ನವದೆಹಲಿ: ಗೂಗಲ್ ಕಂಪನಿಯು ತನ್ನ ಫೋನ್ ಅಪ್ಲಿಕೇಷನ್‌ಗೆ ಹೊಸ ವೈಶಿಷ್ಟ್ಯ ಹೊರತರುತ್ತಿದ್ದು, ಅದು ಯಾವುದೇ ಒಳಬರುವ ಕರೆಗಳ ಹೆಸರು ಮತ್ತು ಸಂಖ್ಯೆ ಪ್ರಕಟಿಸುತ್ತದೆ. ಅನಗತ್ಯ ಕರೆಗಳನ್ನು ತಡೆಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು 9 ಟು 5ಗೂಗಲ್ ತಿಳಿಸಿದೆ.
ಪ್ರಸ್ತುತ, ಅಮೆರಿಕದಲ್ಲಿ ಪಿಕ್ಸೆಲ್ ಫೋನ್ ಮಾಲೀಕರು ಸ್ವಯಂಚಾಲಿತ ಕಾಲ್ ಸ್ಕ್ರೀನ್ ವೈಶಿಷ್ಟ್ಯ ಸ್ವೀಕರಿಸಿದ್ದಾರೆ. ಇತರ ದೇಶಗಳು ಶೀಘ್ರದಲ್ಲೇ ಹೊಸ ಸಾಧನ ಪರಿಚಯವಾಗಲಿದೆ. ಫೋನ್ ರಿಂಗಾದಾಗಲೆಲ್ಲಾ ಇಯರ್‌ಫೋನ್ ಆನ್ ಮಾಡಿದಾಗ ಅಥವಾ ಕಾಲರ್ ಐಡಿ ಘೋಷಿಸಲು ಅಪ್ಲಿಕೇಷನ್ ಬಯಸುತ್ತದೆ ಎಂಬುದನ್ನು ನೀವು ಹೊಂದಿಸಬಹುದು.
ಇದನ್ನೂ ಓದಿ: ಮೈಕ್ರೋಸಾಫ್ಟ್ ಟೀಂ ಪರ್ಸನಲ್ ಆ್ಯಪ್ನಲ್ಲಿ ಇನ್ಮುಂದೆ 24x7 ಫ್ರೀ ವಿಡಿಯೋ ಕಾಲ್..
ಹೊಸ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಗೂಗಲ್ ಫೋನ್ ತೆರೆಯಿರಿ. ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಕಾಲರ್ ಐಡಿ ಪ್ರಕಟಣೆ ಆಯ್ಕೆ ಆಯ್ದುಕೊಳ್ಳಿ. ಕಾಲರ್ ಐಡಿ ಸಕ್ರಿಯವಾಗಿಸಲು ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲು ನೀವು "ಯಾವಾಗಲೂ," "ಹೆಡ್‌ಸೆಟ್ ಬಳಸುವಾಗ ಮಾತ್ರ" ಅಥವಾ "ನೆವರ್" ಎಂಬ ಆಯ್ಕೆ ಮಾಡಬಹುದು.
ಐಒಎಸ್ ಸಾಧನಗಳು ಈಗಾಗಲೇ ಕಾಲರ್ ಐಡಿ ವೈಶಿಷ್ಟ್ಯ ಸಕ್ರಿಯಗೊಳಿಸಿವೆ. ಕಾಲರ್ ಐಡಿ ಪ್ರಕಟಣೆಗಳು ಉತ್ತಮ ಪ್ರವೇಶದ ವೈಶಿಷ್ಟ್ಯವಾಗಿದ್ದು, ದೃಷ್ಟಿ ದೋಷ ಹೊಂದಿರುವ ಜನರಿಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ಸುಲಭವಾಗಿ ತಿಳಿಯಲು ಅನುವು ಮಾಡಿ ಕೊಡುತ್ತದೆ.