ETV Bharat / business

ತೈಲ ಕಳ್ಳತನ ತಡೆ, ಕೆಲಸಗಾರರ ಸುರಕ್ಷತೆಗೆ ಡ್ರೋನ್​ಗಳ ಬಳಕೆ: ಐಒಸಿ - ಡ್ರೋನ್ ಬಳಕೆಗೆ ಐಒಸಿ ನಿರ್ಧಾರ

ತೈಲ ಕಳ್ಳತನವನ್ನು ತಡೆಗಟ್ಟಲು ಮತ್ತು ಕೆಲಸಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಿಮೋಟ್ ಆಧಾರಿತ ಏರ್‌ಕ್ರಾಫ್ಟ್ ಸಿಸ್ಟಮ್ (ಆರ್‌ಪಿಎಎಸ್) ಅಥವಾ ಡ್ರೋನ್‌ಗಳಿಗೆ ಅವಕಾಶ ನೀಡುವಂತೆ ಐಪಿಸಿ ಕಳೆದ ತಿಂಗಳು ವಾಯುಯಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು. ನಾಗರಿಕ ವಿಮಾನಯಾನ ಸಚಿವಾಲಯವು ಈ ಕ್ರಮಕ್ಕಾಗಿ ಇದ್ದ ಅಡೆತಡೆಯನ್ನು ತೆರವುಗೊಳಿಸಿದೆ.

IOC
ಐಒಸಿ
author img

By

Published : Jul 9, 2020, 4:41 PM IST

ನವದೆಹಲಿ: ಭಾರತೀಯ ತೈಲ ನಿಗಮವು (ಐಒಸಿ) ದೇಶಾದ್ಯಂತ ವಿವಿಧ ಪೈಪ್‌ಲೈನ್ ಯೋಜನೆಗಳ ಕಳ್ಳತನ ತಡೆಯಲು ಡ್ರೋನ್‌ಗಳನ್ನು ಬಳಸಿಕೊಳ್ಳಲು ಸಜ್ಜಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಈ ಕ್ರಮಕ್ಕಾಗಿ ಇದ್ದ ಅಡೆತಡೆಯನ್ನು ತೆರವುಗೊಳಿಸಿದೆ ಮತ್ತು ದೆಹಲಿ ಪಾಣಿಪತ್ ಪೈಪ್‌ಲೈನ್ ಯೋಜನೆಯಲ್ಲಿ ಪ್ರಥಮವಾಗಿ ಇದರ ಅಳವಡಿಕೆಗೆ ಅನುಮತಿಸಿದೆ ಎಂದು ಐಪಿಸಿ ವಕ್ತಾರ ತಿಳಿಸಿದ್ದಾರೆ.

ತೈಲ ಕಳ್ಳತನವನ್ನು ತಡೆಗಟ್ಟಲು ಮತ್ತು ಕೆಲಸಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಿಮೋಟ್ ಆಧಾರಿತ ಏರ್‌ಕ್ರಾಫ್ಟ್ ಸಿಸ್ಟಮ್ (ಆರ್‌ಪಿಎಎಸ್) ಅಥವಾ ಡ್ರೋನ್‌ಗಳಿಗೆ ಅವಕಾಶ ನೀಡುವಂತೆ ಐಪಿಸಿ ಕಳೆದ ತಿಂಗಳು ವಾಯುಯಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು ಎಂದು ಐಒಸಿ ಮೂಲಗಳು ತಿಳಿಸಿವೆ.

ಪ್ಯಾರದೀಪ್-ಹೈದರಾಬಾದ್, ಪ್ಯಾರದೀಪ್- ಹಡಿಯಾ ಮತ್ತು ತಮಿಳುನಾಡಿನ ಎನ್ನೋರ್-ತೂತ್ತುಕುಡಿ ಸೇರಿದಂತೆ ವಿವಿಧ ಪೈಪ್‌ಲೈನ್ ಯೋಜನೆಗಳಲ್ಲಿ ವೈಮಾನಿಕ ಕಣ್ಗಾವಲು ವಿಸ್ತರಿಸಲು ಐಒಸಿ ನಿರ್ಧರಿಸಿದೆ.

ವೈಮಾನಿಕ ಕಣ್ಗಾವಲು ಕಾರ್ಯಗಳಿಗಾಗಿ ಡ್ರೋನ್‌ಗಳನ್ನು ನಿರ್ವಹಿಸಲು ಗೃಹ, ರಕ್ಷಣಾ, ಭಾರತೀಯ ವಾಯುಪಡೆ (ಐಎಎಫ್), ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲು ಐಒಸಿ ಕೋರಿತ್ತು.

ಈ ಕಾರ್ಯಗಳ ಮೇಲ್ವಿಚಾರಣೆಗೆ ಡ್ರೋನ್‌ಗಳ ತಯಾರಿಕಾ ಯೋಜನಾ ವೆಚ್ಚದ ಬಗ್ಗೆ ಕೇಳಿದಾಗ, ಪೈಪ್‌ಲೈನ್ ಯೋಜನೆ ವೆಚ್ಚಕ್ಕಾಗಿ ಈಗಾಗಲೇ ನಿಗದಿಪಡಿಸಿದ ನಿಧಿಯಿಂದ ಇದನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.