ನವದೆಹಲಿ: ವಾಲ್ಮಾರ್ಟ್ ಒಡೆತನದ ಕಂಪನಿಯ ಲಾಜಿಸ್ಟಿಕ್ಸ್ ಮತ್ತು ಡಾಟಾ ಸೆಂಟರ್ ಸಾಮರ್ಥ್ಯ ಬಲಪಡಿಸಲು ಹಾಗೂ ಸುಮಾರು 2,500 ನೇರ ಉದ್ಯೋಗ ಸೃಷ್ಟಿಸಲು ಅದಾನಿ ಗ್ರೂಪ್ ಜೊತೆ ವಾಣಿಜ್ಯ ಸಹಭಾಗಿತ್ವ ಮಾಡಿಕೊಂಡಿದೆ ಎಂದು ಫ್ಲಿಪ್ಕಾರ್ಟ್ ತಿಳಿಸಿದೆ.
ಈ ದ್ವಿಮುಖ ಪಾಲುದಾರಿಕೆಯಲ್ಲಿ ಫ್ಲಿಪ್‌ಕಾರ್ಟ್ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್‌ನೊಂದಿಗೆ ಅದರ ಪೂರೈಕೆ ಸರಪಳಿ ಮೂಲಸೌಕರ್ಯ ಬಲಪಡಿಸಲಿದೆ. ವೇಗವಾಗಿ ಬೆಳೆಯುತ್ತಿರುವ ಗ್ರಾಹಕರ ಬೇಡಿಕೆ ಪೂರೈಸುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಕೆಲಸ ಮಾಡುತ್ತದೆ ಎಂದಿದೆ.
ಇದನ್ನೂ ಓದಿ: ದಲಾಲ್ ಸ್ಟ್ರೀಟ್ನಲ್ಲಿ ರಕ್ತಪಾತ : 15 ನಿಮಿಷದಲ್ಲಿ 6.83 ಲಕ್ಷ ಕೋಟಿ ರೂ. ಲಾಸ್
ಫ್ಲಿಪ್‌ಕಾರ್ಟ್ ತನ್ನ ಮೂರನೇ ದತ್ತಾಂಶ ಕೇಂದ್ರವನ್ನು ಅದಾನಿಕೊನೆಕ್ಸ್‌ನ ಚೆನ್ನೈನಲ್ಲಿ ಸ್ಥಾಪಿಸಲಿದೆ. ಈ ನಂತರ ಪರಿಣತಿ ಮತ್ತು ಉದ್ಯಮದ ಪ್ರಮುಖ ದತ್ತಾಂಶ ಕೇಂದ್ರ ತಂತ್ರಜ್ಞಾನ ಪರಿಹಾರಗಳನ್ನು ಹೆಚ್ಚಿಸಲಿದೆ. ಅದಾನಿಕೊನೆಕ್ಸ್ ಎಡ್ಜ್ಕಾನ್ನೆಕ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನಡುವೆ ರೂಪುಗೊಂಡ ಹೊಸ ಜಂಟಿ ಉದ್ಯಮವಾಗಿದೆ.