ETV Bharat / business

ಎಸ್​ಬಿಐ, ಇಂಡಿಯನ್ ಓವರ್​ಸಿಸ್ ಬ್ಯಾಂಕ್ ಗೃಹ ಸಾಲದ ಬಡ್ಡಿ ದರ ಇಳಿಕೆ - undefined

ಮೂಲದರ (ಬೇಸ್ ರೇಟ್) ಆಧರಿಸಿದ ಗೃಹಸಾಲವನ್ನು ಎಂಸಿಎಲ್​ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್) ದರ ಕಡಿತಗೊಳಿಸಿದ್ದರಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ.

ಸಂಗ್ರಹ ಚಿತ್ರ
author img

By

Published : Apr 9, 2019, 9:14 PM IST

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ​ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಎಂಸಿಎಲ್‌ಆರ್‌ ದರವನ್ನು ಶೇಕಡಾ 0.50ರಷ್ಟು ಕಡಿಮೆ ಮಾಡಿರುವುದಾಗಿ ಘೋಷಿಸಿದೆ.

ಪರಿಷ್ಕೃತ ಎಂಸಿಎಲ್‌ಆರ್‌ ಶೇ 8.55 ರಿಂದ ಶೇ 8.5ಕ್ಕೆ ಕುಸಿಯಲಿದೆ. ಪರಿಣಾಮವಾಗಿ ಎಂಎಲ್‌ಸಿಆರ್‌ನೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಸಾಲಗಳ ಮೇಲಿನ ಬಡ್ಡಿ ದರ ಏಪ್ರಿಲ್​ 10, 2019ರಿಂದ 5 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆಯಾಗಲಿದೆ.

₹ 30 ಲಕ್ಷ ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಸಿದೆ. ಈ ಸಾಲದ ಮೇಲಿನ ಬಡ್ಡಿ ದರ ಶೇ 8.6ರಿಂದ ಶೇ 8.9ರಷ್ಟಾಗಲಿದೆ. ಪ್ರಸ್ತುತ ಈ ದರ ಶೇ 8.7ರಿಂದ ಶೇ 9ರಷ್ಟಿದೆ.

ಮೇ 1ರಿಂದ ಅನ್ವಯವಾಗುವಂತೆ ನಗದು ಸಾಲ ಅಥವಾ ಓವರ್‌ಡ್ರಾಫ್ಟ್‌ ದರವನ್ನು ಪರಿಷ್ಕರಿಸಿದೆ. ಜೊತೆಗೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನು ₹ 1 ಲಕ್ಷ ವರೆಗೆ ಶೇ 3.5ಕ್ಕೆ ಹೆಚ್ಚಿಸಿದೆ. ₹1 ಲಕ್ಷಕ್ಕೂ ಅಧಿಕ ಶೇ 3.25ಕ್ಕೆ ಏರಿಕೆ ಕಂಡಿದೆ.

ಇದರ ಜೊತೆಗೆ ಇಂಡಿಯನ್ ಓವರ್​ಸಿಸ್​ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ​ ಕೂಡ 5 ಬೇಸಿಸ್​ ಪಾಯಿಂಟ್ಸ್​ಗಳ ಬಡ್ಡಿ ದರ ತಗ್ಗಿಸಿದೆ. ವಾರ ಹಿಂದೆಯಷ್ಟೆ ಆರ್​ಬಿಐ ತನ್ನ ಹಣಕಾಸು ನೀತಿ ಸಮಿತಿಯು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು 25 ಅಂಕಗಳಷ್ಟು ಇಳಿಸಿತ್ತು. ಹೀಗಾಗಿ, ಗೃಹ ಸಾಲ ಬಡ್ಡಿದರದ ಲಾಭವನ್ನು ಬ್ಯಾಕ್​ಗಳು ತನ್ನ ಗ್ರಾಹಕರಿಗೆ ನೀಡುತ್ತಿವೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.