ETV Bharat / business

1.76 ಲಕ್ಷ ನೌಕರರ BSNL​ ಮುಚ್ಚುವ ವಿಷ್ಯ... ಇಲ್ಲಿದೆ ಟೆಲಿಕಾಂ ಇಲಾಖೆಯ ದೃಢ ನಿರ್ಧಾರ

ಹಣಕಾಸು ಸಚಿವರು ಬಿಎಸ್​ಎನ್​ಎಲ್​ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ. ಎಂಟಿಎನ್​ಎಲ್​ ಮತ್ತು ಬಿಎಸ್​ಎನ್​ಎಲ್​ ಮುಚ್ಚಲಾಗುತ್ತಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾದಂತಹವು ಎಂದು ಡಿಒಟಿ ಕಾರ್ಯದರ್ಶಿ ಅನ್ಶು ಪ್ರಕಾಶ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬಿಎಸ್​​ಎನ್​ಎಲ್​ ಮುಚ್ಚಲಾಗುತ್ತಿದೆ ಎಂಬ ವರದಿಗಳಿಗೆ ಡಿಒಟಿ ಪೂರ್ಣ ವಿರಾಮ ಇಟ್ಟಿದೆ. ಇದರಿಂದ ಬಿಎಸ್​​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳು ನಿರಾಳರಾಗಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 13, 2019, 10:17 AM IST

ನವದೆಹಲಿ: ಭಾರತದ ಟೆಲಿಕಾಂ ಉದ್ಯಮದಲ್ಲಿ ನಡೆಯುತ್ತಿರುವ ದರ ಸಮರದಿಂದಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಮುಚ್ಚುವ ಹಂತದಲ್ಲಿವೆ ಎಂಬ ವದಂತಿಗಳ ನಡುವೆ ದೂರಸಂಪರ್ಕ ಇಲಾಖೆಯ (ಡಿಒಟಿ) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹಣಕಾಸು ಸಚಿವರು ಬಿಎಸ್​ಎನ್​ಎಲ್​ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ. ಎಂಟಿಎನ್​ಎಲ್​ ಮತ್ತು ಬಿಎಸ್​ಎನ್​ಎಲ್​ ಮುಚ್ಚಲಾಗುತ್ತಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾದಂತಹವು ಎಂದು ಡಿಒಟಿ ಕಾರ್ಯದರ್ಶಿ ಅನ್ಶು ಪ್ರಕಾಶ್ ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿಯು ಡಿಒಟಿ ಪ್ರಸ್ತಾಪಿಸಿದ ಬಿಎಸ್​​ಎನ್​​ಎಲ್​ ಪುನರುಜ್ಜೀವನ ಯೋಜನೆಗೆ ಅನುಮೋದನೆ ನೀಡಿದೆ. ಜುಲೈ ತಿಂಗಳ ಮಧ್ಯಂತರ ಅವಧಿಯಲ್ಲಿ ನಷ್ಟು ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಿಗೆ ಪುನರುಜ್ಜೀವನಗೊಳಿಸುವ ವಿಶೇಷ ಪ್ಯಾಕೇಜ್​ಗೆ ಸಚಿವರ ಸಮಿತಿಯು ಅನುಮೋದನೆ ನೀಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಅನುಮೋದನೆ ನೀಡಿದ ಸಚಿವರ ತಂಡದಲ್ಲಿದ್ದಾರೆ.

ಡಿಒಟಿ ಬಿಎಸ್​​ಎನ್​ಎಲ್​ ಪುನರುಜ್ಜೀವನ ಯೋಜನೆಗೆ 74,000 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಇದೇ ಸಾಲಿನಲ್ಲಿ ವಿಂಗಡನೆ ಮಾಡಿದರೆ ಕಂಪನಿಯ ವೆಚ್ಚ 95,000 ಕೋಟಿ ರೂ.ಗಿಂತ ಕಡಿಮೆ ಆಗಲಿದೆ. ಸ್ವಯಂ ನಿವೃತ್ತಿ ಯೋಜನೆ (ವಿಆರ್​​ಎಸ್​) ಅಡಿಯಲ್ಲಿ ಬಿಎಸ್​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳಿಗೆ ₹ 29,000 ಕೋಟಿ, 4ಜಿ ಸ್ಪೆಕ್ಟ್ರಮ್​ಗೆ ₹ 20,000 ಕೋಟಿ ಹಾಗೂ ₹13,000 ಕೋಟಿ, 4ಜಿ ಸೇವೆಗಳ ಕ್ಯಾಪೆಕ್ಸ್​​ಗೆ ಹಣ ಒದಗಿಸಬೇಕಾಗುತ್ತದೆ. ಈ ಪ್ಯಾಕೇಜ್​ ಬಂದರೇ 2024ರ ಆರ್ಥಿಕ ವರ್ಷದ ವೇಳೆಗೆ ಬಿಎಸ್​ಎನ್​ಎಲ್​ ಲಾಭದಾಯಕ ಹಾದಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.