ನವದೆಹಲಿ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನ ಲಘು ವಾಣಿಜ್ಯ ವಾಹನವಾದ 'ಸೂಪರ್ ಕ್ಯಾರಿ' ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳಲ್ಲಿ 70,000 ಯುನಿಟ್‌ಗಳ ಮಾರಾಟ ಮಾಡಿದೆ.
ಈ ಆಟೋ ಮೇಜರ್ 2016ರಲ್ಲಿ ಸೂಪರ್ ಕ್ಯಾರಿಯೊಂದಿಗೆ ವಾಣಿಜ್ಯ ವಾಹನ ವಿಭಾಗಕ್ಕೆ ಕಾಲಿಟ್ಟಿತ್ತು. ಈ ಮೂಲಕ 70,000ಕ್ಕೂ ಅಧಿಕ ಮಿನಿ ಟ್ರಕ್ಗಳನ್ನು ಈಗಾಗಲೇ ಮಾರಾಟ ಮಾಡಿದೆ. ಈ ವಾಹನಗಳ ಮಾಲೀಕರಿಗೆ ತಮ್ಮ ವ್ಯವಹಾರಗಳ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಎಂಎಸ್ಐ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ನೀರು ದುಬಾರಿ! ಸ್ಟಾಕ್ ಮಾರ್ಕೆಟ್ನಲ್ಲಿ ನೀರು ಮಾರುವ ಚರ್ಚೆ: ಕಾಸು ಕೊಟ್ಟು ಜೀವಜಲ ಬೇಡುವ ದುಃಸ್ಥಿತಿ!
ಉತ್ತಮವಾದ ಮೈಲೇಜ್ ಗೌರವಿಸುವ ಭಾರತೀಯ ಮಿನಿ ಟ್ರಕ್ ಗ್ರಾಹಕರಿಗಾಗಿ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಸೂಪರ್ ಕ್ಯಾರಿ ತನ್ನ ಭರವಸೆ ಈಡೇರಿಸಿದೆ ಎಂದು ಎಂಎಸ್ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ & ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳುತ್ತಾರೆ.
ಸೂಪರ್ ಕ್ಯಾರಿ ಅಲ್ಪಾವಧಿಯಲ್ಲಿಯೇ ಒಂದು ಉತ್ತಮ ಸ್ಥಾನ ಸೃಷ್ಟಿಸಿದೆ. ಲಘು ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಎರಡನೇ ಮಾದರಿಯಾಗಿದೆ ಎಂದರು.
ಈ ಮಾದರಿಯು 2019-20ರಲ್ಲಿ ಶೇ 15 ಮತ್ತು 2020-21ರಲ್ಲಿ ಸುಮಾರು 20ರಷ್ಟು ಮಾರುಕಟ್ಟೆ ಪಾಲು ದಾಖಲಿಸಿದೆ. ಸೂಪರ್ ಕ್ಯಾರಿ ಅನ್ನು ಇ-ಕಾಮರ್ಸ್, ಕೊರಿಯರ್, ಎಫ್‌ಎಂಸಿಜಿ ಮತ್ತು ಸರಕು ವಿತರಣೆ ಸೇರಿದಂತೆ ಅನೇಕ ಕಡೆ ಬಳಸಲಾಗುತ್ತದೆ.