ETV Bharat / business

ಅಕ್ಕಿಯ 'ಫೌಜಿ' ಗೇಮಿಂಗ್ ಬಿಡುಗಡೆಗೆ ದಿನಾಂಕ ಫಿಕ್ಸ್​​: 24 ಗಂಟೆಗಳ ಒಳಗೆ 10 ಲಕ್ಷ ಪ್ರಿ-ಬುಕ್ಕಿಂಗ್​! - ಪಬ್ಲಿ ವರ್ಸಸ್​ ಫೌಜಿ

ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್ ಎಂದೂ ಕರೆಯಲ್ಪಡುವ ಫೌಜಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಗೇಮಿಂಗ್​ ಡೆವಲಪರ್​, ಸ್ಟುಡಿಯೋ ಎನ್‌ಕೋರ್ ಗೇಮ್ಸ್​ ನಿಖರವಾದ ಲಾಂಚಿಂಗ್ ದಿನಾಂಕ ಘೋಷಿಸಿಲ್ಲ. ಪೂರ್ವ ನೋಂದಣಿ ಘೋಷಿಸಿದ 24 ಗಂಟೆಗಳ ಒಳಗೆ 1.06 ಮಿಲಿಯನ್ ಜನರು ನೋಂದಾಯಿಸಿಕೊಂಡಿದ್ದಾರೆ. ಇದು ಆ್ಯಪ್​ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

FAU-G
ಫೌಜಿ
author img

By

Published : Dec 5, 2020, 5:14 PM IST

ನವದೆಹಲಿ: ಭದ್ರತಾ ನಿಯಮ ಉಲ್ಲಂಘಿಸಿದ ಆಪಾದನೆಯಡಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್​ ಪಬ್ಜಿಗೆ ಸೆಡ್ಡುಹೊಡೆಯಲು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಘೋಷಿಸಿದ ಮಲ್ಟಿ ಪ್ಲೇಯರ್​ ಆಕ್ಷನ್- ಗೇಮ್ FAU-G (ಫೌಜಿ) ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದೆ.

ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್ ಎಂದೂ ಕರೆಯಲ್ಪಡುವ ಫೌಜಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಗೇಮಿಂಗ್​ ಡೆವಲಪರ್​, ಸ್ಟುಡಿಯೋ ಎನ್‌ಕೋರ್ ಗೇಮ್ಸ್​ ನಿಖರವಾದ ಲಾಂಚಿಂಗ್ ದಿನಾಂಕ ಘೋಷಿಸಿಲ್ಲ. ಪೂರ್ವ ನೋಂದಣಿ ಘೋಷಿಸಿದ 24 ಗಂಟೆಗಳ ಒಳಗೆ 1.06 ಮಿಲಿಯನ್ ಜನರು ನೋಂದಾಯಿಸಿಕೊಂಡಿದ್ದಾರೆ. ಇದು ಆ್ಯಪ್​ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ವಾಟ್ಸ್​​ಆ್ಯಪ್​ ಬಳಕೆದಾರರೇ ಎಚ್ಚರ! ಈ ನಿಯಮ ಒಪ್ಪದಿದ್ದರೇ ನಿಮ್ಮ ಆ್ಯಪ್​ ​ಅಕೌಂಟ್​ ಡಿಲೀಟ್!

ಈ ಗೇಮ್​ ಅನ್ನು ಮೊದಲು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆ ನಂತರ ನವೆಂಬರ್‌ವರೆಗೆ ಮುಂದೂಡಲಾಯಿತು. ಈಗ ಡಿಸೆಂಬರ್​ ಎಂದು ಹೇಳಲಾಗುತ್ತಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಫೌಜಿ ಪೂರ್ವ - ನೋಂದಣಿ ಲಿಂಕ್ ಅನ್ನು ನವೆಂಬರ್ 30ರಂದು ಗುರುಪುರಬ್ ವೇಳೆ ಸಕ್ರಿಯಗೊಳಿಸಲಾಗಿದೆ. ಗೇಮರ್​ಗಳು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಫೌಜಿ ಪೂರ್ವ ನೋಂದಣಿ ಮಾಡಿಕೊಳ್ಳಬಹುದು. ಗೇಮಿಂಗ್ ಲಾಂಚ್ ಆದ ತಕ್ಷಣ ಲಭ್ಯವಾಗಲಿದೆ.

ಪಬ್ಜಿ ಪ್ರತಿಸ್ಪರ್ಧಿಯ ಪೂರ್ವ ನೋಂದಣಿಗಳ ಸಂಖ್ಯೆ ಒಂದು ಮಿಲಿಯನ್ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಇದ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

ಭಾರತದ ಯುವಕರಿಗೆ ಗೇಮಿಂಗ್ ಮನರಂಜನೆಯ ಒಂದು ಭಾಗವಾಗುತ್ತಿದೆ. ಫೌಜಿ ಗೇಮಿಂಗ್​ ಆಡುವಾಗ ಅವರು ಸೈನಿಕರ ತ್ಯಾಗದ ಬಗ್ಗೆ ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸೈನಿಕರು ಮತ್ತು ಹುತಾತ್ಮರ ಕುಟುಂಬಗಳಿಗೆ ಸಹ ಕೊಡುಗೆ ನೀಡುತ್ತಾರೆ. ಇದರೊಂದಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಲಿದ್ದಾರೆ. ಗೇಮಿಂಗ್​ನಿಂದ ಗಳಿಸಿದ ಆದಾಯದ ಶೇ 20ರಷ್ಟು ಭಾರತ್​ ​ ಕೆವೀರ್ ಟ್ರಸ್ಟ್​ಗೆ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ಗೇಮಿಂಗ್ ಘೋಷಣೆ ವೇಳೆ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.