ETV Bharat / business

ಎಲೆಕ್ಟ್ರಿಕ್​ ಸ್ಕೂಟರ್​ಗಳಿಗೆ ವೈರ್​ಲೆಸ್​ ಚಾರ್ಜಿಂಗ್ ಪರಿಚಯಿಸಿದ ಎಲ್​ಜಿ - Wireless Power Consortium

ಸ್ಥಳೀಯ ಸ್ಟಾರ್ಟ್ಅಪ್ ಒಲುಲೋ ನಿರ್ವಹಿಸುತ್ತಿರುವ ಕಿಕ್‌ಗೋಯಿಂಗ್, 2018ರ ಸೆಪ್ಟೆಂಬರ್​ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೇವೆಗಳನ್ನು ಪ್ರಾರಂಭಿಸಿತು. ಇಲ್ಲಿ 1.2 ಮಿಲಿಯನ್ ಗ್ರಾಹಕರನ್ನು ಪಡೆದುಕೊಂಡಿದೆ..

tech
tech
author img

By

Published : May 18, 2021, 4:30 PM IST

ಸಿಯೋಲ್ : ಸಾರಿಗೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿಕೊಳ್ಳಲು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಎಲ್​ಜಿ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಪರಿಚಯಿಸಿದೆ.

ಸ್ಥಳೀಯ ಎಲೆಕ್ಟ್ರಿಕ್ ಸ್ಕೂಟರ್ ಹಂಚಿಕೆ ಸೇವಾ ಪೂರೈಕೆದಾರ ಕಿಕ್‌ಗೋಯಿಂಗ್ ಅವರ ಸಹಭಾಗಿತ್ವದಲ್ಲಿ ಸಿಯೋಲ್‌ನ ಪಶ್ಚಿಮದಲ್ಲಿ ಇರುವ ಬುಚಿಯಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವೈರ್‌ಲೆಸ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಎಲ್​ಜಿ ಹೇಳಿದೆ.

ಸಿಯೋಲ್ ಮತ್ತು ಇತರ ಪ್ರದೇಶಗಳನ್ನು ವಿಸ್ತರಿಸಲು ಮುಂದಿನ ಆರು ತಿಂಗಳವರೆಗೆ ಎಲೆಕ್ಟ್ರಿಕ್ ಸ್ಕೂಟರ್ ವೈರ್‌ಲೆಸ್ ಚಾರ್ಜಿಂಗ್ ಉಪಯುಕ್ತತೆ ಮತ್ತು ಸುರಕ್ಷತೆಯನ್ನು ಎರಡೂ ಸಂಸ್ಥೆಗಳು ಪರಿಶೀಲಿಸುತ್ತಾರೆ.

ಬುಚಿಯಾನ್‌ನ ಐದು ಪಾರ್ಕಿಂಗ್ ವಲಯಗಳಲ್ಲಿ ಪ್ರಸ್ತುತ 20 ವೈರ್‌ಲೆಸ್ ಚಾರ್ಜಿಂಗ್ 'ಕಿಕ್ ಸ್ಪಾಟ್‌ಗಳು' ಲಭ್ಯವಿದ್ದು, ಅವುಗಳನ್ನು ವೈರ್‌ಲೆಸ್ ಚಾರ್ಜಿಂಗ್ ರಿಸೀವರ್ ಪ್ಯಾಡ್‌ಗಳೊಂದಿಗೆ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಈಲಾನ್​ ಮಸ್ಕ್​ ಸೋಗಿನಡಿ 2 ಮಿಲಿಯನ್​ ಡಾಲರ್​ ಕಳೆದುಕೊಂಡ ಕ್ರಿಪ್ಟೋಕರೆನ್ಸಿ ಬಳಕೆದಾರರು

ಎಲೆಕ್ಟ್ರಿಕ್ ಸ್ಕೂಟರ್ ಹಂಚಿಕೆ ಸೇವೆಗಳಲ್ಲಿ ದಕ್ಷತೆ ಹೆಚ್ಚಿಸಲು ಮತ್ತು ಹೆಚ್ಚಿನ ಬಳಕೆದಾರರನ್ನು ತರಲು ಇತ್ತೀಚಿನ ಪರಿಹಾರಗಳು ಎರಡೂ ಕಂಪನಿಗಳು ನಿರೀಕ್ಷಿಸುತ್ತವೆ.

ತಮ್ಮ ಸ್ಕೂಟರ್‌ಗಳನ್ನು ವೈರ್‌ಲೆಸ್ ಚಾರ್ಜಿಂಗ್ ಕೇಂದ್ರಗಳಿಗೆ ಹಿಂದಿರುಗಿಸುವ ಬಳಕೆದಾರರಿಗೆ ಬೆಲೆ ರಿಯಾಯಿತಿ ನೀಡಲು ಯೋಜಿಸಿದ್ದಾರೆ.

ಸ್ಥಳೀಯ ಸ್ಟಾರ್ಟ್ಅಪ್ ಒಲುಲೋ ನಿರ್ವಹಿಸುತ್ತಿರುವ ಕಿಕ್‌ಗೋಯಿಂಗ್, 2018ರ ಸೆಪ್ಟೆಂಬರ್​ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೇವೆಗಳನ್ನು ಪ್ರಾರಂಭಿಸಿತು. ಇಲ್ಲಿ 1.2 ಮಿಲಿಯನ್ ಗ್ರಾಹಕರನ್ನು ಪಡೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.