ನವದೆಹಲಿ: ದೇಶದ ರಸ್ತೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಟಾಲ್ ಬಾಯ್ ಖ್ಯಾತಿಯ ಮಾರುತಿ ಸುಜುಕಿ ವ್ಯಾಗನಾರ್ನ 1.0 ಲೀಟರ್ ಪೆಟ್ರೋಲ್ ಎಂಜಿನ್ನ 40,618 ಕಾರುಗಳನ್ನು ಹಿಂದಕ್ಕೆ ಪಡೆಯುವುದಾಗಿ ಕಂಪನಿ ಪ್ರಕಟಿಸಿದೆ.
2018ರ ನವೆಂಬರ್ 15 ಮತ್ತು 2019ರ ಆಗಸ್ಟ್ 12ರ ನಡುವೆ ತಯಾರಿಸಲಾದ ಮಾರುತಿ ಸುಜುಕಿ ಇಂಡಿಯಾದ ವ್ಯಾಗನಾರ್ ಶ್ರೇಣಿಯ ಕಾರುಗಳು ಹಿಂಪಡೆಯುವಿಕೆ ವ್ಯಾಪ್ತಿಗೆ ಬರಲಿವೆ. ಇಂಧನ ಮೆದುಗೊಳವೆ ಫೌಲಿಂಗ್ನ ಮೆಟಲ್ ಕ್ಲ್ಯಾಂಪ್ ಬದಲಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕ ಸುರಕ್ಷತಾ ದೋಷಕ್ಕೆ ಕಾರಣವಾಗಬಹುದಾದ ಸಂಭಾವ್ಯ ಸಮಸ್ಯೆಯನ್ನು ನಿವಾರಿಸಲು ಈ ನಡೆ ತೆಗೆದುಕೊಳ್ಳಲಾಗಿದೆ. ಮಾರುತಿ ಸುಜುಕಿಯ ವಿತರಕರು ಆಗಸ್ಟ್ 24ರಿಂದ ವಾಹನಗಳ ಮಾಲೀಕರನ್ನು ಸಂಪರ್ಕಿಸಲಿದ್ದಾರೆ. ತಪಾಸಣೆ ಮತ್ತು ದೋಷಪೂರಿತ ಭಾಗ ಬದಲಿಸಲು ಯಾವುದೇ ಶುಲ್ಕವಿರುವುದಿಲ್ಲ ಎಂದು ಹೇಳಿದೆ.