ಬೆಂಗಳೂರು: ಇ -ಕಾಮರ್ಸ್ ಮಾರುಕಟ್ಟೆ ದೈತ್ಯ ಫ್ಲಿಪ್‌ಕಾರ್ಟ್, ಶ್ರೇಣಿ- II ನಗರಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಬ್ಬದ ಋತು ಮತ್ತು ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೂ ಮುನ್ನ ಪೂರೈಕೆ ಸರಪಳಿಯಲ್ಲಿ ತೊಡಗಿಸಿಕೊಳ್ಳಲು ಪೇಡ್ ಇಂಟರ್ನ್‌ಶಿಪ್ ಪ್ರೋಗ್ರಾಂ ಪರಿಚಯಿಸುತ್ತಿದೆ.
45 ದಿನಗಳ ಕಾಲ ನಡೆಯುವ ಇಂಟರ್ನ್‌ಶಿಪ್, ವಿದ್ಯಾರ್ಥಿಗಳಿಗೆ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ವಿಮರ್ಶಾತ್ಮಕ ಕೌಶಲ್ಯಗಳನ್ನು ಪಡೆಯಲು. ಇ - ಕಾಮರ್ಸ್ ಉದ್ಯಮಕ್ಕೆ ತರಬೇತಿ ಪಡೆದ ವೃತ್ತಿಪರರ ವಾತಾವರಣ ವ್ಯವಸ್ಥೆ ರಚಿಸುವಂತಹ ಉದ್ದೇಶ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಕಳೆದ ವರ್ಷ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ತನ್ನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಿನೋಲಾ (ಹರಿಯಾಣ), ಭಿವಾಂಡಿ (ಮಹಾರಾಷ್ಟ್ರ), ಉಲುಬೇರಿಯಾ ಮತ್ತು ಡಂಕುಣಿ (ಪಶ್ಚಿಮ ಬಂಗಾಳ) ಮತ್ತು ಮಾಲೂರು (ಕರ್ನಾಟಕ), ಮೆಡ್ಚಲ್ (ತೆಲಂಗಾಣ) ಸೇರಿ 21 ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
ಮುಂಬರುವ ಹಬ್ಬದ ಋತುವಿನಲ್ಲಿ ನಮ್ಮ ಇಂಟರ್ನ್‌ಗಳಿಗೆ ಆಕರ್ಷಕವಾಗಿ ಮತ್ತು ಅತ್ಯುತ್ತಮ ಕೆಲಸದ ಅನುಭವ ಒದಗಿಸುವ ವಿಶ್ವಾಸವಿದೆ. ಇದು ಪೂರೈಕೆ ಸರಪಳಿಯ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ ಎಂದು ಫ್ಲಿಪ್‌ಕಾರ್ಟ್ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಹೇಳಿದರು.
ವಿದ್ಯಾರ್ಥಿಗಳಿಗೆ ಅವರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಕಟ್ಟುನಿಟ್ಟಿನ ಅಭ್ಯಾಸಗಳನ್ನು ಅನುಸರಿಸಿ, ಪೂರೈಕೆ ಸರಪಳಿ ನಿರ್ವಹಣೆಯ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಲಾಗುವುದು. ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಕೆಲಸದಲ್ಲಿರುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಎಲ್ಲ ಸಮಯದಲ್ಲೂ ಆರೋಗ್ಯ ಸೇತು ಅಪ್ಲಿಕೇಷನ್‌ನ ಬಳಕೆ ಮಾಡಲಾಗುವುದು ಎಂದರು.