ETV Bharat / business

ಕೊರೊನಾ ಬಗ್ಗೆ ತಪ್ಪು ಸುದ್ದಿ ಬಂದ್ರೆ:  ಈ ವಾಟ್ಸ್​ಆ್ಯಪ್​ ನಂ.ಗೆ ಮೆಸೇಜ್​ ಮಾಡಿ..!

ಸಾರ್ವಜನಿಕರಿಗೆ ಪರಿಶೀಲಿಸಿದ ಮಾಹಿತಿ ಮತ್ತು ಅಧಿಕೃತ ಸಲಹೆಗಳನ್ನು ನೀಡಲು ಸರ್ಕಾರವು ಈ ಸೇವೆ ಒದಗಿಸಲಿದೆ. 901315 1515 ಸಂಖ್ಯೆಗೆ ವಾಟ್ಸ್​ಆ್ಯಪ್ ಸಂದೇಶವನ್ನು ಕಳುಹಿಸುವ ಮೂಲಕ 'ಮೈಗೋವ್ ಕರೋನಾ ಹೆಲ್ಪ್‌ಡೆಸ್ಕ್'ಗೆ (MyGov Corona Helpdesk) ಪ್ರವೇಶ ಪಡೆಯಬಹುದಾಗಿದೆ.

WhatsApp
ವಾಟ್ಸ್​ಆ್ಯಪ್
author img

By

Published : Mar 21, 2020, 9:17 PM IST

ನವದೆಹಲಿ: ಕೊರೊನಾ ವೈರಸ್​ ಸುತ್ತ ಆತಂಕಕಾರಿ ಮಾಹಿತಿ, ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿರುವ ಅನುಮಾನ, ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರವು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್‌ ಚಾಟ್‌ಬಾಟ್ ಬಳಿಸಿಕೊಳ್ಳುತ್ತಿದೆ.

ಸಾರ್ವಜನಿಕರಿಗೆ ಪರಿಶೀಲಿಸಿದ ಮಾಹಿತಿ ಮತ್ತು ಅಧಿಕೃತ ಸಲಹೆಗಳನ್ನು ನೀಡಲು ಸರ್ಕಾರವು ಈ ಸೇವೆ ಒದಗಿಸಲಿದೆ. 901315 1515 ಸಂಖ್ಯೆಗೆ ವಾಟ್ಸ್​ಆ್ಯಪ್ ಸಂದೇಶವನ್ನು ಕಳುಹಿಸುವ ಮೂಲಕ 'ಮೈಗೋವ್ ಕರೋನಾ ಹೆಲ್ಪ್‌ಡೆಸ್ಕ್'ಗೆ (MyGov Corona Helpdesk) ಪ್ರವೇಶ ಪಡೆಯಬಹುದಾಗಿದೆ.

ಸೋಂಕಿನ ಲಕ್ಷಣಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಸಹಾಯವಾಣಿ ಸಂಖ್ಯೆಗಳು, ಪ್ರದೇಶದ ಪೀಡಿತ ಪ್ರಕರಣಗಳು ಸೇರಿದಂತೆ ವಿವಿಧ FAQಗಳಿಗೆ ಉತ್ತರಿಸಲಿದೆ. ಎಐ ಪ್ಲಾಟ್‌ಫಾರ್ಮ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಈ ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೊರೊನಾ ಸೋಕಿನ ಬಗ್ಗೆ ಹರಿದಾಡುತ್ತಿರುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ಸಾರ್ವಜನಿಕರಲ್ಲಿ ಭಯವನ್ನು ಹೆಚ್ಚಿಸುತ್ತಿವೆ. ಸತ್ಯಾಸತ್ಯೆಯನ್ನು ಪರಿಶೀಲಿಸದೆ ಸಾಮೂಹಿಕ ಫಾರ್ವರ್ಡ್ ಸಂದೇಶಗಳು ಹೆಚ್ಚುತ್ತಿವೆ. 'ಮೈಗೋವ್ ಕೊರೊನಾ ಹೆಲ್ಪ್‌ಡೆಸ್ಕ್' ಇಂತಹ ತಪ್ಪುಗಳನ್ನು ತಡೆಗಟ್ಟಲಿದೆ.

ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ 400 ಮಿಲಿಯನ್ ದಾಟಿದೆ. ಇದು ವೈರಸ್ ಬಗ್ಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಲು ಸೂಕ್ತವಾದ ಮಾಧ್ಯಮವಾಗಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.