ETV Bharat / business

ಮುಳುಗುತ್ತಿದ್ದ ಯೆಸ್​ ಬ್ಯಾಂಕ್ ಗ್ರಾಹಕರ ರಕ್ಷಣೆಗೆ ಧಾವಿಸಿತು ಮತ್ತೊಂದು ಖಾಸಗಿ ಬ್ಯಾಂಕ್​! - ಐಸಿಐಸಿಐ ಬ್ಯಾಂಕ್

ಯೆಸ್​ ಬ್ಯಾಂಕ್​ ಮೇಲೆ ₹ 1,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಐಸಿಐಸಿಐ ಬ್ಯಾಂಕಿನ ಆಡಳಿತ ಮಂಡಳಿ ಅನುಮತಿ ನೀಡಿದೆ.

Yes Bank
ಯೆಸ್​ ಬ್ಯಾಂಕ್
author img

By

Published : Mar 13, 2020, 5:31 PM IST

ನವದೆಹಲಿ: ಹಣಕಾಸಿನ ಬಿಕ್ಕಟ್ಟಿನಿಂದ ಮುಳುಗುವ ಹಡಗಿನಂತಾದ ಯೆಸ್​ ಬ್ಯಾಂಕ್ ಪುನಶ್ಚೇತನಕ್ಕೆ ಆರ್​ಬಿಐ ರೂಪಿಸಿದ ಕರಡು ನೀತಿ ಯೋಜನೆಗೆ ಈಗ ಮತ್ತೊಂದು ಖಾಸಗಿ ಬ್ಯಾಂಕ್​ ಕೈಜೋಡಿಸಿದೆ.

ಯೆಸ್​ ಬ್ಯಾಂಕ್​ ಮೇಲೆ ₹ 1,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಐಸಿಐಸಿಐ ಬ್ಯಾಂಕಿನ ಆಡಳಿತ ಮಂಡಳಿ ಮುಂದಾಗಿದೆ.

ಯೆಸ್​ ಬ್ಯಾಂಕ್​ ಲಿಮಿಟೆಡ್​ನಲ್ಲಿ ಶೇ. 5ರಷ್ಟು ಷೇರು ಖರೀದಿಸಿ ಹೂಡಿಕೆ ಮಾಡಲು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮುಂದಾಗಿದೆ ಎಂದು ಕಂಪನಿಯು ರೆಗ್ಯೂಲೆಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ನಿನ್ನೆಯಷ್ಟೇ ಯೆಸ್​ ಬ್ಯಾಂಕ್​ನ ತಲಾ ಪ್ರತಿ ಷೇರಿಗೆ ₹ 10 ಯಂತೆ ಒಟ್ಟು 725 ಕೋಟಿ ಮೌಲ್ಯದ ಷೇರುಗನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿಯು ಅನುಮತಿ ನೀಡಿತ್ತು.

ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಯೆಸ್​ ಬ್ಯಾಂಕ್ ಪುನಶ್ಚೇತನಕ್ಕೆ ಹಾಗೂ ಹೂಡಿಕೆದಾರರ ಮತ್ತು ಗ್ರಾಹಕರ ಠೇವಣಿ ಭದ್ರತೆಗೆ ಆರ್​ಬಿಐ, ನೂತನ ನೀತಿಯ ಕರಡು ಯೋಜನೆಯನ್ನು ವಹಿವಾಟಿನ ನಿರ್ಬಂಧ ಹೊರಡಿಸಿದ ದಿನವೇ ಜಾರಿಗೆ ತಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.