ETV Bharat / business

ಬಳಕೆದಾರರ ನಿಯಂತ್ರಣಕ್ಕೆ ಸಿಗಲಿದೆ ಗೂಗಲ್ ಪೇ ಡೇಟಾ: ಹೇಗೆ ಗೊತ್ತೇ?

author img

By

Published : Mar 11, 2021, 6:51 PM IST

Updated : Mar 12, 2021, 3:09 PM IST

ಮುಂದಿನ ವಾರದಿಂದ ಗೂಗಲ್​ ಪೇ ಅಪ್ಲಿಕೇಷನ್‌ ಹೊಸ ನವೀಕರಣ ಹೊರತರುತ್ತಿದೆ. ಬಳಕೆದಾರರಿಗೆ ಅಪ್ಲಿಕೇಷನ್‌ನಲ್ಲಿನ ಫೀಚರ್​​ಗಳನ್ನು ವೈಯಕ್ತೀಕರಿಸಲು ತಮ್ಮ ಗೂಗಲ್​ ಪೇ ಚಟುವಟಿಕೆಯನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ನಿಯಂತ್ರಣವನ್ನು ಅವರಿಗೆ ಒದಗಿಸುತ್ತದೆ.

Google Pay
Google Pay

ನವದೆಹಲಿ: ಗೂಗಲ್ ಪೇ ಗೌಪ್ಯತೆ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡುವುದಾಗಿ ಗೂಗಲ್ ಇಂಕ್ ತಿಳಿಸಿದ್ದು, ತಮ್ಮದೇ ಆದ ವಹಿವಾಟಿನ ಡೇಟಾದ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಡುತ್ತಿದೆ.

ಮುಂದಿನ ವಾರದಿಂದ ಗೂಗಲ್​ ಪೇ ಅಪ್ಲಿಕೇಷನ್‌ ಹೊಸ ಅಪ್ಡೇಟ್ ಹೊರತರುತ್ತಿದೆ. ಬಳಕೆದಾರರಿಗೆ ಅಪ್ಲಿಕೇಷನ್‌ನಲ್ಲಿನ ಫೀಚರ್​​ಗಳನ್ನು ವೈಯಕ್ತೀಕರಿಸಲು ತಮ್ಮ ಗೂಗಲ್​ ಪೇ ಚಟುವಟಿಕೆಯನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ.

ಎಲ್ಲಾ ಬಳಕೆದಾರರು ಗೂಗಲ್​ ಪೇ ಅಪ್ಲಿಕೇಷನ್‌ನ ಮುಂದಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ ತಕ್ಷಣ ನಿಯಂತ್ರಣವನ್ನು ಆನ್ ಅಥವಾ ಆಫ್ ಮಾಡಲು ಬಯಸುತ್ತೀರಾ ಎಂಬ ಆಯ್ಕೆ ಕೇಳಲಾಗುತ್ತದೆ.

ಗೌಪ್ಯತೆ ಈಗಾಗಲೇ ನಮಗೆ ಪ್ರಮುಖ ಆದ್ಯತೆಯಾಗಿದೆ. ನೀವು ಗೂಗಲ್​ ಪೇನಲ್ಲಿ ಏನನ್ನಾದರೂ ಮಾಡಿದರೆ, ಅದು ಗೂಗಲ್​ ಪೇನಲ್ಲಿ ಉಳಿಯುತ್ತದೆ. ನಿಮ್ಮ ಗೂಗಲ್​ ಪೇ ಚಟುವಟಿಕೆಯನ್ನು ನಿರ್ವಹಿಸಲು ನಾವು ಹೊಸ ನಿಯಂತ್ರಣ ಸ್ಥಾಪಿಸುತ್ತಿದ್ದೇವೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಉತ್ಪನ್ನ ಅಂಬರೀಶ್ ಕೆಂಗೆ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಐಫೋನ್​ 12 ಜೋಡಣೆ ಆರಂಭಿಸಿದ ಆ್ಯಪಲ್​ ಕಂಪೆನಿ

ಮೊಬೈಲ್ ಫೋನ್ ಸೇವೆಗಳ ರೀಚಾರ್ಜ್​ಗಳಿಗೆ ಗೂಗಲ್ ಪೇ ಬಳಸುವ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಬಳಕೆದಾರರಿಗೆ ಆಫರ್​ ಮತ್ತು ಪ್ರತಿಫಲಗಳನ್ನು ಒದಗಿಸಲು ಈ ಡೇಟಾ ಬಳಸಬಹುದೇ ಎಂಬುದನ್ನು ಈಗ ಆಯ್ಕೆ ಮಾಡಬಹುದು ಎಂದರು.

ಗೂಗಲ್​ ಪೇ ಅನುಭವವನ್ನು ವೈಯಕ್ತೀಕರಿಸಲು ಅವರು ಬಯಸದ ವೈಯಕ್ತಿಕ ವ್ಯವಹಾರ ಮತ್ತು ಚಟುವಟಿಕೆ ದಾಖಲೆಗಳನ್ನು ವೀಕ್ಷಿಸಲು ಮತ್ತು ಅಳಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.

ವಹಿವಾಟಿನ ಹಿಸ್ಟರಿ ನಿಯಂತ್ರಕ ಉದ್ದೇಶಗಳಿಗಾಗಿ ಇರಲಿದೆ (ಇದು ವಹಿವಾಟಿನ ಡೇಟಾ ಆಪರೇಟರ್‌ಗಾಗಿ ಸ್ವಲ್ಪ ಸಮಯದವರೆಗೆ ಸಂಗ್ರಹಿಸಬೇಕೆಂದು ಕಡ್ಡಾಯಗೊಳಿಸುತ್ತದೆ) ಆದರೆ, ಇದನ್ನು ವೈಯಕ್ತೀಕರಣಕ್ಕಾಗಿ ಬಳಸಲಾಗುವುದಿಲ್ಲ ಎಂದರು.

Last Updated : Mar 12, 2021, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.