ETV Bharat / business

ಸಾಲದ ಸುನಾಮಿಯಲ್ಲಿದ್ದ HAL ಈಗ ಚಿನ್ನದ ಮೊಟ್ಟೆಯಿಡುವ ಕೋಳಿ: ಆದಾಯ ಕೇಳಿದ್ರೆ ಅಚ್ಚರಿ! - 2021ರ ಹಣಕಾಸು ವರ್ಷದ ಎಚ್​ಎಎಲ್​ ಆದಾಯ

ಕೋವಿಡ್​-19 ಸಾಂಕ್ರಾಮಿಕವು ಕಂಪನಿಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿ ಪೂರೈಕೆ ಸರಪಳಿಗೆ ಅಡ್ಡಿಪಡಿಸಿತು (ದೇಶದ ಒಳ-ಹೊರಗು). ಹಿಂದಿನ ವರ್ಷದದಲ್ಲಿ 21,438 ಕೋಟಿ ರೂ.ಯಷ್ಟಿತ್ತು. ವರ್ಷದ ಆರಂಭದಲ್ಲಿ ಒಂದು ತಿಂಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರ ಸುಧಾರಿತ ಉತ್ಪಾದಕತೆಯಿಂದಾಗಿ ಕಂಪನಿಯು 2020-21ರ ಹಣಕಾಸು ವರ್ಷದಲ್ಲಿ ಸುಮಾರು ಶೇ 6ರಷ್ಟು ಆದಾಯದ ಬೆಳವಣಿಗೆ ದಾಖಲಿಸಿದೆ.

hal
hal
author img

By

Published : Mar 31, 2021, 7:49 PM IST

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) 2021ರ ಮಾರ್ಚ್​ 21ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 22,700 ಕೋಟಿ ರೂ. (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧಕ) ದಾಖಲೆಯ ಆದಾಯ ಗಳಿಕೆ ಕಂಡಿದೆ.

ಎಚ್​​ಎಎಲ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 30 ರೂ. ಮಧ್ಯಂತರ ಲಾಭಾಂಶ ಪಾವತಿಸಿತು. ಇದು ಪ್ರತಿ ಷೇರಿಗೆ 10 ರೂ. ಮುಖಬೆಲೆಯ ಮೇಲೆ ಶೇ 300ರಷ್ಟು ಪ್ರತಿನಿಧಿಕವಾಗಿತ್ತು. ಕೋವಿಡ್​-19 ಸಾಂಕ್ರಾಮಿಕವು ಕಂಪನಿಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿ ಪೂರೈಕೆ ಸರಪಳಿಗೆ ಅಡ್ಡಿಪಡಿಸಿತು (ದೇಶದ ಒಳ-ಹೊರಗು). ಹಿಂದಿನ ವರ್ಷದದಲ್ಲಿ 21,438 ಕೋಟಿ ರೂ.ಯಷ್ಟಿತ್ತು. ವರ್ಷದ ಆರಂಭದಲ್ಲಿ ಒಂದು ತಿಂಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರ ಸುಧಾರಿತ ಉತ್ಪಾದಕತೆಯಿಂದಾಗಿ ಕಂಪನಿಯು 2020-21ರ ಹಣಕಾಸು ವರ್ಷದಲ್ಲಿ ಸುಮಾರು ಶೇ 6ರಷ್ಟು ಆದಾಯದ ಬೆಳವಣಿಗೆ ದಾಖಲಿಸಿದೆ.

ಭಾರತೀಯ ಕಂಪನಿಯೊಂದರಿಂದ 83 ಎಲ್‌ಸಿಎ ಎಂಕೆ-ಐಎಯ ಅತಿದೊಡ್ಡ ರಕ್ಷಣಾ ಒಪ್ಪಂದ ಪಡೆದುಕೊಳ್ಳುವಲ್ಲಿ 2020-21ರ ವರ್ಷವು ಮಹತ್ವದ್ದಾಗಿತ್ತು. ಇದು ಕಂಪನಿಯು ಆರ್ಡರ್ ಬುಕ್ ಸ್ಥಾನವನ್ನು 80,000 ಕೋಟಿ ರೂ.ಗೆ ತಲುಪಿಸಿತು ಎಂದು ಎಚ್‌ಎಎಲ್‌ನ ಸಿಎಂಡಿ ಆರ್.ಮಾಧವನ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸ್ವಯಂ-ಪಾವತಿ ಜಾರಿ ನಿಯಮ ಮುಂದೂಡಿದ RBI: ಬ್ಯಾಂಕ್​, NBFCಗಳು ನಿರಾಳ

41 ಹೊಸ ಹೆಲಿಕಾಪ್ಟರ್‌ / ವಿಮಾನ, 102 ಹೊಸ ಎಂಜಿನ್‌, 198 ಏರ್​ಕ್ರಾಫ್ಟ್​‌ ಮತ್ತು 506 ಎಂಜಿನ್‌ಗಳ ಉತ್ಪಾದನೆಯ ನೆರವಿನಿಂದಾಗಿ ದಾಖಲೆಯ ಆದಾಯ ಸಾಧಿಸಲಾಗಿದೆ. ರಕ್ಷಣಾ ಗ್ರಾಹಕರಿಂದ ಸುಧಾರಿತ ಬಜೆಟ್ ಹಂಚಿಕೆಯೊಂದಿಗೆ ಹಣದ ಹರಿವಿನ ಸ್ಥಾನವು ಗಮನಾರ್ಹವಾಗಿ ಸುಧಾರಿಸಿದೆ. 34,000 ಕೋಟಿ ರೂ.ಯಲ್ಲಿ 83 ಎಲ್‌ಸಿಎ ಎಂಕೆ1ಎ ತಯಾರಿಕೆಯ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಡಿ 5,400 ಕೋಟಿ ರೂ. ಮುಂಗಡ ಪಾವತಿಯಾಗಿದೆ. ಬ್ಯಾಂಕ್​ಗಳಿಂದ ಪಡೆದ ಎಲ್ಲಾ ಸಾಲಗಳನ್ನು ತೀರಿಸಲು ಇದು ಎಚ್‌ಎಎಲ್‌ಗೆ ನೆರವಾಯಿತು. ಕಂಪನಿಯು ಕಳೆದ ವರ್ಷದ 2020ರ ಮಾರ್ಚ್ 31ರ ಅವಧಿಯಲ್ಲಿನ 5,775 ಕೋಟಿ ರೂ. ಸಾಲಕ್ಕೆ ಹೋಲಿಸಿದರೆ 6,700 ಕೋಟಿ ರೂ. ಠೇವಣಿ ಉಳಿಸಿಕೊಂಡಿದೆ ಲಾಭದಲ್ಲಿ ಸಾಗುತ್ತಿದೆ.

ವರ್ಷದಲ್ಲಿ ಎಚ್‌ಎಎಲ್ ವಿವಿಧ ವೆಚ್ಚ ಕಡಿತ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡಿದೆ. ವಿವಿಧ ಯೂನಿಟ್​ಗಳ ದೇಶೀಕರಣ, ಹೊರಗುತ್ತಿಗೆ ಪ್ರಯತ್ನಗಳ ವಿಸ್ತರಣೆ ಮತ್ತು ಮಾನವಶಕ್ತಿ ಗರಿಷ್ಠ ಬಳಿಕೆಯಂತಹ ತಂತ್ರ ಸೇರಿವೆ. ಇದು ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಎರಡಂಕೆಯ ಬೆಳವಣಿಗೆ ದಾಖಲಿಸಲು ಕಂಪನಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.