ನ್ಯೂಯಾರ್ಕ್(ಅಮೆರಿಕ): ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಭಾರತೀಯ ಮೂಲದ ಸತ್ಯ ನಾದೆಲ್ಲಾ ಇದೀಗ ಕಂಪೆನಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸಂಸ್ಥೆಯ ಸ್ವತಂತ್ರ ನಿರ್ದೇಶಕರು ಸತ್ಯ ನಾದೆಲ್ಲಾ ಅವರನ್ನು ಅವಿರೋಧವಾಗಿ ಚುನಾಯಿಸಿದ್ದಾರೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಸತ್ಯ ನಾದೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.
ಈ ಮೊದಲು ಸಂಸ್ಥೆಯ ಅಧ್ಯಕ್ಷರಾಗಿದ್ದ ಜಾನ್ ಡಬ್ಲ್ಯೂ ಥಾಂಪ್ಸನ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಗ ಸತ್ಯ ನಾದೆಲ್ಲಾ ಸಂಸ್ಥೆಯ ಬೋರ್ಡ್ಗೆ ಕಾರ್ಯಸೂಚಿಯನ್ನು ನಿಗದಿಪಡಿಸುವ ಕಾರ್ಯದ ನೇತೃತ್ವ ವಹಿಸಿಕೊಳ್ಳುತ್ತಾರೆ. ಜೊತೆಗೆ ಬೋರ್ಡ್ಗೆ ಅವಕಾಶಗಳನ್ನು ಹೆಚ್ಚಿಸಲು ಮತ್ತು ವ್ಯವಹಾರ ವಿಸ್ತರಣೆಯ ಅಧಿಕಾರವಿರುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ.
ಸತ್ಯ ನಾದೆಲ್ಲಾ 2014ರ ಫೆಬ್ರವರಿಯಲ್ಲಿ ಸ್ವೀಚ್ ಬಲ್ಮೇರ್ ಅವರಿಂದ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಸಿಇಒ ಆಗಿ ಆಯ್ಕೆಯಾದ ನಂತರ ಮೊಬೈಲ್ ಕ್ಷೇತ್ರದಲ್ಲಿ ಎದುರಾಳಿಗಳಾದ ಆಪಲ್ ಮತ್ತು ಗೂಗಲ್ ಅನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಸಾಧ್ಯವಾಯಿತು ಎನ್ನಲಾಗಿದೆ.
ನಾದೆಲ್ಲಾ ಬಗ್ಗೆ ಇನ್ನಷ್ಟು..
ಮೈಕ್ರೋಸಾಫ್ಟ್ 1975ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, ಈ ಕಂಪನಿಗೆ ಹೊಸ ಶಕ್ತಿಯನ್ನು ತರಲು ಕಾರಣಕರ್ತರಾಗಿದ್ದಾರೆ ಕೆಲವರ ಅಭಿಪ್ರಾಯ. ಪರ್ಸನಲ್ ಕಂಪ್ಯೂಟರ್ಗಳಿಗೆ ಬೇಕಾದ ಸಾಫ್ಟ್ವೇರ್ ಪ್ಯಾಕೇಜ್ ಜಕಡಗೆ ಇವರು ಸಾಕಷ್ಟು ಗಮನಹರಿಸಿದ್ದರು.
ಇದನ್ನೂ ಓದಿ: 'ಟೀಂ ಇಂಡಿಯಾ ರಬ್ಬರ್ ಚೆಂಡು ಇದ್ದಂತೆ, ಪುಟಿಯುತ್ತದೆ, ಪುಟಿಯುತ್ತಲೇ ಇರುತ್ತದೆ'
ಸಂಸ್ಥೆಯ ರಚನೆಯನ್ನು ಸರಳಗೊಳಿಸಿ ಮತ್ತು ಫಿನ್‌ಲ್ಯಾಂಡ್‌ನ ನೋಕಿಯಾಗೂ ಸಾಫ್ಟ್ವೇರ್ ಸಂಯೋಜಿಸುವ ಗುರಿಯನ್ನು ಹೊಂದಿರುವ ಯೋಜನೆಯಡಿಯಲ್ಲಿ, ನಾಡೆಲ್ಲಾ ತನ್ನ ಅಧಿಕಾರಾವಧಿಯ ಆರಂಭದಲ್ಲಿ, ಶೇಕಡಾ 14ರಷ್ಟು ಉದ್ಯೋಗಗಳಿಗೆ ಕತ್ತರಿ ಹಾಕಲಾಗಿತ್ತು. ಕ್ಲೌಡ್ ಕಂಪ್ಯೂಟಿಂಗ್ಗೆ ಕೂಡಾ ನಾದೆಲ್ಲಾ ಕೊಡುಗೆ ಹೆಚ್ಚಾಗಿದೆ.