ನವದೆಹಲಿ: ಕೇಂದ್ರ ಸರ್ಕಾರವು ಹೂಡಿಕೆ ಪ್ರಕ್ರಿಯೆ ಪ್ರಸ್ತಾವನೆಯ ಭಾಗವಾಗಿ ಏರ್ ಇಂಡಿಯಾದ ಶೇ. 100ರಷ್ಟು ಪಾಲನ್ನು ಖಾಸಗಿ ಅವರಿಗೆ ಮಾರಾಟ ಮಾಡಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ರಾಷ್ಟ್ರೀಯ ಸಂಚಾರ ಸಾಧನವಾದ ಏರ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತತ್ಪರಿಣಾಮ ಸುಮಾರು 50,000 ಕೋಟಿಗೂ ಅಧಿಕ ರೂ. ಮೊತ್ತದ ಸಾಲಕ್ಕೆ ತುತ್ತಾಗಿದೆ. ಸರ್ಕಾರವು ಮರುಹೂಡಿಕೆಯ ಮೂಲಕ ಇಡೀ ಸಂಸ್ಥೆಯನ್ನು ಮಾರಲು ತೀರ್ಮಾನಿಸಿದೆ. ಎನ್ಡಿಎ-2 ಸರ್ಕಾರ ರಚನೆಯ ಬಳಿಕ ಏರ್ ಇಂಡಿಯಾ, ಸ್ಪೆಸಿಫಿಕ್ ಆಲ್ಟರ್ನೇಟಿವ್ ಮೆಕ್ಯಾನಿಸಮ್ (ಎಐಎಸ್ಎಎಂ) ಅನ್ನು ಪುನಃ ಸ್ಥಾಪಿಸಿದೆ.
ಏರ್ ಇಂಡಿಯಾದ ಮರುಆರಂಭಿಸುವ ಕಾರ್ಯತಂತ್ರದ ಹೂಡಿಕೆಗಾಗಿ ಏರ್ ಇಂಡಿಯಾದಲ್ಲಿರುವ ಸರ್ಕಾರದ 100 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡಲು ಎಐಎಸ್ಎಎಂ ಅನುಮೋದನೆ ನೀಡಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವರು ಲೋಕಸಭೆಗೆ ಲಿಖಿತ ಉತ್ತರ ಮುಖೇನ ತಿಳಿಸಿದ್ದಾರೆ.
2018-19ನೇ ಸಾಲಿನಲ್ಲಿ ಏರ್ ಇಂಡಿಯಾ ಅಂದಾಜು ₹ 5,556.36 ಕೋಟಿಯಷ್ಟು ಅನುಭವಿಸಿದೆ. ಜೆಟ್ ಏರ್ವೇಸ್ವೇಸ್ ಕೂಡ ಆರ್ಥಿಕ ಮುಗ್ಗಟ್ಟಿನಿಂದಾಗಿ ಏಪ್ರಿಲ್ನಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಜೆಟ್ ಏರ್ವೆಸ್ ವಿಯಾನಯಾನ ಸಂಸ್ಥೆಯನ್ನು ಇತರೆ ವಿಮಾನಸಂಸ್ಥೆಗಳಂತೆ ಸುಧಾರಿಸಲು ಹಲವು ಉತ್ತೇಜನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂಸ್ಥೆಯ ಅಭಿವೃದ್ಧಿ, ಉನ್ನತೀಕರಣ, ಆಧುನಿಕರಣಕ್ಕಾಗಿ ಮುಂದಿನ 5 ವರ್ಷಗಳಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ₹ 25,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದರು.