ETV Bharat / business

ಕರ್ನಾಟಕ ಬ್ಯಾಂಕ್​ ಜತೆ ಮಾರುತಿ ಸುಜುಕಿ ಒಪ್ಪಂದ: ಕಾರುಗಳಿಗೆ ಶೇ 85ರಷ್ಟು ಸುಲಭ ಸಾಲ - ಕರ್ನಾಟಕ ಬ್ಯಾಂಕ್‌ನಿಂದ ವಾಹನ ಸಾಲ

ಖಾಸಗಿ ವಲಯದ ಸಾಲದಾತ ಕರ್ನಾಟಕ ಬ್ಯಾಂಕ್​ ಜತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗ್ರಾಹಕರು ಕರ್ನಾಟಕ ಬ್ಯಾಂಕಿನ 858 ಶಾಖೆಗಳಲ್ಲಿ ಮೆಟ್ರೋ, ನಗರ, ಅರೆ ನಗರ ಮತ್ತು ಗ್ರಾಮೀಣ ಸ್ಥಳಗಳಲ್ಲಿ ಒಪ್ಪಂದದ ಲಾಭ ಪಡೆಯಬಹುದು. ಗ್ರಾಹಕರು ಮಾರುತಿ ಸುಜುಕಿ ಅರೆನಾ ಮತ್ತು ನೆಕ್ಸಾ ಶೋ ರೂಂಗಳಿಂದ ಎಲ್ಲಾ ಹೊಸ ಕಾರುಗಳ ಆನ್- ರೋಡ್ ಬೆಲೆಯ ಶೇ 85ರಷ್ಟು ಸಾಲ ಪಡೆಯಬಹುದು.

Maruti Suzuki
Maruti Suzuki
author img

By

Published : Mar 31, 2021, 1:23 PM IST

ನವದೆಹಲಿ: ಸಂಭಾವ್ಯ ಕಾರು ಖರೀದಿದಾರರಿಗೆ ವಾಹನ ಹಣಕಾಸು ಆಯ್ಕೆ ಒದಗಿಸಲು ಕರ್ನಾಟಕ ಬ್ಯಾಂಕ್‌ ಜತೆ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

ಮಂಗಳೂರು ಪ್ರಧಾನ ಕಚೇರಿ ಹೊಂದಿರುವ ಖಾಸಗಿ ವಲಯದ ಸಾಲದಾತ ಕರ್ನಾಟಕ ಬ್ಯಾಂಕ್​ ಜತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗ್ರಾಹಕರು ಕರ್ನಾಟಕ ಬ್ಯಾಂಕಿನ 858 ಶಾಖೆಗಳಲ್ಲಿ ಮೆಟ್ರೋ, ನಗರ, ಅರೆ ನಗರ ಮತ್ತು ಗ್ರಾಮೀಣ ಸ್ಥಳಗಳಲ್ಲಿ ಒಪ್ಪಂದದ ಲಾಭ ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರು ಮಾರುತಿ ಸುಜುಕಿ ಅರೆನಾ ಮತ್ತು ನೆಕ್ಸಾ ಶೋ ರೂಂಗಳಿಂದ ಎಲ್ಲ ಹೊಸ ಕಾರುಗಳ ಆನ್ - ರೋಡ್ ಬೆಲೆಯ ಶೇ 85ರಷ್ಟು ಸಾಲ ಪಡೆಯಬಹುದು. ಗ್ರಾಹಕರು ತಮ್ಮ ಸಾಲಕ್ಕಾಗಿ 84 ತಿಂಗಳ ಅವಧಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನಾಳೆಯಿಂದ ಹೊಸ ಆರ್ಥಿಕ ವರ್ಷಕ್ಕೆ ಏನೆಲ್ಲಾ ಬದಲಾಗಲಿದೆ?.. ನೀವು ತಿಳಿದಿರಬೇಕಾದ 6 ಪ್ರಮುಖ ಸಂಗತಿಗಳಿವು

ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿದ ಎಂಎಸ್‌ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ & ಸೇಲ್ಸ್) ಶಶಾಂಕ್ ಶ್ರೀವಾಸ್ತವ, ವಾಹನ ಖರೀದಿಸುವ ಪ್ರಕ್ರಿಯೆಯನ್ನು ಸುಲಭ ಮತ್ತು ಕಂಪನಿಯ ಗ್ರಾಹಕರಿಗೆ ಕೈಗೆಟುಕುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತ್ವರಿತ ತಾಂತ್ರಿಕ ಅಭಿವೃದ್ಧಿ ಮತ್ತು ಹೊಸ ಡಿಜಿಟಲ್ ಗ್ರಾಹಕರ ನಡವಳಿಕೆಗಳು ವಾಹನ ಮಾರಾಟ ನಿರ್ಧರಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಮಾರುತಿ ಸುಜುಕಿ ಡಿಜಿಟಲ್ ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್ ಮತ್ತು ಹೊಸ ಯೋಜನೆಗಳ ಮೂಲಕ ಗ್ರಾಹಕರಿಗೆ ಹೊಸ ಕಾರುಗಳನ್ನು ಆಕರ್ಷಕ ಬಡ್ಡಿದರಗಳಲ್ಲಿ ಖರೀದಿಸಲು ನೆರವಾಗುತ್ತಿದೆ. ಅವರ ಅಗತ್ಯಗಳಿಗೆ ಅನುಗುಣವಾಗಿ ಇಎಂಐ ಕಸ್ಟಮೈಸ್ ಮಾಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.