ನವದೆಹಲಿ: ಭಾರತದ ವಾಹನ ಮಾರುಕಟ್ಟೆ ದೈತ್ಯ ಮಾರುತಿ ಸುಜುಕಿ ಹೆಚ್ಚಿದ ಇನ್ಪುಟ್ ವೆಚ್ಚದ ಕಾರಣದಿಂದ ಬೆಲೆ ಏರಿಕೆ ಮಾಡುತ್ತಿದ್ದು, ಎಲ್ಲಾ ಮಾದರಿ ಮತ್ತು ಶ್ರೇಣಿಗಳಲ್ಲಿ 34,000 ರೂ. ತನಕ ಬೆಲೆ ಹೆಚ್ಚಿಸಲಾಗಿದೆ. ಹೊಸ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ ಎಂದು ತಿಳಿಸಿವೆ.
ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯು ಆಯ್ದ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಬೆಲೆ ಬದಲಾವಣೆಯು ಕಾರುಗಳ ಮಾದರಿಗಳಲ್ಲಿ ಬದಲಾಗುತ್ತದೆ. ದರ ಏರಿಕೆಯು 34,000 ರೂ.ವರೆಗೆ ಇರುತ್ತದೆ (ಎಕ್ಸ್-ಶೋರೂಮ್ - ದೆಹಲಿ). ಹೊಸ ಬೆಲೆಗಳು 2021ರ ಜನವರಿ 20ರಿಂದ ಅನ್ವಯವಾಗುತ್ತವೆ ಎಂದು ಮಾರುತಿ ಸುಜುಕಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಮಾರುತಿ ಸುಜುಕಿ ವೈಯಕ್ತಿಕ ಮಾದರಿಗಳ ಬೆಲೆ ಏರಿಕೆಯ ಪ್ರಮಾಣ ನಿರ್ದಿಷ್ಟಪಡಿಸಿಲ್ಲ ಮತ್ತು ಬೆಲೆ ಏರಿಕೆಯಿಂದಾಗಿ ಪರಿಣಾಮ ಬೀರುವ ಮಾಡಲ್ಗಳ ಪಟ್ಟಿ ಮಾಡಿಲ್ಲ. ಮಾರುತಿ ಸುಜುಕಿಯಿಂದ ಬೆಲೆ ಏರಿಕೆ ಪ್ರತಿಸ್ಪರ್ಧಿ ಮಹೀಂದ್ರಾ ಬಳಿಕ ಕೆಲವು ದಿನಗಳ ನಂತರ ಬರುತ್ತದೆ. ಮಹೀಂದ್ರಾ ತನ್ನ ಪ್ರಯಾಣಿಕರ ಮತ್ತು ವಾಣಿಜ್ಯದ ಬೆಲೆಯನ್ನು ಶೇ 1.9ರಷ್ಟು ಹೆಚ್ಚಿಸುವುದಾಗಿ ಘೋಷಿಸಿತು. ಬೆಲೆ ಏರಿಕೆಯು ಮಾದರಿ ಮತ್ತು ಮಾಡಲ್ಗಳನ್ನು ಅವಲಂಬಿಸಿ 4,500- 40,000 ರೂ. ಹೆಚ್ಚಳವಾಗಬಹುದು.
ಇದನ್ನೂ ಓದಿ: ಬಜೆಟ್ ನಿರೀಕ್ಷೆಗೆ ಪಾತಾಳದಿಂದ ಮೇಲೆದ್ದ ಗೂಳಿ: ಆರಂಭಿಕ ವಹಿವಾಟಿನಲ್ಲಿ 500 ಅಂಕ ಜಿಗಿತ
ಕಳೆದ ತಿಂಗಳು ಸ್ಕೋಡಾ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಯಾದ್ಯಂತ ಜನವರಿ 1ರಿಂದ ಬೆಲೆಗಳನ್ನು ಹೆಚ್ಚಿಸುತ್ತದೆ ಎಂದು ಘೋಷಿಸಿತ್ತು. ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಬೆಲೆಗಳನ್ನು ಶೇ 2.5ರಷ್ಟು ಹೆಚ್ಚಿಸುವುದಾಗಿ ಜೆಕ್ ವಾಹನ ತಯಾರಕರು ಹೇಳಿದ್ದಾರೆ. ಜರ್ಮನಿಯ ಆಟೋ ಪ್ರಮುಖ ವೋಕ್ಸ್‌ವ್ಯಾಗನ್ ತನ್ನ ಹ್ಯಾಚ್‌ಬ್ಯಾಕ್ ಪೊಲೊ ಮತ್ತು ಮಧ್ಯಮ ಗಾತ್ರದ ಸೆಡಾನ್ ವೆಂಟೊ ಭಾರತದಲ್ಲಿ ಜನವರಿಯಿಂದ ಶೇ 2.5ರಷ್ಟು ಹೆಚ್ಚಿಸಿದೆ.
ನಿಸ್ಸಾನ್, ರೆನಾಲ್ಟ್ ಇಂಡಿಯಾ, ಹೋಂಡಾ ಕಾರ್ಸ್, ಫೋರ್ಡ್ ಇಂಡಿಯಾ, ಇಸುಝು, ಬಿಎಂಡಬ್ಲ್ಯು ಇಂಡಿಯಾ, ಆಡಿ ಇಂಡಿಯಾ ಮತ್ತು ಹೀರೋ ಮೊಟೊಕಾರ್ಪ್ ಸೇರಿದಂತೆ ಇತರ ವಾಹನ ತಯಾರಕರು ಸಹ ಇನ್ಪುಟ್ ವೆಚ್ಚ ಹೆಚ್ಚಳದಿಂದಾಗಿ ಇದೇ ಜನವರಿಯಿಂದ ಬೆಲೆ ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.