ETV Bharat / business

ಇಂಡಿಗೊದಿಂದ 'ಡೋರ್ To ಡೋರ್' ಲಗೇಜ್ ವರ್ಗಾವಣೆ ಸೇವೆ: ಯಾವ ಸಿಟಿ, ಶುಲ್ಕ ಎಷ್ಟು ಗೊತ್ತೇ? - ಇಂಡಿಗೊ- ಕಾರ್ಟರ್‌ಪೋರ್ಟರ್

ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಮನೆಯಿಂದ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಿಂದ ಮನೆಗೆ ‘ಮನೆ-ಮನೆಗೆ-ಬ್ಯಾಗೇಜ್ ವರ್ಗಾವಣೆ’ (ಡೋರ್ ಟು ಡೋರ್ ಲಗೇಜ್ ಸರ್ವೀಸ್​) ಮೂಲಕ ಸಾಗಿಸಬಹುದು. ಪ್ರಸ್ತುತ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಲಭ್ಯವಾಗಲಿದೆ.

IndiGo
IndiGo
author img

By

Published : Apr 2, 2021, 7:02 PM IST

ನವದೆಹಲಿ: ದೇಶೀಯ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೊ, ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಸೇವೆ ಪ್ರಾರಂಭಿಸಿದೆ.

ಇನ್ನು ಮುಂದೆ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಮನೆಯಿಂದ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಿಂದ ಮನೆಗೆ (ಡೋರ್ ಟು ಡೋರ್ ಲಗೇಜ್ ಸರ್ವೀಸ್​) ಮೂಲಕ ಸಾಗಿಸಬಹುದು. ಈ ಸೇವೆ ಪ್ರಸ್ತುತ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಮುಂಬೈ ಮತ್ತು ಬೆಂಗಳೂರಿನಲ್ಲಿ ಲಭ್ಯವಾಗಲಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಆನ್‌ಲೈನ್ ಲಾಜಿಸ್ಟಿಕ್ಸ್ ಸೇವೆಗಳ ಕಂಪನಿಯಾದ ಕಾರ್ಟರ್ ಪೋರ್ಟರ್‌ನ ಸಹಭಾಗಿತ್ವದಲ್ಲಿ ಇಂಡಿಗೊ ಈ ಸೇವೆಗಳನ್ನು ‘6 ಇಬ್ಯಾಗ್‌ಪೋರ್ಟ್’ ಹೆಸರಿನಲ್ಲಿ ಶುರು ಮಾಡಿದೆ. 6 ಇಬ್ಯಾಗ್‌ಪೋರ್ಟ್‌ನೊಂದಿಗೆ ಪ್ರಯಾಣಿಕರಿಂದ ಸಾಮಾನುಗಳನ್ನು ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಅವರಿಗೆ ಸಂಬಂಧಿಸಿದ ನಿಗದಿತ ಸ್ಥಳಕ್ಕೆ ತಲುಪಿಸುವುದಾಗಿ ವಿಮಾನಯಾನ ಸಂಸ್ಥೆ ಭರವಸೆ ಕೊಟ್ಟಿದೆ.

ಇದನ್ನೂ ಓದಿ: 2 ಗಂಟೆಯಲ್ಲಿ ಮನೆ ಸೇರಲಿವೆ 'ಬಿಗ್ ಬಜಾರ್' ವಸ್ತುಗಳು: ₹____ಗಿಂತ ಜಾಸ್ತಿ ಖರೀದಿಸಿದ್ರೆ ಡೆಲಿವರಿ ಫ್ರೀ!

ಇದರಡಿ ಟ್ರ್ಯಾಕಿಂಗ್ ಸೌಲಭ್ಯವನ್ನೂ ಹೊಂದಿದೆ. ಗ್ರಾಹಕರು ತಮ್ಮ ಸಾಮಾನು ಇರುವ ಸ್ಥಳವನ್ನು ಪತ್ತೆಹಚ್ಚಲು ಇದು ಅನುವು ಮಾಡಿಕೊಡುತ್ತದೆ. ನಿರ್ಗಮನಕ್ಕೆ 24 ಗಂಟೆಗಳ ಮೊದಲು ಮತ್ತು ಇಳಿದ ನಂತರ ಯಾವುದೇ ಸಮಯದಲ್ಲಿ ಈ ಸೇವೆಯನ್ನು ಬಳಸಬಹುದು ಎಂದು ಇಂಡಿಗೊ ಹೇಳಿದೆ.

ಈ ಸೇವೆಗಳು 630 ರೂ. (ಪ್ರತಿ ವರ್ಗಾವಣೆಗೆ) ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಇದಲ್ಲದೆ 5,000 ರೂ.ಗಳ ದರದಲ್ಲಿ ಸೇವಾ ವಿಮೆ ಸಹ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.