ETV Bharat / business

'ಕೊರೊನಿಲ್'​ನಿಂದ ಕೋವಿಡ್ ಗುಣಮುಖ ಆಗುತ್ತೆ ಎಂಬ ರಾಮದೇವ್​ ಹೇಳಿಕೆ ಶುದ್ಧ ಸುಳ್ಳು: ಐಎಂಎ ವಾಗ್ದಾಳಿ

ಕೊರೊನಿಲ್ ಡಿಸಿಜಿಐ ಅನುಮೋದನೆ ಮತ್ತು ಡಬ್ಲ್ಯುಎಚ್‌ಒ ಪ್ರಮಾಣೀಕರಣದ ಬಗ್ಗೆ ಯೋಗ ಗುರು ಬಾಬಾ ರಾಮ್‌ದೇವ್ ಅವರು ನೀಡಿದ್ದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ.

Coronil
Coronil
author img

By

Published : Feb 22, 2021, 6:25 PM IST

ನವದೆಹಲಿ: ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧವು ಭಾರತ ಸರ್ಕಾರದ ಆಯುಷ್ ಸಚಿವಾಲಯದಿಂದ ಪ್ರಮಾಣೀಕರಣ ಪಡೆದ ಕೆಲವು ದಿನಗಳ ನಂತರ, ಭಾರತೀಯ ವೈದ್ಯಕೀಯ ಸಂಘ (ಐಎಂಎ), ಕೋವಿಡ್​-19 ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಮೊದಲ ಸಾಕ್ಷ್ಯ ಆಧಾರಿತ ಔಷಧವಾಗಿ ಪ್ರಚಾರ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಕೊರೊನಿಲ್ ಡಿಸಿಜಿಐ ಅನುಮೋದನೆ ಮತ್ತು ಡಬ್ಲ್ಯುಎಚ್‌ಒ ಪ್ರಮಾಣೀಕರಣದ ಬಗ್ಗೆ ಯೋಗ ಗುರು ಬಾಬಾ ರಾಮ್‌ದೇವ್ ಅವರು ನೀಡಿದ್ದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್​ -19 ಚಿಕಿತ್ಸೆಗಾಗಿ ಪತಂಜಲಿಯ ಔಷಧದ ಪರಿಣಾಮಕಾರಿತ್ವ ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸ್ಪಷ್ಟವಾಗಿ ಹೇಳಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಆಧುನಿಕ ವೈದ್ಯಕೀಯ ವೈದ್ಯರಾಗಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಕೊರೊನಿಲ್ ಔಷಧವನ್ನು ಉತ್ತೇಜಿಸಬಾರದು ಎಂದು ಹೇಳಿದೆ.

ಇದನ್ನೂ ಓದಿ: ಕೇಂದ್ರ & ರಾಜ್ಯಗಳ ವಿತ್ತೀಯ ಅಗತ್ಯಗಳ ನಡುವೆ ಸಮತೋಲನ ಸಾಧಿಸಲು ಹಣಕಾಸು ಆಯೋಗ ಪ್ರಯತ್ನ- ಎನ್.ಕೆ.ಸಿಂಗ್

ವೈದ್ಯರು ಯಾವುದೇ ಔಷಧ ಅಥವಾ ಡ್ರಗ್ಸ್​ ಹೆಸರು, ಚಿನ್ಹೆ ಅಥವಾ ಛಾಯಾಚಿತ್ರದೊಂದಿಗೆ ಯಾವುದೇ ರೂಪದಲ್ಲಿ ಶಿಫಾರಸು ಮಾಡುವುದಿಲ್ಲ. ಅಂತಹದನ್ನು ಅನುಮೋದಿಸಬಾರದು ಕೂಡ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಿಗದಿಪಡಿಸಿದ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಈ ಬಗ್ಗೆ ಪತ್ರ ಬರೆಯುವುದಾಗಿ ಐಎಂಎ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವರಾಗಿ ಅವೈಜ್ಞಾನಿಕ ಉತ್ಪನ್ನವನ್ನು ಬಿಡುಗಡೆ ಮಾಡುವುದು ಎಷ್ಟು ಸಮಂಜಸ ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಜಯಲಾಲ್ ಪ್ರಶ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.