ಬೆಂಗಳೂರು: ಸಿಲಿಕಾನ್ ಸಿಟಿಯ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್, ತನ್ನ 2015 ಪ್ರೋತ್ಸಾಹಕ ಪರಿಹಾರ ಯೋಜನೆಯಡಿ ಸಿಇಒ ಸಲೀಲ್ ಪರೇಖ್ ಅವರಿಗೆ 3.25 ಕೋಟಿ ರೂ. ನೀಡಲು ಇನ್ಫಿ ಮುಂದಾಗಿದೆ.
ಕಂಪನಿಯು ಸಿಇಒಗೆ ನಿರ್ಬಂಧಿತ ಸ್ಟಾಕ್ ಯೂನಿಟ್‌ಗಳ (ಆರ್‌ಎಸ್‌ಯು) ರೂಪದ ಪ್ರೋತ್ಸಾಹ ಧನ ಒದಗಿಸಿದೆ. ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ. ಪ್ರವೀಣ್ ರಾವ್ ಅವರಿಗೆ 58,650 ಆರ್‌ಎಸ್‌ಯು ನೀಡಲಾಗಿದೆ ಎಂದು ಕಂಪನಿಯು ಫೈಲಿಂಗ್ನಲ್ಲಿ ತಿಳಿಸಿದೆ.
ಐದು ಪ್ರಮುಖ ನಿರ್ವಹಣಾ ವ್ಯಕ್ತಿಗಳು (ಕೆಎಂಪಿ) 3,53,270 ಆರ್‌ಎಸ್‌ಯುಗಳನ್ನು ಸ್ವೀಕರಿಸಲಿದ್ದು, ಪ್ರತಿ ಕೆಎಂಪಿಯು ಆರ್‌ಎಸ್‌ಯು 1.75 ಕೋಟಿ ರೂ. ಆಗಿದ್ದು, ನಾಲ್ಕು ವರ್ಷಗಳ ಅವಧಿಗೆ ಇದನ್ನು ಪಡೆಯಲಿದ್ದಾರೆ.
ಈ ಸವಲತ್ತಿನಡಿ 371 ಅರ್ಹ ಉದ್ಯೋಗಿಗಳಿಗೆ 1,487,150 ಆರ್‌ಎಸ್‌ಯು ನೀಡಲಾಗಿದೆ. ಈ ಷೇರುಗಳು ನಾಲ್ಕು ವರ್ಷಗಳ ಸಮಾನ ಸ್ವಾಧೀನದ ಅವಧಿಯನ್ನು ಸಹ ಹೊಂದಿರುತ್ತವೆ ಎಂದು ಹೇಳಿದೆ.