ಮುಂಬೈ: ದೇಶಾದ್ಯಂತ ಆಮ್ಲಜನಕದ ಕೊರತೆಯ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ನಡುವೆ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಒಂದು ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ.
ಹರಿಯಾಣದಲ್ಲಿನ ತನ್ನ ಎಲ್ಲ ಕಾರ್ಖಾನೆಗಳನ್ನು ಮುಚ್ಚಲು ನಿರ್ಧರಿಸಿದೆ. ತಾನು ಹೊಂದಿರುವ ಆಕ್ಸಿಜನ್ ಅನ್ನು ವೈದ್ಯಕೀಯ ಉದ್ದೇಶಗಳಿಗೆ ವರ್ಗಾಯಿಸಲಿದೆ. ನಿರ್ವಹಣೆ ಚಟುವಟಿಕೆಗಳಿಗಾಗಿ ಮಾರುತಿ ಕಾರ್ಖಾನೆಗಳು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಕೆಲವು ದಿನಗಳವರೆಗೆ ಮುಚ್ಚುತ್ತದೆ. ಈಗ ಕೊರೊನಾ ಸಂಕಷ್ಟದಲ್ಲಿ ದೇಶಕ್ಕೆ ನೆರವಾಗಲು ತಯಾರಿಕೆಯನ್ನು ಸ್ಥಗಿತಗೊಳಿಸುತ್ತಿದೆ.
ಜೂನ್‌ನಲ್ಲಿ ಮುಚ್ಚಬೇಕಿದ್ದ ಕಾರ್ಖಾನೆಗಳನ್ನು ಈಗಲೇ ಮುಚ್ಚಲು ನಿರ್ಧರಿಸಲಾಗಿದೆ ಹರಿಯಾಣದ ಎಲ್ಲ ಮಾರುತಿ ಕಾರ್ಖಾನೆಗಳು ಮೇ 1ರಿಂದ ಮೇ 9ರವರೆಗೆ ಮುಚ್ಚಲಿವೆ. ಇದು ಆಮ್ಲಜನಕದ ನಿಕ್ಷೇಪವನ್ನು ಆಸ್ಪತ್ರೆಗಳಿಗೆ ಸಾಗಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.
ಜನರ ಜೀವ ಉಳಿಸುವಲ್ಲಿ ಸರ್ಕಾರಕ್ಕೆ ನಮ್ಮ ಕೊಡುಗೆ ಮುಂದುವರಿಯುತ್ತದೆ ಎಂದು ಮಾರುತಿ ಭರವಸೆ ನೀಡುತ್ತಿದೆ. ಗುಜರಾತ್‌ನ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎಂದು ಮಾರುತಿ ಪ್ರಕಟಣೆಯಲ್ಲಿ ತಿಳಿಸಿದೆ.