲಿ ಕರ್ನಾಟಕದವು ಎಷ್ಟು ಗೊತ್ತೇ? - 2020ರಲ್ಲಿ ಕಂಪನಿಗಳ ಸ್ವಯಂಪ್ರೇರಣೆ ಸ್ಥಗಿತ

ಕೊರೊನಾ ವೈರಸ್ ಲಾಕ್​ಡೌನ್ ಪರಿಣಾಮಗಳೊಂದಿಗೆ ಆರ್ಥಿಕ ಚಟುವಟಿಕೆಗೆ ತೀವ್ರ ಅಡ್ಡಿ ಉಂಟುಮಾಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಂಪನಿ ಕಾಯ್ದೆ 2014ರ ಸೆಕ್ಷನ್ 248 (2)ರ ಅಡಿಯಲ್ಲಿ ಒಟ್ಟು 10,113 ಕಂಪನಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಮುಚ್ಚಲಾಗಿದೆ.

shuttered
shuttered
author img

By

Published : Mar 9, 2021, 1:10 PM IST

ನವದೆಹಲಿ: ಕಳೆದ ವರ್ಷದ ಏಪ್ರಿಲ್ ಮತ್ತು ಈ ವರ್ಷದ ಫೆಬ್ರವರಿ ನಡುವೆ ದೇಶದ 10,000ಕ್ಕೂ ಹೆಚ್ಚು ಕಂಪನಿಗಳು ಸ್ವಯಂಪ್ರೇರಣೆಯಿಂದ ಮುಚ್ಚಿವೆ ಎಂದು ಸರ್ಕಾರ ಹೇಳಿದೆ.

ಕೊರೊನಾ ವೈರಸ್ ಲಾಕ್​ಡೌನ್ ಪರಿಣಾಮಗಳೊಂದಿಗೆ ಆರ್ಥಿಕ ಚಟುವಟಿಕೆಗೆ ತೀವ್ರ ಅಡ್ಡಿ ಉಂಟುಮಾಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಂಪನಿ ಕಾಯ್ದೆ 2014ರ ಸೆಕ್ಷನ್ 248 (2)ರ ಅಡಿಯಲ್ಲಿ ಒಟ್ಟು 10,113 ಕಂಪನಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಮುಚ್ಚಲಾಗಿದೆ.

ಇದನ್ನೂ ಓದಿ: ಸಂಕಷ್ಟದ ರಾಷ್ಟ್ರಗಳಿಗೆ ಲಸಿಕೆ ಕೊಟ್ಟ ಭಾರತ, ಜಗತ್ತಿಗೆ ತನ್ನ ನೈಜ ಸಾಮರ್ಥ್ಯ ಪರಿಚಯಿಸಿದೆ: IMF ಅರ್ಥಶಾಸ್ತ್ರಜ್ಞೆ

ಸೆಕ್ಷನ್ 8, 248 (2) ಕಂಪನಿಗಳು ಯಾವುದೇ ಕಾನೂನು ಕ್ರಮಗಳಿಲ್ಲದೆ ಸ್ವಯಂಪ್ರೇರಣೆಯಿಂದ ತಮ್ಮ ವ್ಯವಹಾರಗಳನ್ನು ಕೊನೆಗೊಳಿಸುತ್ತವೆ ಎಂದು ಹೇಳುತ್ತದೆ.

ದೆಹಲಿಯಲ್ಲಿ ಅತಿ ಹೆಚ್ಚು 2,394 ಕಂಪನಿಗಳು ಮುಚ್ಚಲ್ಪಟ್ಟಿದ್ದರೇ ಉತ್ತರ ಪ್ರದೇಶದಲ್ಲಿ 1,936 ಕಂಪನಿಗಳು ಬಾಗಿಲು ಹಾಕಿಕೊಂಡಿವೆ. ತಮಿಳುನಾಡಿನಲ್ಲಿ 1,322, ಮಹಾರಾಷ್ಟ್ರದಲ್ಲಿ 1,279, ಕರ್ನಾಟಕದಲ್ಲಿ 836, ಚಂಡೀಗಢದಲ್ಲಿ 501, ರಾಜಸ್ಥಾನದಲ್ಲಿ 479, ತೆಲಂಗಾಣದಲ್ಲಿ 404, ಕೇರಳದಲ್ಲಿ 307, ಜಾರ್ಖಂಡ್‌ನಲ್ಲಿ 137, ಮಧ್ಯಪ್ರದೇಶದಲ್ಲಿ 111 ಮತ್ತು ಬಿಹಾರದಲ್ಲಿ 104 ಸ್ವಯಂಪ್ರೇರಣೆಯಿಂದ ಮುಚ್ಚಿವೆ.

2020-21ರಲ್ಲಿ ವ್ಯವಹಾರ ಮಾಡುವುದನ್ನು ನಿಲ್ಲಿಸಿರುವ ನೋಂದಾಯಿತ ಕಂಪನಿಗಳ ವಿವರಗಳ ಕುರಿತು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವರು ಪ್ರತಿಕ್ರಿಯಿಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.