ETV Bharat / business

ದಿವಾಳಿಯಾದ ಜೆಟ್​ ಏರ್​ವೇಸ್​​ಗೆ ಮರುಜೀವ: ಲಂಡನ್​, ಯುಎಇಯಿಂದ ಮುಂದೆ ಬಂದ ಹೂಡಿಕೆದಾರರು! - ಜೆಟ್ ಏರ್​ವೇಸ್​ ಪುನರುಜ್ಜೀವನಕ್ಕೆ ಸಾಲಗಾರರು ಅನುಮೋದನೆ

ಲಂಡನ್ ಮೂಲದ ಕಲ್ರಾಕ್ ಕ್ಯಾಪಿಟಲ್ ಮತ್ತು ಯುಎಇ ಮೂಲದ ಉದ್ಯಮಿಗಳಾದ ಮುರಾರಿ ಲಾಲ್ ಜಲನ್ ಅವರ ಒಕ್ಕೂಟ ಸಲ್ಲಿಸಿದ ರೆಸಲ್ಯೂಷನ್ ಯೋಜನೆಗೆ ಶನಿವಾರ ಅನುಮೋದನೆ ನೀಡಲಾಗಿದೆ. ಆದರೆ, ಒಪ್ಪಂದದ ಇತರ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

Jet Airways
ಜೆಟ್​ ಏರ್​ವೇಸ್​​
author img

By

Published : Oct 17, 2020, 9:04 PM IST

ಮುಂಬೈ: ಜೆಟ್ ಏರ್‌ವೇಸ್‌ನ ಸಾಲಗಾರರು ದೇಶದ ಹಳೆಯ ಖಾಸಗಿ ವಿಮಾನ ಸಂಸ್ಥೆಗೆ ನೂತನ ಗುತ್ತಿಗೆ ನೀಡುವ ರೆಸಲ್ಯೂಷನ್ (ಪುನರುಜ್ಜೀವನ) ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಲಂಡನ್ ಮೂಲದ ಕಲ್ರಾಕ್ ಕ್ಯಾಪಿಟಲ್ ಮತ್ತು ಯುಎಇ ಮೂಲದ ಉದ್ಯಮಿಗಳಾದ ಮುರಾರಿ ಲಾಲ್ ಜಲನ್ ಅವರ ಒಕ್ಕೂಟ ಸಲ್ಲಿಸಿದ ರೆಸಲ್ಯೂಷನ್ ಯೋಜನೆಗೆ ಶನಿವಾರ ಅನುಮೋದನೆ ನೀಡಲಾಗಿದೆ. ಆದರೆ, ಒಪ್ಪಂದದ ಇತರ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

2019ರ ಏಪ್ರಿಲ್​​ನಲ್ಲಿ ಜೆಟ್ ಏರ್​ವೇಸ್ ಡಜನ್​ಗಟ್ಟಲೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಕೇಂದ್ರಗಳಾದ ಸಿಂಗಾಪುರ್, ಲಂಡನ್ ಮತ್ತು ದುಬೈಗೆ ಸೇವೆ ಸಲ್ಲಿಸುತ್ತಿರುವ 120ಕ್ಕೂ ಹೆಚ್ಚು ವಿಮಾನಗಳ ಸೇವೆ ಸ್ಥಗಿತಗೊಳಿಸಿತ್ತು. ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ನಷ್ಟದದ ಪ್ರಮಾಣ ಹೆಚ್ಚಳವಾಯಿತು. ಅಂದಿನಿಂದ ವಿಮಾನಯಾನ ಮತ್ತು ಅದರ ಸಾಲದಾತರು ಹೊಸ ಹೂಡಿಕೆದಾರರನ್ನು ಹುಡುಕುತ್ತಿದ್ದರು.

ಈಗ ಸಿಒಸಿ ರೆಸಲ್ಯೂಷನ್ ಯೋಜನೆ ಅನುಮೋದಿಸಿದ ಬಳಿಕ ರೆಸಲ್ಯೂಷನ್ ವೃತ್ತಿಪರರು ಅದರ ಅನುಮೋದನೆಗಾಗಿ ಎನ್‌ಸಿಎಲ್‌ಟಿಯಲ್ಲಿ ಅರ್ಜಿ ಸಲ್ಲಿಸುವರು. ಕೊನೆಯ ಹಂತದಲ್ಲಿ ಕಂಪನಿಯು ತಮ್ಮ ಅಂತಿಮ ಅನುಮೋದನೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿಮಾನಯಾನದ ಹೊಸ ಮಾಲೀಕರು ಜೆಟ್ ಏರ್‌ವೇಸ್ ಸೇವೆಯ ಮರುಚಾಲನೆಗೆ ಹಲವು ಸವಾಲುಗಳನ್ನು ಎದುರಿಸಲಿದ್ದಾರೆ. ಭಾರಿ ಸಾಲ, ನೌಕರರ ಬಾಕಿ , ವಿಮಾನ ನಿಲ್ದಾಣಗಳು, ನಿರ್ವಹಣೆ ಸೇರಿದಂತೆ ಇತರ ಸಮಸ್ಯೆಗಳು ಎದುರಾಗಲಿವೆ.

ತನ್ನ ಸೇವಾ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರ ವಿಮಾನಯಾನ ಸಂಸ್ಥೆಯು ಹಣಕಾಸು ಮತ್ತು ಕಾರ್ಯಾಚರಣೆಯ ಸಾಲಗಾರರಿಗೆ ಸುಮಾರು ₹ 30,000 ಕೋಟಿ (4.1 ಬಿಲಿಯನ್ ಡಾಲರ್​) ಬಾಕಿ ಇದೆ. ದಿವಾಳಿಯಾದ ವಿಮಾನಯಾನ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲು ಯುಕೆ ಮೂಲದ ಕಾರ್ಲಾಕ್ ಕ್ಯಾಪಿಟಲ್ ಮತ್ತು ಯುಎಇ ಮೂಲದ ಮುರಾರಿ ಲಾಲ್ ಜಲನ್ ಅವರನ್ನೊಳಗೊಂಡ ಒಕ್ಕೂಟವು ನೀಡಿದ ನಿರ್ಣಯ ಜೆಟ್ ಏರ್‌ವೇಸ್‌ನ ಸಾಲಗಾರರ ಸಮಿತಿ ಅನುಮೋದಿಸಿತು.

ಜೆಟ್​ ಏರ್​ವೇಸ್ ಸಾಗಿ ಬಂದ ಹಾದಿ

  • 2019ರ ಏಪ್ರಿಲ್: ಜೆಟ್ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
  • ಜೂನ್: ಎಸ್‌ಬಿಐ ಜೆಟ್‌ ಅನ್ನು ಎನ್‌ಸಿಎಲ್‌ಟಿಗೆ ಕರೆದೊಯ್ಯುತ್ತಿದೆ
  • ಸೆಪ್ಟೆಂಬರ್: ಸಿನರ್ಜಿ ಗ್ರೂಪ್ ಸ್ವಾಧೀನದಕ್ಕೆ ವ್ಯಕ್ತಪಡಿಸಿ ಯೋಜನೆಯಿಂದ ಹಿಂದಕ್ಕೆ ಸರಿಯಿತು
  • 2020ರ ಜನವರಿ: ಆರ್​​ಪಿ ಫ್ರೆಸ್​ ಇಒಐಗೆ ಕರೆ ನೀಡಿತು
  • ಫೆಬ್ರವರಿ: 3 ಹೂಡಿಕೆದಾರರು ಖರೀದಿ ಆಸಕ್ತಿ ವ್ಯಕ್ತಪಡಿಸಿದರು. ಆದರೆ, ರೆಸಲ್ಯೂಷನ್ ಯೋಜನೆ ನೀಡಲು ವಿಫಲರಾದರು
  • ಮಾರ್ಚ್: ಎನ್‌ಸಿಎಲ್‌ಟಿಯಿಂದ ಜೆಟ್‌ನ ಸಿಐಆರ್‌ಪಿಯಲ್ಲಿ ಆರ್​ಪಿ 3 ತಿಂಗಳ ವಿಸ್ತರಣೆ ಕೇಳಿತು
  • ಏಪ್ರಿಲ್: ಆಗಸ್ಟ್ 21ರವರೆಗೆ ಜೆಟ್ ಸಿಐಆರ್​ಪಿ ವಿಸ್ತರಣೆ ಪಡೆಯಿತು
  • ಮೇ: ಸಾಲದಾತರು ಫ್ರೆಸ್​ ಇಒಐ ಕರೆದು 12 ಇಒಐ ಸ್ವೀಕರಿಸಿದರು
  • ಜೂನ್: 12ರಲ್ಲಿನ ಮನವಿಗಳನ್ನು ಕಡಿತಗೊಳಿಸಿ ನಾಲ್ಕಕ್ಕೆ ಸೀಮಿತಗೊಳಿಸಿದರು
  • ಜುಲೈ: ಜೆಟ್‌ನ ಪುನರುಜ್ಜೀವನಕ್ಕೆ ಇಬ್ಬರು ಬಿಡ್​ದಾರರು ರೆಸಲ್ಯೂಷನ್ ಯೋಜನೆ ನೀಡಿದರು
  • ಸೆಪ್ಟೆಂಬರ್: ಬಿಡ್​ದಾರರು ತಮ್ಮ ಯೋಜನೆಗಳಲ್ಲಿ ಸಾಲದಾತರ ಜತೆಗಿನ ಚರ್ಚೆಯ ಬಳಿಕ ಬದಲಾವಣೆ ಮಾಡಿದರು
  • ಅಕ್ಟೋಬರ್: ಯೋಜನೆಯ ಮತದಾನ ಪ್ರಾರಂಭವಾಗಿ, ಅ. 16ರೊಳಗೆ ಮತದಾನ ಮುಕ್ತಾಯಗೊಂಡಿತು
  • ಅಕ್ಟೋಬರ್: ಅಕ್ಟೋಬರ್ 17ರಂದು ಇ-ಮತದಾನ ಮುಕ್ತಾಯವಾಗಿ ಕಲ್ರಾಕ್ ಕ್ಯಾಪಿಟಲ್-ಮುರಾರಿ ಲಾಲ್ ಜಲನ್ ಒಕ್ಕೂಟ ಸಿಒಸಿಗೆ ಆಯ್ಕೆಯಾಯಿತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.