ನವದೆಹಲಿ: ಲಾಕ್‌ಡೌನ್ ನಡುವೆ ಉದ್ಯೋಗದಾತರು ತಮ್ಮ ಡಿಜಿಟಲ್ ಸಹಿಯನ್ನು ಆನ್‌ಲೈನ್‌ನ ಇ - ಮೇಲ್ ಮೂಲಕ ನೋಂದಾಯಿಸಲು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಅನುಮತಿ ನೀಡಿದೆ ಎಂದು ಕಾರ್ಮಿಕ ಸಚಿವಾಲಯದ ತಿಳಿಸಿದೆ.
ಪ್ರಸ್ತುತ ಉದ್ಯೋಗದಾತರು ತಮ್ಮ ಡಿಜಿಟಲ್ ಸಹಿ ನೋಂದಾಯಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಚೇರಿಗಳಿಗೆ ಹೋಗಬೇಕಾಗಿತ್ತು. ಈಗ ಆನ್‌ಲೈನ್ ಮೂಲಕವೇ ಸಹಿ ಮಾಡಬಹುದಾಗಿದೆ.
ಲಾಕ್‌ಡೌನ್ ಮತ್ತು ಇತರ ಅಡೆ ತಡೆಗಳಿಂದ ಉದ್ಯೋಗದಾತರು ಸಾಮಾನ್ಯ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಪಿಎಫ್‌ಒ ಪೋರ್ಟಲ್‌ನಲ್ಲಿ ತಮ್ಮ ಡಿಜಿಟಲ್ ಸಹಿ ಅಥವಾ ಆಧಾರ್ ಆಧಾರಿತ ಇ - ಚಿಹ್ನೆ ಬಳಸುವಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದೃಢೀಕರಣ, ವರ್ಗಾವಣೆ ಹಕ್ಕಿನ ದೃಢೀಕರಣ ಸೇರಿದಂತೆ ಹಲವು ಕಾರ್ಯಗಳನ್ನು ಉದ್ಯೋಗದಾತರ ಅಧಿಕೃತ ವ್ಯಕ್ತಿಗಳು ತಮ್ಮ ಡಿಜಿಟಲ್ ಸಿಗ್ನೇಚರ್ (ಡಿಎಸ್ಸಿ) ಅಥವಾ ಇಪಿಎಫ್‌ಒ ಪೋರ್ಟಲ್‌ನಲ್ಲಿ ಆಧಾರ್ ಆಧಾರಿತ ಇ - ಸೈನ್ ಬಳಸಿ ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ.
ಡಿಎಸ್ಟಿ / ಇ-ಚಿಹ್ನೆ ಬಳಸಲು ಇಪಿಎಫ್‌ಒನ ಪ್ರಾದೇಶಿಕ ಕಚೇರಿಯಿಂದ ಒಂದು ಬಾರಿ ಅನುಮೋದನೆ ಅಗತ್ಯವಿದೆ. ಆದರೆ, ಲಾಕ್‌ಡೌನ್ ಕಾರಣ ಅನೇಕ ಉದ್ಯೋಗದಾತರು ಒಂದು ಬಾರಿ ನೋಂದಣಿ ವಿನಂತಿಗಾಗಿ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕಾರ್ಯವಿಧಾನ ಇನ್ನಷ್ಟು ಸುಲಭಗೊಳಿಸಲು ಇಪಿಎಫ್‌ಒ ಇ-ಮೇಲ್ ಮೂಲಕ ವಿನಂತಿಗಳನ್ನು ಸ್ವೀಕರಿಸಲು ನಿರ್ಧರಿಸಿದ್ದೇವೆ. ಉದ್ಯೋಗದಾತನು ಸರಿಯಾಗಿ ಸಹಿ ಮಾಡಿದ ವಿನಂತಿಯ ಪತ್ರದ ಸ್ಕ್ಯಾನ್ ಮಾಡಿದ ನಕಲು ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಬಹುದು ಎಂದು ತಿಳಿಸಿದೆ.
ಪ್ರಾದೇಶಿಕ ಕಚೇರಿಗಳ ಅಧಿಕೃತ ಇ-ಮೇಲ್ ವಿಳಾಸಗಳು www.epfindia.gov.in ನಲ್ಲಿ ಲಭ್ಯವಿದೆ.