ETV Bharat / business

210 ರೂ. ಕೋವಿಶೀಲ್ಡ್​ ಡೋಸ್​ ಬೆಲೆ ತಗ್ಗಿಸಲು ಚರ್ಚೆ: ದರ ಎಷ್ಟಾಗುತ್ತೆ ಗೊತ್ತೇ? - ಕೋವಿಡ್​-19 ವ್ಯಾಕ್ಸಿನೇಷನ್ ಫ್ರಂಟ್​​ಲೈನ್ ​​ವರ್ಕರ್ಸ್

ವ್ಯಾಕ್ಸಿನೇಷನ್ ಡ್ರೈವ್‌ನ ಎರಡನೇ ಸುತ್ತು ಮಾರ್ಚ್ 1ರಿಂದ ಪ್ರಾರಂಭವಾಯಿತು. ಈ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 45-60ರ ನಡುವೆ ಅಸ್ವಸ್ಥ ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತದೆ. ಇತ್ತೀಚಿನ ಆದೇಶದ ವಿವರಗಳ ಪ್ರಕಾರ, ಎಸ್‌ಐಐನ ಕೋವಿಶೀಲ್ಡ್ 150 ರೂ. ದರ ಹಾಗೂ 5 ಪ್ರತಿಶತದಷ್ಟು ಜಿಎಸ್‌ಟಿ ವಿಧಿಸಲಿದ್ದು, ಪ್ರತಿ ಡೋಸ್‌ ಸುಮಾರು 157.50 ರೂ.ಗಳಷ್ಟಾಗಲಿದೆ.

Covishield
Covishield
author img

By

Published : Mar 11, 2021, 12:04 PM IST

ನವದೆಹಲಿ: ಮೆಗಾ ವ್ಯಾಕ್ಸಿನೇಷನ್ ಯೋಜನೆಯ ಎರಡನೇ ಹಂತದ ಭಾಗವಾಗಿ ಸುಮಾರು 27 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಸರ್ಕಾರ ಹೊಂದಿದೆ. ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (ಎಸ್‌ಐಐ) ಖರೀದಿಸುತ್ತಿರುವ ಕೋವಿಡ್ -19 ಲಸಿಕೆಯ ಬೆಲೆ ತಗ್ಗಿಸುವ ಬಗ್ಗೆ ಮರು ಮಾತುಕತೆ ನಡೆಯುತ್ತಿದೆ.

ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೆರಮ್ ಇನ್‌ಸ್ಟಿಟ್ಯೂಟ್​ನ ಕೋವಿಶೀಲ್ಡ್​​ನ ಬೆಲೆಯನ್ನು ಈಗಿನ 210 ರೂ. ದರದಿಂದ ಪ್ರತಿ ಡೋಸ್‌ಗೆ 160 ರೂ.ಗೆ (ತೆರಿಗೆ ಸೇರಿ) ಕಡಿಮೆ ಮಾಡಲು ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಸೌರ ಫಲಕಗಳ ಮೇಲೆ ಶೇ 40ರಷ್ಟು ಕಸ್ಟಮ್ ಸುಂಕ ವಿಧಿಸಲು ಹಣಕಾಸು ಸಚಿವಾಲಯ ಅಸ್ತು

ಕೋವಿಡ್ -19 ಲಸಿಕೆಗಳನ್ನು ಈಗಾಗಲೇ ಕೇಂದ್ರವು ಸಬ್ಸಿಡಿ ಮಾಡಿದ್ದು, ಬೆಲೆ ಕಡಿತವು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಜನರಿಂದ ವಿಧಿಸುವ ಅಂತಿಮ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2ನೇ ಹಂತಕ್ಕೆ ಕೋವಿಶೀಲ್ಡ್ ಬೆಲೆ ಕಡಿಮೆ ಮಾಡುವ ಬಗ್ಗೆ ಆರೋಗ್ಯ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಅದು ಸಂಸತ್ತಿನಲ್ಲಿ ಪ್ರಸ್ತುತ ಹಂತದ ಬೆಲೆಯನ್ನು ಬಹಿರಂಗಪಡಿಸಿದೆ.

ಕೋವಿಶೀಲ್ಡ್ ತಯಾರಕರು 10 ಕೋಟಿ ಡೋಸೇಜ್ ಅನ್ನು 150 ರೂ.ಗೆ ಮತ್ತು ಪ್ರತಿ ಡೋಸ್​ಗೆ ಜಿಎಸ್​​ಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಮೇಲ್ಮನೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.