ನವದೆಹಲಿ: ದೇಶೀಯ ವಾಹನ ತಯಾರಕ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ಭಾರತೀಯ ರಕ್ಷಣಾ ಪಡೆಗಳಿಗೆ ಲಘು ಯುದ್ಧ ವಾಹನಗಳನ್ನು ಪೂರೈಸಲಿದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಗ್ರೂಪ್ ಅಂಗಸಂಸ್ಥೆಯಾದ ಡಿಫೆನ್ಸ್ ಸಿಸ್ಟಮ್ಸ್, ಭಾರತೀಯ ಸೈನಿಕರಿಗೆ ಗಡಿಯಲ್ಲಿನ ಪ್ರಯಾಣಕ್ಕೆ ನೆರವಾಗುವಂತಹ ಒಟ್ಟು 1300 ಲಘು ಶಸ್ತ್ರಾಸ್ತ್ರ ವಾಹನಗಳನ್ನು ಪೂರೈಸಲಿದೆ. ಈ ವಾಹನಗಳನ್ನು ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಸಲಾಗುತ್ತದೆ. ಒಪ್ಪಂದದ ಮೌಲ್ಯ 1,056 ಕೋಟಿ ರೂ.ಆಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಎಂಡಿಎಸ್ ವಾಹನಗಳನ್ನು ಪೂರೈಸಲಿದೆ.
ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ಅಧ್ಯಕ್ಷ ಎಸ್ಪಿ ಶುಕ್ಲಾ ಒಪ್ಪಂದವನ್ನು ಬಹಿರಂಗಪಡಿಸಿದ್ದು, ಈ ಒಪ್ಪಂದವು ಆತ್ಮನಿರ್ಭಾರ ಭಾರತ ಅಭಿಯಾನದ ಯಶಸ್ಸಿನಲ್ಲಿ ಒಂದು ಮೈಲಿಗಲ್ಲಾಗಿದೆ. ಖಾಸಗಿ ವಲಯದಲ್ಲಿ ವಿನ್ಯಾಸಗೊಳಿಸಿ ತಯಾರಿಸಿದ ವಾಹನಕ್ಕೆ ನೀಡಲಾಗುವ ಮೊದಲ ಪ್ರಮುಖ ಒಪ್ಪಂದ ಇದಾಗಿದೆ. ಇದು ಭಾರತದಲ್ಲಿ ತಯಾರಿಸಿದ ಸಲಕರಣೆಗಳ ಬಳಕೆಗೆ ದಾರಿ ಮಾಡಿಕೊಡುತ್ತದೆ ಎಂದರು.
ಇದನ್ನೂ ಓದಿ: ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ: ಕೇಂದ್ರ ಘೋಷಣೆ
ಭಾರತೀಯ ಸೇನೆಯ ಮಾನದಂಡಗಳಿಗೆ ಅನುಗುಣವಾಗಿ ಈ ವಾಹನವನ್ನು ಎಂಡಿಎಸ್ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಕಂಪನಿಯು ಜೀವಮಾನದ ಸೇವೆಯ ಅನುಭವ ಒದಗಿಸುತ್ತದೆ. ಇದನ್ನು ಎಂಡಿಎಸ್ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ. ಈ ವಾಹನವನ್ನು ಖರೀದಿಸುವ ಮೊದಲು, ಸೈನ್ಯವು ಅದರ ಮೇಲೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿತು. ಈ ವಾಹನವನ್ನು ವಿವಿಧ ಭೌಗೋಳಿಕ ಪರಿಸ್ಥಿತಿಗಳಲ್ಲಿ ಬಳಸಿಕೊಂಡಿತು. ಸ್ಫೋಟ ಸಹಿಷ್ಣುತೆಯನ್ನು ಪರಿಶೀಲಿಸಲಾಗಿದ್ದು, ಮಿಲಿಟರಿ ಈಗಾಗಲೇ ಎಲ್ಎಸ್ವಿಯ ಮಾಡಲ್ಗಳನ್ನು ಬಳಸುತ್ತಿದೆ.