ಪುಣೆ: ಲಸಿಕೆ ತಯಾರಿಕೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆವರಣದಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ಅವಘಡದಿಂದ ಕಂಪನಿಗೆ 1,000 ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಕಂಪನಿಯ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.
ಅಗ್ನಿ ಅವಘಡದಿಂದ ಕೋವಿಡ್ -19 ಲಸಿಕೆ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆ ಘಟಕಗಳಲ್ಲಿ ಯಾವುದೇ ಲಸಿಕೆ ತಯಾರಿಕೆ ಮಾಡುತ್ತಿಲ್ಲ. ಹಾನಿಯ ಪ್ರಮಾಣವು 1,000 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೇಲಿಯೇ ಎದ್ದು ಬೆಳೆ ಮೇಯ್ದರೆ..: ಭ್ರಷ್ಟಾಚಾರ ಆರೋಪಗಳಿಂದ ತತ್ತರಿಸಿದ ಸಿಬಿಐ
ಕೋವಿಶೀಲ್ಡ್ ಉತ್ಪಾದನೆಯ ಮೇಲೂ ಘಟನೆ ಯಾವುದೇ ಪರಿಣಾಮ ಬೀರಿಲ್ಲ. ಕೋವಿಡ್ -19 ವಿರುದ್ಧದ ಎರಡು ಲಸಿಕೆಗಳಲ್ಲಿ ಒಂದಾದ ಭಾರತದ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆಯಲಾಗಿದೆ. ಅಸ್ತಿತ್ವದಲ್ಲಿರುವ ದಾಸ್ತಾನಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಂಪನಿಯು ಕೋವಿಶೀಲ್ಡ್ ಅನ್ನು ಮಂಜ್ರಿಯಲ್ಲಿರುವ ಮತ್ತೊಂದು ಸ್ಥಳದಲ್ಲಿ ಉತ್ಪಾದಿಸುತ್ತಿದೆ. ಅದರ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಆದರ್ ಪೂನವಾಲ್ಲಾ ಹೇಳಿದ್ದಾರೆ.