ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳ ಸುಮಾರು 117ಕ್ಕೂ ಅಧಿಕ ವಿಮಾನಗಳ ಹಾರಾಟ ನಾನಾ ಕಾರಣಗಳಿಗೆ ಸ್ಥಗಿತಗೊಂಡ ಬೆನ್ನಲ್ಲೇ ಪ್ರಯಾಣಿಕರ ವಿಮಾನ ದರ ಏರಿಕೆ ಆಗಿದ್ದು, ದರ ಏರಿಕೆ ಸಮನಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಮಧ್ಯ ಪ್ರವೇಶಿಸಿದೆ.
ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯದ ಅಧಿಕಾರಿಗಳು ಕಾರ್ಯನಿರ್ವಹಿಸಿ ವಿಮಾನ ವಲಯ ಕ್ಷೇತ್ರದ ಕಾರ್ಯಕ್ಷಮತೆಯ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. ಟಿಕೆಟ್ ದರದ ಮೇಲೆ ನಿಯಂತ್ರ ಇರಿಸಲಾಗುವುದು ಎಂದು ತಿಳಿಸಿದೆ.
ಎಲ್ಲ ಏರ್ಲೈನ್ಸ್ ಸೇವಾ ಸಂಸ್ಥೆಗಳು ಪ್ರಯಾಣಿಕರ ಅವಶ್ಯಕತೆಗಳನ್ನ ಸಮಗ್ರವಾಗಿ ಪಾಲಿಸಬೇಕು. ಯಾವುದೇ ದೂರುಗಳು ಇದ್ದರೇ ಏರ್ ಸೇವಾ ಪೋರ್ಟ್ಲನಲ್ಲಿ ನೋಂದಾಯಿಸಬಹುದು ಎಂದು ಹೇಳಿದೆ.
ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ. ಬದಲಿಗೆ ದರ ಏರಿಕೆಗೆ ಕಡಿವಾಣ ಹಾಕಿ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ ಎಂದು ನಾಗರಿಕ ವಿಮಾನಯಾನದ ಹಿರಿಯ ಡಿಜಿಸಿಐ ಹೇಳಿದ್ದಾರೆ.
ಥಿಯೋಪಿಯಾದ ಆಡಿಸ್ ಅಬಾಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಬೋಯಿಂಗ್ ವಿಮಾನ ಪತನಗೊಂಡ ನಂತರ ನಾಗರಿಕ ವಿಮಾನಯಾನ ನಿರ್ದೇಶನದ ಮೇರೆಗೆ ಸ್ಪೈಸ್‌ಜೆಟ್ 12 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟ ರದ್ದುಗೊಳಿಸಿದೆ.
ಇದರ ಜೊತೆಗೆ ಇಂಡಿಗೊ, ಏರ್ ಇಂಡಿಯಾ, ಜೆಟ್ ಏರ್‌ವೇಸ್, ಗೋಏರ್, ಸ್ಪೈಸ್‌ಜೆಟ್, ಏರ್‌ವಿಸ್ತಾರಾ ಮತ್ತು ಏರ್‌ಏಷ್ಯಾ ಸಂಸ್ಥೆಗಳು ಸುಮಾರು 674 ವಿಮಾನಗಳನ್ನು ಹೊಂದಿವೆ. ಇದರಲ್ಲಿ ಹಲವು ಕಾರಣಗಳಿಂದ 117ಕ್ಕೂ ಅಧಿಕ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೇಸಿಗೆ ರಜೆ, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ಗಳ ಬೇಡಿಕೆ ಹೆಚ್ಚಾಗಿದೆ.