ನವದೆಹಲಿ: ನೊವೆಲ್ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಉದ್ಯಮಿಗಳು ಮತ್ತು ಬಂಡವಾಳಶಾಹಿ ಸಾಹಸೋದ್ಯಮಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆಯೊಂದನ್ನು ಬರೆದಿದ್ದಾರೆ.
ಅರ್ಬನ್ ಕಂಪನಿಯ ಸಹ ಸಂಸ್ಥಾಪಕ ಕುನಾಲ್ ಷಾ ಮತ್ತು ಕುನಾಲ್ ಬಹ್ಲ್ (ಸ್ನ್ಯಾಪ್‌ಡೀಲ್) ಸೇರಿದಂತೆ 51 ಸ್ಟಾರ್ಟ್ಅಪ್ ಮತ್ತು ವ್ಯವಹಾರಗಳ ಸಾಹಸೋದ್ಯಮಿ ಬಂಡವಾಳಶಾಹಿಗಳು ಹಾಗೂ ಇತರ ಉದ್ಯಮಿಗಳು ಒಗ್ಗೂಡಿ ಈ ಪ್ರಸ್ತಾವನೆ ಸಿದ್ಧಪಡಿಸಿ ಹಲವು ಸಲಹೆಗಳನ್ನು ನೀಡಿದ್ದಾರೆ.
ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಜಪಾನ್‌ನಂತಹ ಮುಂಚೂಣಿ ಹಾಗೂ ಬಲಿಷ್ಠವಾಗಿ ಕಾರ್ಯನಿರ್ವಹಿಸುವ ದೇಶಗಳು ತಡವಾಗಿ ಎಚ್ಚೆತ್ತುಕೊಂಡ ರಾಷ್ಟ್ರಗಳಿಗೆ ಹೋಲಿಸಿದರೆ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಅರಬ್, ಇಟಲಿ, ಫ್ರಾನ್ಸ್ ಮತ್ತು ಅಮೆರಿಕ ಸಮರ್ಥವಾಗಿವೆ ಎಂದು ಉಲ್ಲೇಖಿಸಿದ್ದಾರೆ.
ಮುಖ್ಯವಾಗಿ ಪರಿಣಾಮ ಬೀರುವ ನಗರಗಳಲ್ಲಿ 144ನೇ ಸೆಕ್ಷನ್ ಜಾರಿಯೊಂದಿಗೆ ಸರ್ಕಾರ, 2-3 ವಾರಗಳ ಲಾಕ್‌ಡೌನ್ ಅನ್ನು ಈಗಿನಿಂದಲೇ ವಿಧಿಸಬೇಕು. ನಂತರ ಎರಡನೇ ಲಾಕ್‌ಡೌನ್‌ಗೆ ಸಿದ್ಧವಾಗಬೇಕು. ಪ್ರಯಾಣದ ಮೇಲಿನ ನಿರ್ಬಂಧಗಳು ಮುಂದುವರಿಯಬೇಕು. ನಮಗೆ ಇನ್ನೂ ಹೆಚ್ಚಿನ ಅಗತ್ಯವಿರಬಹುದಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.
ಮೊದಲ ಲಾಕ್‌ಡೌನ್ ಅನ್ನು ಮಾರ್ಚ್ 20ರಿಂದ ಏಪ್ರಿಲ್ 12ರವರೆಗೆ ಜಾರಿಗೆ ತರಬೇಕು. ಅದರ ನಂತರ ಏಪ್ರಿಲ್ 13ರಿಂದ ಮೇ 17ರವರೆಗೆ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮುನ್ನೆಚ್ಚರಿಕೆ ಹಂತವನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.
ಇದರ ಜೊತೆಗೆ ಮೇ 18ರಿಂದ ಮೇ 31ರವರೆಗೆ ಎರಡನೇ ಹಂತದ ಲಾಕ್‌ಡೌನ್ ತಂದು, ಜೂನ್ 1ರಿಂದ ನಿರ್ಬಂಧಗಳನ್ನು ಹಂತ- ಹಂತವಾಗಿ ತೆಗೆದುಹಾಕಬಹುದು ಎಂದಿದ್ದಾರೆ.
-
Collaborated with @_mekin@vivekanandahr @1kunalbahl@kunalb11 @annamalai_k @alokmittal001 @varunjain42 and many other founders to prepare this doc, urging @PMOIndia to act now & decisively to curb COVID-19. Lots of references to @tomaspueyo's great work. https://t.co/T2VtWGQlKL
— Abhiraj Singh Bhal (@abhirajbhal) March 17, 2020 " class="align-text-top noRightClick twitterSection" data="
">Collaborated with @_mekin@vivekanandahr @1kunalbahl@kunalb11 @annamalai_k @alokmittal001 @varunjain42 and many other founders to prepare this doc, urging @PMOIndia to act now & decisively to curb COVID-19. Lots of references to @tomaspueyo's great work. https://t.co/T2VtWGQlKL
— Abhiraj Singh Bhal (@abhirajbhal) March 17, 2020Collaborated with @_mekin@vivekanandahr @1kunalbahl@kunalb11 @annamalai_k @alokmittal001 @varunjain42 and many other founders to prepare this doc, urging @PMOIndia to act now & decisively to curb COVID-19. Lots of references to @tomaspueyo's great work. https://t.co/T2VtWGQlKL
— Abhiraj Singh Bhal (@abhirajbhal) March 17, 2020
ಲಾಕ್ ಡೌನ್ ಸಮಯದಲ್ಲಿ ಜನರು ತಮ್ಮ ಮನೆಯಲ್ಲಿಯೇ ಉಳಿದುಕೊಂಡು ಪ್ರತ್ಯೇಕವಾಗಿ ಉತ್ತಮವಾದ ವೈಯಕ್ತಿಕ ಸ್ವಚ್ಛತಾ ಅಭ್ಯಾಸಗಳನ್ನು ಕೈಗೊಳ್ಳಲು ಅವರಿಗೆ ನಿರಂತರವಾಗಿ ಸಲಹೆ ನೀಡಬೇಕು. ಆಹಾರ, ಔಷಧ, ಆರೋಗ್ಯ ಸೇವೆ, ಸಾರ್ವಜನಿಕ ಸಾರಿಗೆ, ಎಟಿಎಂಗಳಲ್ಲಿ ನಗದು ಲಭ್ಯತೆ ಸೇರಿದಂತೆ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆ ಸರಪಳಿಯನ್ನು ನಿರ್ವಹಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರತಿ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ಕಾರಿ ಸುಸಜ್ಜಿತ ಕೊಠಡಿಗಳನ್ನು ಸ್ಥಾಪಿಸುವುದರ ಜೊತೆಗೆ ಸೋಂಕು ಪರೀಕ್ಷಾ ಪ್ರಕ್ರಿಯೆಯಲ್ಲಿ ಖಾಸಗಿ ವಲಯದವರು ಭಾಗವಹಿಸಲು ಅವಕಾಶ ನೀಡಬೇಕು. ಈ ಮೂಲಕ ಪರೀಕ್ಷಾ ಮೂಲಸೌಕರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.