ಬೆಂಗಳೂರು: ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಕಂಪನಿಯು ಸಾಲು-ಸಾಲು ಹಬ್ಬಗಳ ಸೀಸನ್ಗೂ ಮುನ್ನವೇ ತನ್ನ ಗ್ರಾಹಕರಿಗೆ 'ದಿ ಬಿಗ್ ಬಿಲಿಯನ್ ಡೇಸ್' (ಟಿಬಿಬಿಡಿ) ಮಾರಾಟದ ಕೊಡುಗೆಯನ್ನು ಘೋಷಿಸಿದೆ.
ಪ್ರಸ್ತುತ ಕೊಡುಗೆಯು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ 'ದಿ ಬಿಗ್ ಬಿಲಿಯನ್ ಡೇಸ್' ಹೆಸರಿನಲ್ಲಿ ನಡೆಯಲಿದೆ. ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ಗಳ ಕಾರ್ಡ್ಗಳನ್ನು ಹೊಂದಿರುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ಮತ್ತು ಮಾರಾಟಗಾರರ ಅಭಿರುಚಿಗಳನ್ನು ಗಮನದಲ್ಲಿರಿಸಿಕೊಂಡು ಮೊದಲ-ಕೊನೆಯ ಮೈಲಿಯಲ್ಲಿರುವ ಪ್ರತಿ ಗ್ರಾಹಕರನ್ನು ತಲುಪುವಂತಹ ವಿತರಣಾ ಜಾಲ ಸೃಜಿಸಲಿದ್ದೇವೆ ಎಂದು ಕಂಪನಿಯು ಕೆಲ ತಿಂಗಳ ಹಿಂದೆ ಹೇಳಿತ್ತು. ಅದರಂತೆ ದೇಶಾದ್ಯಂತ 700 ನಗರಗಳ ಸುಮಾರು 27 ಸಾವಿರ ಕಿರಾಣಗಳನ್ನು ಸೇರ್ಪಡೆ ಮಾಡಿಕೊಂಡಿರುವುದ್ದಾಗಿ ನಿನ್ನೆ (ಮಂಗಳವಾರ) ತಿಳಿಸಿತ್ತು.
'ದಿ ಬಿಗ್ ಬಿಲಿಯನ್ ಡೇಸ್' ಫ್ಯಾಷನ್, ಟಿವಿ ಮತ್ತು ಬಿಡಿ ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಕ್ರೀಡೆಗಳು, ಸೌಂದರ್ಯ ವರ್ಧಕಗಳು, ಪುಸ್ತಕಗಳು, ಸ್ಮಾರ್ಟ್ ಡಿವೈಸ್ಗಳು, ವೈಯಕ್ತಿಕ ಆರೈಕೆ ಉಪಕರಣಗಳು, ಜವಳಿ, ಪ್ರವಾಸ ಸೇರಿದಂತೆ ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.