ನವದೆಹಲಿ: ಆಸ್ಟ್ರೇಲಿಯಾದ ಐಟಿ ಸಲ್ಯೂಷನ್ ಸಂಸ್ಥೆ ಡಿಡಬ್ಲ್ಯುಎಸ್ ಸ್ವಾಧೀನಪಡಿಸಿಕೊಂಡಿದ್ದಾಗಿ ಎಚ್‌ಸಿಎಲ್ ಟೆಕ್ನಾಲಜೀಸ್ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಡಿಡಬ್ಲ್ಯೂಎಸ್ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಯು ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.
ಕಂಪನಿಯು 2021ರ ಜನವರಿ 5ರಿಂದ ಡಿಡಬ್ಲ್ಯುಎಸ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಒಟ್ಟು ಈಕ್ವಿಟಿ ಮೌಲ್ಯ ಪಾವತಿಯು 158.2 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (ಸುಮಾರು 850.33 ಕೋಟಿ ರೂ.) ಎಂದು ಹೇಳಿದೆ. ಡಿಡಬ್ಲ್ಯುಎಸ್ ಷೇರುದಾರರು ಪ್ರತಿ ಷೇರಿಗೆ 0.03 ಆಸ್ಟ್ರೇಲಿಯನ್ ಡಾಲರ್ ಲಾಭಾಂಶ ಪಡೆಯುತ್ತಾರೆ. ಇದನ್ನು ಕಂಪನಿಯು 2020ರ ಹಣಕಾಸು ವರ್ಷದಲ್ಲಿ (ಜೂನ್ ಅಂತ್ಯ) ಘೋಷಿಸಿತ್ತು.
ಇದನ್ನೂ ಓದಿ: ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಹೂಡಿಕೆ, ಸಿಬ್ಬಂದಿ ಪ್ರಮಾಣ ದ್ವಿಗುಣಗೊಳಿಸಿದ ಮಾಡರ್ನಾ
ಮೆಲ್ಬೋರ್ನ್, ಸಿಡ್ನಿ, ಅಡಿಲೇಡ್, ಬ್ರಿಸ್ಬೇನ್ ಮತ್ತು ಕ್ಯಾನ್ಬೆರಾದಲ್ಲಿ ಡಿಡಬ್ಲ್ಯುಎಸ್ 700ಕ್ಕೂ ಅಧಿಕ ಉದ್ಯೋಗಿಗಳು ಮತ್ತು ಕಚೇರಿಗಳನ್ನು ಹೊಂದಿದೆ. 2020ರ ಹಣಕಾಸು ವರ್ಷದಲ್ಲಿ 167.9 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆದಾಯದೊಂದಿಗೆ ವಹಿವಾಟು ನಡೆಸಿತ್ತು. ಎಚ್‌ಸಿಎಲ್ ಟೆಕ್ನಾಲಜೀಸ್ ಇತ್ತೀಚೆಗೆ ಕ್ಯಾನ್‌ಬೆರಾ, ಸಿಡ್ನಿ, ಮೆಲ್ಬೋರ್ನ್, ಬ್ರಿಸ್ಬೇನ್ ಮತ್ತು ಪರ್ತ್ ಸೇರಿದಂತೆ ಪ್ರಮುಖ ನಗರಗಳಲ್ಲಿ 1,600 ಜನರನ್ನು ನೇಮಿಸಿಕೊಂಡಿದೆ.