ETV Bharat / business

ಮಾರುತಿ ಕಾರ್ ಪ್ರಿಯರಿಗೆ ಬೆಲೆ ಏರಿಕೆ ಶಾಕ್​... ಆಲ್ಟೋ ಕೆ10 ಇನ್ನೂ ದುಬಾರಿ

ಕಾರ್​ನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್​), ಚಾಲಕನಿಗೆ ಏರ್​ಬ್ಯಾಗ್, ರಿವರ್ಸ್ ಪಾರ್ಕಿಂಸ್​ ಸೆನ್ಸರ್​ ಮತ್ತು ಮುಂಭಾಗದ ಆಸನದಲ್ಲಿ ಪ್ರಯಾಣಿಸುವವರು ಸೀಟ್​ ಬೆಲ್ಟ್​ ಧರಿಸುವುದನ್ನು ನೆನಪಿಸುವ ಸೌಲಭ್ಯದಂತಹ ಸುರಕ್ಷತಾ ಸಾಧನಗಳನ್ನು ಅಳವಡಿಸಿ ಮೇಲ್ದರ್ಜೆಗೆ ಏರಿಸಿದೆ.

author img

By

Published : Apr 12, 2019, 6:32 PM IST

ಮಾರುತಿ ಆಲ್ಟೋ ಕೆ10; ಚಿತ್ರ ಕೃಪೆ ಟ್ವಿಟ್ಟರ್​

ನವದೆಹಲಿ: ಭಾರತದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ತನ್ನ ಕಾರುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿದೆ.

ಮಾರುತಿ ಸುಜುಕಿ ಇಂಡಿಯಾದ (ಎಂಎಸ್​ಐ) ಜನಪ್ರಿಯ ಕಾರ್ ಆಲ್ಟೋ ಕೆ10 ಬೆಲೆಯನ್ನು ಗರಿಷ್ಠ ₹ 23 ಸಾವಿರದವರೆಗೆ ಏರಿಸಲಾಗಿದೆ.

ಪರಿಷ್ಕೃತ ನೂತನ ಬೆಲೆ ಹೆಚ್ಚಳವು ದೇಶಾದ್ಯಂತ ತಕ್ಷಣದಿಂದಲೇ ಜಾರಿಗೆ ಬಂದಿದೆ. ಕಾರ್​ನ ಮಾದರಿ ಆಧರಿಸಿ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ (ಎನ್​ಸಿಆರ್) ಎಕ್ಸ್​ಷೋರೂಂ ಬೆಲೆ ₹ 3.65 ಲಕ್ಷದಿಂದ ₹ 4.44 ಲಕ್ಷದವರೆಗೆ ಮಾರಾಟ ಆಗಲಿದೆ. ದೇಶದ ಇತರೆ ಭಾಗದಲ್ಲಿನ ಬೆಲೆಯು ₹ 3.75 ಲಕ್ಷದಿಂದ ₹ 4.54 ಲಕ್ಷದ ವರೆಗೆ ಇರಲಿದೆ.

ತಿಂಗಳ ಹಿಂದಷ್ಟೇ ಕಾರ್​ನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್​), ಚಾಲಕನಿಗೆ ಏರ್​ಬ್ಯಾಗ್, ರಿವರ್ಸ್ ಪಾರ್ಕಿಂಸ್​ ಸೆನ್ಸರ್​ ಮತ್ತು ಮುಂಭಾಗದ ಆಸನದಲ್ಲಿ ಪ್ರಯಾಣಿಸುವವರು ಸೀಟ್​ ಬೆಲ್ಟ್​ ಧರಿಸುವುದನ್ನು ನೆನಪಿಸುವ ಸೌಲಭ್ಯದಂತಹ ಸುರಕ್ಷತಾ ಸಾಧನಗಳನ್ನು ಅಳವಡಿಸಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಕಾರಣಕ್ಕೆ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಎಂಎಸ್​ಐ ಸ್ಪಷ್ಟನೆ ನೀಡಿದೆ.

ಏ.1ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ವಾಹನ ಉತ್ಪಾದಕರೇ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್ (ಎಚ್​ಎಸ್​ಆರ್​ಪಿ) ಅಳವಡಿಸಬೇಕು ಎಂಬ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸೂಚಿನೆಯ ಅನ್ವಯ ಈ ಹಿಂದೆ ಎಂಎಸ್​ಐ ₹ 689 ಬೆಲೆ ಏರಿಸಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.