ETV Bharat / business

ಜಿಂದಾಲ್ ನಡೆಸುವ ಶಾಲೆ 500 ಹಾಸಿಗೆಗಳ ಕೋವಿಡ್​ ಆಸ್ಪತ್ರೆಯಾಗಿ ಪರಿವರ್ತನೆ - ಹರಿಯಾಣದಲ್ಲಿ ಕೋವಿಡ್ ಪರಿಸ್ಥಿತಿ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಜಿಂದಾಲ್ ಸ್ಟೇನ್‌ಲೆಸ್‌ನ ನಿರ್ವಹಣೆಯೊಂದಿಗಿನ ಸಭೆಯಲ್ಲಿ ಕಂಪನಿಯ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಆಮ್ಲಜನಕ ಪೂರೈಕೆ ಪರಿಸ್ಥಿತಿ ಪರಿಶೀಲಿಸಿದರು. ಉದ್ದೇಶಿತ 500 ಹಾಸಿಗೆಗಳ ಆಸ್ಪತ್ರೆಯಲ್ಲಿ 50 ಐಸಿಯು ಹಾಸಿಗೆಗಳನ್ನು ಅಳವಡಿಸಲಿದೆ.

Jindal
Jindal
author img

By

Published : Apr 26, 2021, 9:12 PM IST

ನವದೆಹಲಿ: ಜಿಂದಾಲ್ ಸ್ಟೇನ್‌ಲೆಸ್ ಲಿಮಿಟೆಡ್ (ಜೆಎಸ್‌ಎಲ್) ಹಿಸಾರ್‌ನಲ್ಲಿರುವ ತನ್ನ ಒ ಪಿ ಜಿಂದಾಲ್ ಮಾಡರ್ನ್ ಶಾಲೆಯನ್ನು 500 ಹಾಸಿಗೆಗಳ ತುರ್ತು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಜಿಂದಾಲ್ ಸ್ಟೇನ್‌ಲೆಸ್‌ನ ನಿರ್ವಹಣೆಯೊಂದಿಗಿನ ಸಭೆಯಲ್ಲಿ ಕಂಪನಿಯ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಆಮ್ಲಜನಕ ಪೂರೈಕೆ ಪರಿಸ್ಥಿತಿ ಪರಿಶೀಲಿಸಿದರು.

ಉದ್ದೇಶಿತ 500 ಹಾಸಿಗೆಗಳ ಆಸ್ಪತ್ರೆಯಲ್ಲಿ 50 ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಅಗತ್ಯ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"ಈ ಕೋವಿಡ್ ಸೌಲಭ್ಯದೊಂದಿಗೆ ಹಿಸಾರ್ ಮತ್ತು ಸುತ್ತಮುತ್ತಲಿನ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸಲು ನಾವು ಆಶಿಸುತ್ತೇವೆ. ಹಿಸಾರ್‌ನಲ್ಲಿನ ನಮ್ಮ ಆಮ್ಲಜನಕ ಸೌಲಭ್ಯವು ಹಿಸಾರ್ ಮತ್ತು ಸುತ್ತಮುತ್ತಲು ಆಮ್ಲಜನಕವನ್ನು ನಿರಂತರವಾಗಿ ಪೂರೈಸಲಾಗುತ್ತದೆ ಎಂದು ಖಟ್ಟರ್ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಎಸ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಅಭುದಯೆ ಜಿಂದಾಲ್ ಹೇಳಿದರು.

ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಜೆಎಸ್ಎಲ್ ತನ್ನ ಹಿಸ್ಸಾರ್​ ಸೌಲಭ್ಯದಲ್ಲಿರುವ ಆಮ್ಲಜನಕ ಸ್ಥಾವರವು ದಿನಕ್ಕೆ 6 ಟಟ್​ನಿಂದ ಉತ್ಪಾದನಾ ಸಾಮರ್ಥ್ಯವನ್ನು 7.5 -8 ಟನ್​ಗೆ ಹೆಚ್ಚಿಸಿದೆ. ಉತ್ಪಾದನೆಯ ವೆಚ್ಚದಲ್ಲಿದ್ದರೂ ಆಸ್ಪತ್ರೆಗಳಿಗೆ ಹೆಚ್ಚಿನ ಆಮ್ಲಜನಕ ಪೂರೈಸಲು ನಾವು ಸಿದ್ದರಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.