ದುಬೈ : ದುಬೈ ಡ್ಯೂಟಿ ಫ್ರೀ (ಡಿಡಿಎಫ್) ನಡೆಸಿದ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೆಯಲ್ಲಿ ಭಾರಿ ಮೊತ್ತದ ಬಹುಮಾನ ಭಾರತೀಯ ಶಾಲಾ ಪ್ರಾಂಶುಪಾಲರಿಗೆ ಒಲಿದಿದೆ.
ಡಿಡಿಎಫ್ ರಾಫೆಲ್ ಡ್ರಾದಲ್ಲಿ ಅಜ್ಮಾನ್‌ನ ಭಾರತೀಯ ಪ್ರೌಢ ಶಾಲೆಯ ಪ್ರಾಂಶುಪಾಲರು ಒಂದು ಮಿಲಿಯನ್ ಡಾಲರ್ ಗೆದ್ದಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನಡೆದ ಡ್ರಾ ಬಳಿಕ ಮಾಲತಿ ದಾಸ್ ಅವರು ಒಂದು ಮಿಲಿಯನ್ ಡಾಲರ್ ಗೆದ್ದಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ದಾಸ್, ಈ ಗೆಲುವಿಗೆ ಕೃತಜ್ಞನಾಗಿದ್ದೇನೆ. "ಪ್ರಸ್ತುತ ಕಾಲದಲ್ಲಿ, ಇದು ಒಂದು ದೊಡ್ಡ ಆಶೀರ್ವಾದ. ಈ ಹಣವನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ" ಎಂದರು.
ಭಾರತಕ್ಕೆ ತೆರಳಲು ತಾನು ಕಾಯುತ್ತಿದ್ದೇನೆ. ಅಲ್ಲಿ ಹಣದ ಅಗತ್ಯವಿರುವ ನನ್ನ ಕೆಲವು ಸಂಬಂಧಿಕರಿಗೆ ಸಹಾಯ ಮಾಡಲು ಬಯಸುತ್ತೇನೆ. ಅಜ್ಮಾನ್‌ನಲ್ಲಿರುವ ಶಾಲೆಗೆ ಸ್ವಲ್ಪ ಹಣ ಮೀಸಲಿಡಲು ಬಯಸುತ್ತೇನೆ ಎಂದರು.
ಡಿಡಿಎಫ್ ಸಂಘಟಕರ ಪ್ರಕಾರ, ದಾಸ್ 1999ರಲ್ಲಿ ಪ್ರಾರಂಭವಾದಾಗಿನಿಂದ ಮಿಲಿಯನ್ ಡಾಲರ್ ಗೆದ್ದ 165ನೇ ಭಾರತೀಯ ಆಗಿದ್ದಾನೆ. ಡಿಡಿಎಫ್ ಮಿಲೇನಿಯಮ್ ಮಿಲಿಯನೇರ್ ಟಿಕೇಟ್ ಖರೀದಿದಾರರಲ್ಲಿ ಭಾರತೀಯ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದೆ.