ಸ್ಯಾನ್ಫ್ರಾನ್ಸಿಸ್ಕೋ: ಬಳಕೆದಾರರು ತಮ್ಮ ಫೋಟೋ ಹಾಗೂ ವಿಡಿಯೋಗಳು ಎಷ್ಟು ಜನ ಲೈಕ್ಸ್ ಮತ್ತು ಕಮೆಂಟ್ಸ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇಡುವಂತಹ ಹೊಸ ಆಯ್ಕೆಯೊಂದನ್ನು ಒದಗಿಸುವುದಾಗಿ ಫೇಸ್‌ಬುಕ್ ದೃಢಪಡಿಸಿದೆ.
ನೂತನ ಬದಲಾವಣೆಯು ಚಿತ್ರ, ವಿಡಿಯೋ ಮತ್ತು ಕಮೆಂಟ್ಸ್ಗಳಿಂದ ಉಂಟಾಗಬಹುದಾದ ಪ್ರಚೋದನೆಯನ್ನು ತಡೆಯಲು ನೆರವಾಗಲಿದೆ. ಬದಲಾಗಿ, ಪೋಸ್ಟ್‌ನಲ್ಲಿ ಏನಿದೆ ಎಂಬುದರ ಕುರಿತಷ್ಟೇ ಹಿಂಬಾಲಕರ ಅಥವಾ ಸ್ನೇಹಿತರ ಗಮನ ಕೇಂದ್ರೀಕರಿಸಲಿದೆ.
ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ವರ್ಷದ ಆರಂಭದಲ್ಲಿ ಸುಮಾರು ಆರು ರಾಷ್ಟ್ರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಕೆಲವು ಬಳಕೆದಾರರು ಗೌಪ್ಯತೆ ಆಯ್ಕೆ ಮಾಡಿಕೊಂಡಿದ್ದರೂ ರಹಸ್ಯ ಕಾಪಾಡಿಕೊಳ್ಳುವಲ್ಲಿ ಅದು ಸಾಧ್ಯವಾಗಿಲ್ಲ.
ನಾವು ಫೇಸ್‌ಬುಕ್‌ನಿಂದಲೂ ಎಣಿಕೆಗಳನ್ನು ರಹಸ್ಯವಾಗಿಡುವ ಆಯ್ಕೆಯನ್ನು ಪರಿಚಯಿಸಲಿದ್ದೇವೆ ಎಂದು ಫೇಸ್‌ಬುಕ್ ನೆಟ್ವರ್ಕ್ನ ವಕ್ತಾರ ತಿಳಿಸಿದ್ದಾರೆ.
ಟ್ವೀಟ್ ಲೈಕ್ಸ್ ಮತ್ತು ರೀಟ್ವೀಟ್ಗಳನ್ನು ಗೌಪ್ಯವಾಗಿಟ್ಟ ನಂತರ ಜನರು ಟ್ವೀಟ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಟ್ವಿಟ್ಟರ್ನ ಮುಖ್ಯಸ್ಥರಾದ ಕೇವನ್ ಬೇಕ್‌ಪೋರ್ ಹೇಳಿದ್ದಾರೆ.