ETV Bharat / business

ಶ್ರೀಮಂತ ಉದ್ಯಮಿ ಪತ್ನಿ ನೀತಾ ಅಂಬಾನಿಯನ್ನೂ ಬಿಡದ ನಕಲಿ ಟ್ವಿಟ್ಟರ್ ಖಾತೆ - ನಕಲಿ ಖಾತೆ

ನೀತಾ ಅಂಬಾನಿ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಟ್ವಿಟ್ಟರ್ ಖಾತೆ ತೆರೆದು ವಿವಾದಾತ್ಮಕ ಸಾಕಷ್ಟು ಟ್ವೀಟ್‍ಗಳನ್ನು ಮಾಡುತ್ತಿದ್ದು, ಇದು ನಮಗೆ ತಿಳಿದಿದೆ. ಆದರೆ, ನೀತಾ ಅಂಬಾನಿ ಅವರ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್ ಖಾತೆ ಇಲ್ಲ. ಅವರ ಹೆಸರು, ಭಾವಚಿತ್ರವಿರುವ ಎಲ್ಲ ಟ್ವಿಟ್ಟರ್ ಖಾತೆಗಳು ನಕಲಿಯಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.

Nita Ambani
ನೀತಾ ಅಂಬಾನಿ
author img

By

Published : Dec 27, 2019, 4:33 PM IST

ಮುಂಬೈ: ಉದ್ಯಮ ದಿಗ್ಗಜ ಸಂಸ್ಥೆ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ದೂರಿನ ಬಳಿಕ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ.

ಹಣ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ನಕಲಿ ಖಾತೆ ತೆರೆದು ಅವರಿಗೆ ಸಂಬಂಧಿಸಿದ ವಿಡಿಯೋ, ಫೋಟೋ ಹಾಗೂ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಬಗ್ಗೆ ಸೈಬರ್​ ಅಪರಾಧ ದಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಈಗ ಅಂತಹದ್ದೇ ಖಾತೆಯನ್ನು ಏಷ್ಯಾದ ಶ್ರೀಮಂತ ಉದ್ಯಮಿಯ ಪತ್ನಿ ಹೆಸರಲ್ಲಿ ತೆರೆಯಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ರಿಲಯನ್ಸ್​ ಜಿಯೋ ಇನ್ಫೋಕಾಂ ವಕ್ತಾರ, ನೀತಾ ಅಂಬಾನಿ ಹೆಸರಿನಡಿ ಹಲವು ಟ್ವೀಟ್​ ಮಾಡಿದ್ದನ್ನು ನೋಡಿದ್ದೇವೆ. ನೀತಾ ಅಂಬಾನಿಗೆ ಸಂಬಂಧಿಸಿರುವ ಯಾವುದೇ ಅಧಿಕೃತ ಟ್ವಿಟರ್ ಖಾತೆಗಳಿಲ್ಲ. ಅವರ ಹೆಸರು ಅಥವಾ ಛಾಯಾಚಿತ್ರ ಹೊಂದಿರುವ ಎಲ್ಲ ಟ್ವಿಟ್ಟರ್​ ಖಾತೆಗಳು ನಕಲಿ. ಉದ್ದೇಶಪೂರ್ವಕವಾಗಿ ಪ್ರಸಾರವಾಗುತ್ತಿರುವ ನಕಲಿ ಟ್ವಿಟರ್ ಅನ್ನು ನಿರ್ಲಕ್ಷಿಸುವಂತೆ ಮನವಿ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.