ಸಿಯೋಲ್: ಲಂಚ ಪ್ರಕರಣದಲ್ಲಿ ಜಾಗತಿಕ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್ ಅವರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಕಂಪನಿಯ ಅನುಸರಣಾ ಸಮಿತಿಗೆ ನಿರಂತರವಾಗಿ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್ ತಯಾರಕರಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಲೀ ಜೇ-ಯಂಗ್ ಅವರು ಅಧ್ಯಕ್ಷ ಪಾರ್ಕ್ ಗಿಯುನ್-ಹೈ ಅವರನ್ನು ಕೆಳಕ್ಕಿಳಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಮತ್ತು ಅಧಿಕಾರ ದುರುಪಯೋಗ ಅಪರಾಧಕ್ಕೆ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.
ಅನುಸರಣೆ ಸಮಿತಿಯ ಚಟುವಟಿಕೆಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಲೀ ಹೇಳಿದ್ದು, ಸಮಿತಿಯ ಸದಸ್ಯರಿಗೆ ತಮ್ಮ ಉದ್ಯೋಗ ಮುಂದುವರೆಸುವಂತೆ ಕೇಳಿಕೊಂಡರು ಎಂದು ಸ್ಯಾಮ್ಸಂಗ್ ಗುರುವಾರ ತಿಳಿಸಿದೆ.
ಇದನ್ನೂ ಓದಿ: ಮೋದಿ ಗತ್ತು, ಸೀತಾರಾಮನ್ ತಾಕತ್ತು: 43 ವರ್ಷಗಳಿಂದ ಆಗದ್ದು ಜಸ್ಟ್ 32 ದಿನಗಳಲ್ಲಿ ಫಿನಿಶ್!
ಲೀ ಲಂಚ ಕೊಟ್ಟು ತನ್ನ ಅಧಿಕಾರ ಹಾದಿಯ ಸುಗಮದ ಉತ್ತರಾಧಿಕಾರಕ್ಕೆ ಸಹಾಯ ಮಾಡುವಂತೆ ಸೂಚ್ಯವಾಗಿ ಕೇಳಿಕೊಂಡಿದ್ದರು ಎಂಬುದು ಕೋರ್ಟ್ ವಿಚಾರಣೆಯಲ್ಲಿ ದೃಢಪಟ್ಟಿತ್ತು.
ದೇಶದ ಉನ್ನತ ಕಂಪನಿ ಮತ್ತು ಹೆಮ್ಮೆಯ ಜಾಗತಿಕ ಸ್ಯಾಮ್ಸಂಗ್, ಅಧಿಕಾರದಲ್ಲಿ ಬದಲಾವಣೆ ಆದಾಗಲೆಲ್ಲ ಪದೇ ಪದೆ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ಬಹಳ ದುರದೃಷ್ಟಕರ ಎಂದು ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ತನ್ನ ತೀರ್ಪಿನಲ್ಲಿ ಸೋಮವಾರ ಬೇಸರ ವ್ಯಕ್ತಪಡಿಸಿತ್ತು. ವಿಚಾರಣೆಯ ಸಮಯದಲ್ಲಿ ದೂರುದಾರರು ಉಲ್ಲೇಖಿಸಿದ್ದರು.