ETV Bharat / business

ದೇಶದ ಪ್ರಥಮ ಎಲೆಕ್ಟ್ರಿಕ್​ ಇಂಟರ್​-ಸಿಟಿ ಬಸ್​ ಓಡಾಟಕ್ಕೆ ಚಾಲನೆ: ಯಾವ ನಗರಗಳ ಮಧ್ಯೆ ಓಡಾಟ ಗೊತ್ತೇ? - ಐಷರಾಮಿ ಬಸ್​

ಮಿತ್ರ ಮೊಬಿಲಿಟಿ ಸೊಲ್ಯೂಷನ್ ತಯಾರಿಸಿದ 43 ಆಸನಗಳ ಸಾಮರ್ಥ್ಯದ ಐಷಾರಾಮಿ ಎಲೆಕ್ಟ್ರಿಕ್ ಬಸ್, ಒಂದೇ ಚಾರ್ಜ್‌ನಲ್ಲಿ 300 ಕಿಲೋಮೀಟರ್ ದೂರದವರೆಗೂ ಕ್ರಮಿಸುತ್ತದೆ. ಎರಡು ನಗರಗಳ ನಡುವೆ ಪ್ರತಿದಿನ ಎರಡು ಬಾರಿ ಸಂಚರಿಸಲಿದೆ ಎಂದು ಆಪರೇಟರ್ ಪ್ರಸನ್ನ ಪರ್ಪಲ್ ಮೊಬಿಲಿಟಿ ಸೊಲ್ಯೂಷನ್ಸ್ ತಿಳಿಸಿದೆ.

electric bus
ಎಲೆಕ್ಟ್ರಿಕ್ ಬಸ್
author img

By

Published : Feb 14, 2020, 11:30 PM IST

ಮುಂಬೈ: ಮುಂಬೈ ಮತ್ತು ಪುಣೆ ನಡುವೆ ಮೊದಲ ಇಂಟರ್​ ಸಿಟಿ ನಗರ ಎಲೆಕ್ಟ್ರಿಕ್ ಬಸ್ ಸೇವೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದರು.

ಮಿತ್ರ ಮೊಬಿಲಿಟಿ ಸೊಲ್ಯೂಷನ್ ತಯಾರಿಸಿದ 43 ಆಸನಗಳ ಸಾಮರ್ಥ್ಯದ ಐಷಾರಾಮಿ ಎಲೆಕ್ಟ್ರಿಕ್ ಬಸ್, ಒಂದೇ ಚಾರ್ಜ್‌ನಲ್ಲಿ 300 ಕಿಲೋಮೀಟರ್ ದೂರದವರೆಗೂ ಕ್ರಮಿಸುತ್ತದೆ. ಎರಡು ನಗರಗಳ ನಡುವೆ ಪ್ರತಿದಿನ ಎರಡು ಬಾರಿ ಸಂಚರಿಸಲಿದೆ ಎಂದು ಆಪರೇಟರ್ ಪ್ರಸನ್ನ ಪರ್ಪಲ್ ಮೊಬಿಲಿಟಿ ಸೊಲ್ಯೂಷನ್ಸ್ ತಿಳಿಸಿದೆ.

ಈಗಾಗಲೇ ಸುಮಾರು 1,300 ಎಲೆಕ್ಟ್ರಿಕ್ ಬಸ್ಸುಗಳನ್ನು ಹೊಂದಿರುವ ಕಂಪನಿಯು ಈ ಸೇವೆಗಳನ್ನು ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಲ್ಲೂ ವಿಸ್ತರಿಸಲಾಗುವುದು ಎಂದು ಅದರ ಅಧ್ಯಕ್ಷ/ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಪಟ್ವರ್ಧನ್ ಹೇಳಿದರು.

ಇದೇ ವೇಳೆ ಗಡ್ಕರಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 4-5 ವರ್ಷಗಳ ಅವಧಿಯಲ್ಲಿ ದೇಶದ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಿಸುತ್ತಿರುವುದನ್ನು ಕಾಣುತ್ತಿದ್ದೇನೆ. ವಿವಿಧ ನಿಗಮಗಳು, ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ನಿರ್ವಾಹಕರು ಈ ವರ್ಷ ಸುಮಾರು 10,000 ಎಲೆಕ್ಟ್ರಿಕ್ ಬಸ್ಸುಗಳ ಓಡಾಟಕ್ಕೆ ಬೇಡಿಕೆ ಬರಬಹುದು. ಇ- (ವಿದ್ಯುತ್) ಹೆದ್ದಾರಿಗಳನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ಜಾಗದಲ್ಲಿ ಈ ಹೊಸ ಮಾದರಿಯ ಬಸ್​ಗಳು ನಮಗೆ ಉತ್ತಮವಾಗಿವೆ. ಗ್ರಾಹಕರಿಗೆ ಸೇವೆ ಸಲ್ಲಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಈ ಸೇವೆಯನ್ನು ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಗೂ ವಿಸ್ತರಿಸಲು ನಾವು ಯೋಜಿಸಿದ್ದೇವೆ ಎಂದು ಪಟ್ವರ್ಧನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.