ETV Bharat / business

20 ಕೋಟಿ 'ಸ್ಪುಟ್ನಿಕ್​ ವಿ' ಲಸಿಕೆ ಉತ್ಪಾದನೆಗೆ ಭಾರತದ ವಿರ್ಚೋ - ರಷ್ಯಾದ ಡಿಐಎಫ್​ ಜಂಟಿ ಒಪ್ಪಂದ - Virchow Biotech

ಮಾರ್ಚ್ 19ರಂದು ಆರ್​ಡಿಐಎಫ್ ಮತ್ತು ಭಾರತದ ಸ್ಟೆಲಿಸ್ ಬಯೋಫಾರ್ಮಾ ಅವರು ಕನಿಷ್ಠ 20 ಕೋಟಿ ಡೋಸ್ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆ ಉತ್ಪಾದಿಸಲು ಮತ್ತು ಪೂರೈಸಲು ಸಹಭಾಗಿತ್ವ ಮಾಡಿಕೊಂಡಿವೆ.

Sputnik V doses
Sputnik V doses
author img

By

Published : Mar 22, 2021, 4:45 PM IST

ನವದೆಹಲಿ: ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಮತ್ತು ಹೈದರಾಬಾದ್ ಮೂಲದ ವಿರ್ಚೋ ಬಯೋಟೆಕ್ ಭಾರತದಲ್ಲಿ 20 ಕೋಟಿ ಪ್ರಮಾಣದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿವೆ.

ತಂತ್ರಜ್ಞಾನ ವರ್ಗಾವಣೆ 2021ರ ಎರಡನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ನಂತರ ಪೂರ್ಣ ಪ್ರಮಾಣದ ವಾಣಿಜ್ಯ ಉತ್ಪಾದನೆಯನ್ನು ಸ್ಪುಟ್ನಿಕ್ ವಿ, ಆರ್‌ಡಿಐಎಫ್ ಮತ್ತು ವಿರ್ಚೋ ಬಯೋಟೆಕ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.

ವಿರ್ಚೋ ಬಯೋಟೆಕ್, ಆರ್‌ಡಿಐಎಫ್‌ನ ಅಂತಾರಾಷ್ಟ್ರೀಯ ಪಾಲುದಾರರಿಗೆ ಸ್ಪುಟ್ನಿಕ್ ವಿ ಅನ್ನು ಜಾಗತಿಕವಾಗಿ ಸರಬರಾಜು ಮಾಡಲು ನೆರವಾಗುತ್ತದೆ ಎಂದು ಹೇಳಿದೆ.

ವಿರ್ಚೋ ಬಯೋಟೆಕ್‌ ಜತೆಗಿನ ಒಪ್ಪಂದವು ಭಾರತದಲ್ಲಿ ಲಸಿಕೆಯ ಪೂರ್ಣ ಪ್ರಮಾಣದ ಸ್ಥಳೀಯ ಉತ್ಪಾದನೆಗೆ ಅನುಕೂಲವಾಗುವಂತೆ ಹಾಗೂ ಜಾಗತಿಕವಾಗಿ ನಮ್ಮ ಅಂತಾರಾಷ್ಟ್ರೀಯ ಪಾಲುದಾರರಿಗೆ ಪೂರೈಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಆರ್‌ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಸ್ಥಾಪಿಸಲು ಕಾರ್ಪೊರೇಟ್​ ಸಂಸ್ಥೆಗಳಿಗೆ ಅವಕಾಶ: ಕೇಂದ್ರ ಸರ್ಕಾರ ಹೇಳುವುದೇನು?

ಸ್ಪುಟ್ನಿಕ್ ವಿ ಕೊರೊನಾ ವೈರಸ್ ಲಸಿಕೆ ತಯಾರಿಸಲು ಆರ್‌ಡಿಐಎಫ್‌ ಜತೆಗಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ನಾವು ಸಂತಸವಾಗುತ್ತದೆ. ದೊಡ್ಡ ಪ್ರಮಾಣದ ಔಷಧ ಪದಾರ್ಥ ತಯಾರಿಕೆಯಲ್ಲಿ ವಿರ್ಚೋ ಈ ಲಸಿಕೆಯ ಜಾಗತಿಕ ಬೇಡಿಕೆ ಪೂರೈಸಲು ಸಹಾಯ ಮಾಡುತ್ತದೆ ಎಂದು ವಿರ್ಚೋ ಬಯೋಟೆಕ್ ಎಂಡಿ ತುಮ್ಮುರು ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 19ರಂದು ಆರ್​ಡಿಐಎಫ್ ಮತ್ತು ಭಾರತದ ಸ್ಟೆಲಿಸ್ ಬಯೋಫಾರ್ಮಾ ಅವರು ಕನಿಷ್ಠ 20 ಕೋಟಿ ಡೋಸ್ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆ ಉತ್ಪಾದಿಸಲು ಮತ್ತು ಪೂರೈಸಲು ಸಹಭಾಗಿತ್ವ ಮಾಡಿಕೊಂಡಿವೆ ಎಂದು ಹೇಳಿದರು.

ಕಳೆದ ಜನವರಿಯಲ್ಲಿ ಹೈದರಾಬಾದ್ ಮೂಲದ ಮತ್ತೊಂದು ಫಾರ್ಮಾ ಮೇಜರ್ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದಿರುವುದಾಗಿ ಘೋಷಿಸಿತ್ತು.

ಕಳೆದ ಆಗಸ್ಟ್​ನಲ್ಲಿ ಸ್ಪುಟ್ನಿಕ್ ವಿ ವಿಶ್ವದ ಕೊರೊನಾ ವೈರಸ್ ಲಸಿಕೆ ವಿರುದ್ಧ ನೋಂದಾಯಿತ ಮೊದಲ ಲಸಿಕೆಯಾಗಿದೆ. ಆರ್‌ಡಿಐಎಫ್ ಪ್ರಕಾರ, ಜಾಗತಿಕವಾಗಿ 54 ದೇಶಗಳಲ್ಲಿ ಲಸಿಕೆ ನೋಂದಾಯಿಸಲಾಗಿದ್ದು, ಒಟ್ಟು 140 ಕೋಟಿ ಜನಸಂಖ್ಯೆ ನೀಡುವ ಉದ್ದೇಶ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.