ಸ್ಯಾನ್ ಫ್ರಾನ್ಸಿಸ್ಕೋ: ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ನಿಯಮ ಉಲ್ಲಂಘನೆ ಸಾಧ್ಯತೆಯ ಹಿನ್ನೆಲೆಯಲ್ಲಿ ಚೀನಾ ಡೆವಲಪರ್ಗೆ ಸೇರಿದ 100 ಆ್ಯಪ್ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ತೆಗೆದುಹಾಕಲು ನಿರ್ಧರಿಸಿದೆ.
ಸದ್ಯ 40ಕ್ಕೂ ಅಧಿಕ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಿಂದ ಕಾಲ್ಕಿತ್ತಿವೆ. ಇನ್ನೂ ಅಧಿಕ ಆ್ಯಪ್ಗಳನ್ನು ತೆರವುಗೊಳಿಸುವುದರ ಜೊತೆಗೆ ಕಂಪನಿಯು ಒಟ್ಟಾರಿ ಡಿಒ ಗ್ಲೋಬಲ್ ಅನ್ನು ನಿಷೇಧಿಸುವ ಉದ್ದೇಶ ಹೊಂದಿದೆ ಎಂದು ವರದಿಯಾಗಿದೆ.
ವಿಶ್ವದ ದೈತ್ಯ ಸರ್ಚ್ ಇಂಜಿನ್ ಗೂಗಲ್, ಇಂಟರ್ನೆಟ್ ಜಾಹೀರಾತು ಉತ್ಪನ್ನಗಳಿಗೆ ನಿಷೇಧ ವಿಸ್ತರಿಸಿದೆ. ಜಾಗತಿಕ ಅಪ್ಲಿಕೇಷನ್ಗಳು 'ಗೂಗಲ್ನ ಎಡ್ಮೊಬ್' ನೆಟ್ವರ್ಕ್ ಮೂಲಕ ಖರೀದಿಸಲು ಜಾಹೀರಾತಿನ ಪಟ್ಟಿಯನ್ನು ಒದಗಿಸುವುದಿಲ್ಲ ಎಂದು ಹೇಳಲಾಗಿದೆ.
ಚೀನಿ ಕಂಪನಿಯು ಅದರ ಅಪ್ಲಿಕೇಷನ್ಗಳಿಗಾಗಿ 250 ದಶಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಹಾಗೂ ಆಂಡ್ರಾಯ್ಡ್ ಜಾಹೀರಾತು ವೇದಿಕೆ ಮೂಲಕ ಸುಮಾರು 800 ದಶಲಕ್ಷ ಬಳಕೆದಾರರನ್ನು ತಲುಪುತ್ತಿದೆ ಎಂದು ಹೇಳಲಾಗಿದೆ.