ನವದೆಹಲಿ: ವೊಡಾಫೋನ್ ಗ್ರೂಪ್ ಪಿಎಲ್‌ಸಿಯಿಂದ 22,100 ಕೋಟಿ ರೂ. ಪೂರ್ವಾನ್ವಯ ತೆರಿಗೆ ಬೇಡಿಕೆ ರದ್ದುಪಡಿಸಿದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ ತೀರ್ಪನ್ನು ಸಿಂಗಾಪುರ ನ್ಯಾಯಾಲಯದಲ್ಲಿ ಭಾರತ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಟಿಷ್ ಟೆಲಿಕಾಂ ದೈತ್ಯ 2007ರ ಭಾರತೀಯ ಆಪರೇಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಂಬಂಧಿಸಿದ ತೆರಿಗೆ ಮತ್ತು ದಂಡದ ಪ್ರಮಾಣ 22,100 ಕೋಟಿ ರೂ.ಯಷ್ಟು ಭಾರತಕ್ಕೆ ಪಾವತಿಸಬೇಕಿದೆ ಎಂದು ಕೋರ್ಟ್ ಮುಂದೆ ಬೇಡಿಕೆ ಇಟ್ಟಿದೆ.
ಭಾರತದ ಬೇಡಿಕೆಯನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಸೆ.25ರಂದು ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತಕ್ಕೆ 90 ದಿನಗಳ ಕಾಲಾವಕಾಶವಿದೆ. ಈ ವಾರದ ಆರಂಭದಲ್ಲಿ ಸಿಂಗಾಪುರ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಎಂದು ಈ ಬಗ್ಗೆ ತಿಳಿದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 15.64 ಶತಕೋಟಿ ಡಾಲರ್ ಖರೀದಿಸಿದ ಆರ್ಬಿಐ
ಹೇಗ್‌ನ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ನಲ್ಲಿ ಮೂರು ಸದಸ್ಯರ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಲು ಸರ್ಕಾರವು ವೇದಿಕೆ ಸಿದ್ಧಪಡಿಸಿದೆ. ಇದು ಬ್ರಿಟಿಷ್ ತೈಲ ಮತ್ತು ಅನಿಲ ಕಂಪನಿ ಕೈರ್ನ್ ಎನರ್ಜಿ ಪಿಎಲ್‌ಸಿಗೆ 1.4 ಬಿಲಿಯನ್ ಡಾಲರ್ ಹಿಂದಿರುಗಿಸುವಂತೆ ಭಾರತ ಕೇಳಿದೆ.