ನವದೆಹಲಿ: ರಿಲಯನ್ಸ್ ಜಿಯೋ ಇದೀಗ 2,399 ರೂ. ಮೌಲ್ಯದ ಹೊಸ ವಾರ್ಷಿಕ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ನೂತನ ಯೋಜನೆಯು ಇತರೆ ಪ್ಲಾನ್ಗಳಿಗಿಂತ ಶೇ 33ರಷ್ಟು ಉಳಿಕೆ ಗ್ರಾಹಕರಿಗೆ ಆಗಲಿದೆ. ವಾರ್ಷಿಕ 2,399 ರೂ. ಶುಲ್ಕದ ರೀಚಾರ್ಜ್ ಪ್ಲಾನ್, ಮನೆಯಿಂದ ಕೆಲಸ ಮಾಡುವವರಿಗೆ (ವರ್ಕ್ ಫ್ರಮ್ ಹೋಮ್) ಅತ್ಯುಪಯುಕ್ತವಾಗಿದೆ. ಮಾಸಿಕವಾಗಿ 200 ರೂ. ಆಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
![Reliance Jio recharge packages](https://etvbharatimages.akamaized.net/etvbharat/prod-images/image0021588945452303-40_0805email_1588945463_596.png)
ಈ ಯೋಜನೆಯಡಿ ಗ್ರಾಹಕರಿಗೆ 2 ಜಿಬಿ ನಿತ್ಯ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಪಡೆಯಬಹುದು.
2,399 ರೂ. ಯೋಜನೆಯು 336 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 2,121 ರೂ. ಯೋಜನೆಯಡಿ 1.5 ಜಿಬಿ ಹೈಸ್ಪೀಡ್ ದೈನಂದಿನ ಡೇಟಾ ಜೊತೆಗೆ ಅನಿಯಮಿತ ಜಿಯೋ-ಟು-ಜಿಯೋ ವಾಯ್ಸ್ ಕಾಲಿಂಗ್, 12,000 ಎಫ್‌ಯುಪಿ ನಾನ್-ಜಿಯೋ ವಾಯ್ಸ್ ಕಾಲಿಂಗ್ ಮತ್ತು 100 ಎಸ್‌ಎಂಎಸ್‌ಗಳನ್ನು ಒದಗಿಸುತ್ತದೆ. ಇದು 336 ದಿನಗಳ ವಾಯ್ದೆ ಹೊಂದಿರಲಿದೆ.
ಪ್ರಿಪೇಯ್ಡ್ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶುಕ್ರವಾರ ಮೂರು ಹೊಸ ಟಾಪ್-ಅಪ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. 151, 201 ಮತ್ತು 251 ರೂ. ಹೊಸ ಆಡ್-ಆನ್ ಪ್ಯಾಕ್‌ಗಳು 'ವರ್ಕ್ ಫ್ರಮ್ ಹೋಮ್' ಪ್ರಿಪೇಯ್ಡ್ ರೀಚಾರ್ಜ್ ಭಾಗವಾಗಿವೆ. ಟಾಪ್-ಅಪ್ ಪ್ಯಾಕ್‌ಗಳು ಮಾಸಿಕ ಅಥವಾ ದೈನಂದಿನ ಡೇಟಾ ಕೋಟಾ ಖಾಲಿ ಮಾಡಿದ ಬಳಿಕ ಈ ಡೇಟಾ ಲಭ್ಯವಾಗಲಿದೆ. 151 ರೂ. ಆಡ್ ಆನ್ ಪ್ಯಾಕ್ಗೆ 30 ಜಿಬಿ ಡೇಟಾ, 201 ರೂ.ಗೆ 40 ಜಿಬಿ ಹಾಗೂ 251 ರೂ.ಗೆ 50 ಜಿಬಿ ಡೇಟಾ ಸಿಗಲಿದೆ.