ನವದೆಹಲಿ: ರಿಲಯನ್ಸ್ ಜಿಯೋ ಜುಲೈ ತಿಂಗಳಲ್ಲಿ 2.5 ಮಿಲಿಯನ್ ಸಕ್ರಿಯ ಚಂದಾದಾರರನ್ನು ಗಳಿಸಿದೆ. ಇದು ಹಿಂದಿನ ತಿಂಗಳಲ್ಲಿ ಕಂಡು ಬಂದ ಕುಸಿತವನ್ನು ಹಿಮ್ಮೆಟ್ಟಿಸಿತು. ಆದರೆ ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 0.4 ಮಿಲಿಯನ್ ಮತ್ತು 3.8 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿವೆ ಎಂದು ಟ್ರಾಯ್ ತಿಳಿಸಿದೆ.
ಉದ್ಯಮದ ಒಟ್ಟಾರೆ ವೈರ್‌ಲೆಸ್ ಚಂದಾದಾರರ ಸಂಖ್ಯೆ ಜುಲೈನಲ್ಲಿ ಸುಮಾರು 3.5 ಮಿಲಿಯನ್ ಏರಿಕೆಯಾಗಿದೆ. ಫೆಬ್ರವರಿ ತಿಂಗಳಿಂದ ಜುಲೈನಲ್ಲಿ ಒಟ್ಟು ಸಕ್ರಿಯ ಚಂದಾದಾರರ ಸಂಖ್ಯೆಯಲ್ಲಿ 2.1 ಮಿಲಿಯನ್ ಕುಸಿದಿದೆ.
ಉದ್ಯಮದ ಸಕ್ರಿಯ ಚಂದಾದಾರರ ಸಂಖ್ಯೆ ಜುಲೈನಲ್ಲಿ 2.1 ಮಿಲಿಯನ್ ಕುಸಿದು, ಜೂನ್ನಲ್ಲಿ 2.8 ಮಿಲಿಯನ್ ಇಳಿಕೆಯಾದ ಬಳಿಕ 956 ಮಿಲಿಯನ್ಗೆ ತಲುಪಿದೆ ಎಂದು ಆಕ್ಸಿಸ್ ಕ್ಯಾಪಿಟಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಮೊಬೈಲ್ ನೆಟ್‌ವರ್ಕ್‌ನಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ ಪ್ರತಿಬಿಂಬಿಸುವ ಪ್ರಮುಖ ಮೆಟ್ರಿಕ್ ವರದಿಯಾದ ವಿಸಿಟರ್ ಲೊಕೇಷನ್ ರಿಜಿಸ್ಟರ್ (ವಿಎಲ್‌ಆರ್) ಆಧರಿಸಿ ಸಕ್ರಿಯ ಚಂದಾದಾರರನ್ನು ಲೆಕ್ಕಹಾಕಲಾಗುತ್ತದೆ.
ಟ್ರಾಯ್ ಮಾಹಿತಿಯ ಪ್ರಕಾರ, ರಿಲಯನ್ಸ್ ಜಿಯೋ 2.5 ಮಿಲಿಯನ್ ಸಕ್ರಿಯ ಚಂದಾದಾರರನ್ನು ಗಳಿಸಿದರೆ, ಏರ್‌ಟೆಲ್ / ವಿಐ ಜುಲೈನಲ್ಲಿ 0.4 / 3.8 ಮಿಲಿಯನ್ ಸಕ್ರಿಯ ಚಂದಾದಾರರನ್ನು ಕಳೆದುಕೊಂಡಿತು. 2020ರ ಜುಲೈನಲ್ಲಿ 1,144 ದಶಲಕ್ಷದಷ್ಟು ವೈರ್‌ಲೆಸ್ ಚಂದಾದಾರರಲ್ಲಿ 955.8 ಮಿಲಿಯನ್ ಬಳಕೆದಾರರು ಸಕ್ರಿಯರಾಗಿದ್ದಾರೆ.
ಸಕ್ರಿಯ ವೈರ್‌ಲೆಸ್ ಚಂದಾದಾರರ ಪ್ರಮಾಣವು ಒಟ್ಟು ವೈರ್‌ಲೆಸ್ ಚಂದಾದಾರರಲ್ಲಿ ಶೇ 83.54 ರಷ್ಟಿದೆ. ಭಾರ್ತಿ ಏರ್‌ಟೆಲ್ ತನ್ನ ಸಕ್ರಿಯ ವೈರ್‌ಲೆಸ್ ಚಂದಾದಾರರ ಗರಿಷ್ಠ ಪ್ರಮಾಣ (ಶೇ 97ರಷ್ಟು) ಹೊಂದಿದೆ. ಜುಲೈ 20ರ ತಿಂಗಳಲ್ಲಿ ಗರಿಷ್ಠ ವಿಎಲ್‌ಆರ್ ದಿನಾಂಕದಂದು ಅದರ ಒಟ್ಟು ವೈರ್‌ಲೆಸ್ ಚಂದಾದಾರರಿಗೆ ಹೋಲಿಸಿದರೆ ಈ ಪ್ರಮಾಣ ಕಂಡುಬಂದಿದೆ.
ಏರ್‌ಟೆಲ್‌ನ 310 ಮಿಲಿಯನ್ ಬಳಕೆದಾರರಿಗೆ ಹೋಲಿಸಿದರೆ ಜುಲೈನಲ್ಲಿ 313 ಮಿಲಿಯನ್ ಬಳಕೆದಾರರು ಜಿಯೋದಲ್ಲಿದ್ದಾರೆ. ವಿಐಎಲ್‌ನಲ್ಲಿ 269 ಮಿಲಿಯನ್ ಚಂದಾದಾರರಿದ್ದರು. ಏರ್‌ಟೆಲ್ 311 ಮಿಲಿಯನ್, ಜಿಯೋ 310 ಮಿಲಿಯನ್ ಹಾಗೂ ವಿಐಎಲ್ 273 ಮಿಲಿಯನ್ ಸಕ್ರಿಯ ಬಳಕದಾರರು ಇದ್ದಾರೆ.