ಸ್ಯಾನ್ ಫ್ರಾನ್ಸಿಸ್ಕೊ: ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್ ಕಲಿಕೆ (ಎಂಎಲ್) ನಿರ್ವಹಣೆ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಇಂಟೆಲ್,ಇಸ್ರೇಲ್ ಮೂಲದ ಸಿಎನ್ವಿಆರ್ಜಿ.ಐಒ ಕಂಪಕನಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಟೆಕ್ಕ್ರಂಚ್ ವರದಿಯ ಪ್ರಕಾರ, ಇಸ್ರೇಲಿ ಕಂಪನಿಯು ಡೇಟಾ ವಿಜ್ಞಾನಿಗಳಿಗೆ ಮಷಿನ್ ಕಲಿಕೆ ಮಾದರಿಗಳನ್ನು ನಿರ್ಮಿಸಲು ಮತ್ತು ಅದರ ಚಲಾವಣೆಗೆ ವೇದಿಕೆ ನಿರ್ವಹಿಸುತ್ತದೆ. ಇದನ್ನು ಅನೇಕ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಟ್ರ್ಯಾಕ್ ಮಾಡಲು ಬಳಸಬಹುದಾಗಿದೆ ಎಂದಿದೆ.
ನಾವು ಸಿಎನ್ವಿಆರ್ಜಿ ಅನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂಬುದನ್ನು ದೃಢೀಕರಿಸುತ್ತೇವೆ. ಸಿಎನ್ವಿಆರ್ಜಿ ಸ್ವತಂತ್ರ ಇಂಟೆಲ್ ಕಂಪನಿಯಾಗಿರುತ್ತದೆ. ಅದರ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತದೆ ಎಂದು ಇಂಟೆಲ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಪ್ಪಂದದ ಹಣಕಾಸಿನ ಮೊತ್ತವನ್ನು ಬಹಿರಂಗಪಡಿಸಿಲ್ಲ. ಯೋಚೆ ಎಟುನ್ (ಸಿಇಒ) ಮತ್ತು ಲೇಹ್ ಫೋರ್ಕೋಶ್ ಕೋಲ್ಬೆನ್ ಇದರ ಸಂಸ್ಥಾಪಕರು. ಸಿಎನ್ವಿಆರ್ಜಿ ಹೂಡಿಕೆದಾರರಿಂದ 8 ಮಿಲಿಯನ್ ಡಾಲರ್ ಸಂಪತ್ತು ಸಂಗ್ರಹಿಸಿದೆ. ಇತ್ತೀಚಿನ ಅವಧಿಯಲ್ಲಿ ಸುಮಾರು 17 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ.
ಮೇ ತಿಂಗಳಲ್ಲಿ ಚಿಪ್ ತಯಾರಕ ಇಸ್ರೇಲಿ ಕಂಪನಿಯ ಸಾರಿಗೆ ಯೋಜನೆ ಸೇವೆ ಮೂವಿಟ್ ಅನ್ನು 900 ದಶಲಕ್ಷ ಡಾಲರ್ಗೆ ಖರೀದಿಸಿತ್ತು. ವಾಹನ ದಟ್ಟಣೆ ಮೇಲ್ವಿಚಾರಣೆ ಮತ್ತು ಸಾರಿಗೆ ಶಿಫಾರಸುಗಳಿಗೆ ಕಂಪನಿಯು ಎಐ ಮತ್ತು ಬೃಹತ್ ಡೇಟಾ ವಿಶ್ಲೇಷಣೆಗೆ ನೆರವಾಗುತ್ತದೆ.